ಮೈಸೂರು: ಕೊರೊನಾ ಸುಳಿಗೆ ಸಿಲುಕಿದ್ರೆ ಹೊರಬರೋದು ಮಾಮೂಲಿ ವಿಷ್ಯ ಅಲ್ಲ. ಸಾವಿನ ಜೊತೆ ಸೆಣಸಾಡಿ ಗೆದ್ದು ಬರೋದು ಮಹಾಯುದ್ಧವೇ ಸರಿ. ಅಂಥದ್ರಲ್ಲಿ ಜ್ಯುಬಿಲಿಯಂಟ್ ಅನ್ನೋ ಕಂಪನಿಯಿಂದ ಹರಡ್ತಿರೋ ಮಹಾಮಾರಿ ಹಲವರ ಉಸಿರುಗಟ್ಟುತ್ತಿದೆ. ಹಲವ್ರ ದೇಹ ಹೊಕ್ಕು ಭೂಮಿ ಮೇಲೆಯೇ ನರಕ ತೋರಿಸ್ತಿದೆ. ಆದ್ರೆ ಕಂಪನಿ ಮಾತ್ರ ಸೋಂಕು ಬಂದಿದ್ದೇಗೆ ಅನ್ನೋದು ಗೊತ್ತೇ ಇಲ್ಲ ಕೈತೊಳೆದುಕೊಂಡು ಸೈಲೆಂಟ್ ಆಗಿದೆ.
ಫಾರಿನ್ ಟ್ರಿಪ್ ಇಲ್ಲ.. ಚೈನಾದವ್ರ ಟಚ್ ಇಲ್ಲ.. ಹೇಗೆ ವಕ್ಕರಿಸಿತೋ ಗೊತ್ತಿಲ್ಲ.. ಹರಿಡಿದ್ದೇಗೋ ತಿಳೀತಿಲ್ಲ.. ಏನ್ ಮಾಡ್ಬೇಕೋ ಅರ್ಥ ಆಗ್ತಿಲ್ಲ.. ಹೆಮ್ಮಾರಿ ಅಟ್ಟಹಾಸ ನಿಲ್ತಿಲ್ಲ… ಇದು ಒಬ್ಬರ, ಇಬ್ಬರ ಚಿಂತೆಯಲ್ಲ.. ಜ್ಯುಬಿಲಿಯಂಟ್ ಅನ್ನೋ ಕಂಪನಿಯ ಪ್ರತಿಯೊಬ್ಬ ನೌಕರನಿಗೆ ಜೀವಭಯ.. ಪ್ರತಿಯೊಬ್ಬ ಸಿಬ್ಬಂದಿಗೆ ಬಿಟ್ಟು ಬಿಡದೆ ಕಾಡ್ತಿರೋ ಆತಂಕ. ಮೊನ್ನೆ ಜ್ಯುಬಿಲಿಯಂಟ್ನ 9 ಮಂದಿಯ ದೇಹ ಹೊಕ್ಕಿದ ಮಾರಿ, ನಿನ್ನೆ ಮತ್ತೆ ಮೂವರಿಗೆ ಹೊಕ್ಕು ಅಟ್ಟಹಾಸ ಮೆರೀತಿದೆ.
ಜ್ಯುಬಿಲಿಯಂಟ್ನಲ್ಲಿ ಲಂಗರು ಹಾಕಿದ ಕಿಲ್ಲರ್..! ಹೌದು, ನಂಜನಗೂಡಿನ ಜ್ಯುಬಿಲಿಯಂಟ್ ನಂಜು ಎಲ್ಲೆಲ್ಲಿಗೆ ಹರಿಡಿದೆಯೋ ಗೊತ್ತಾಗ್ತಿಲ್ಲ. ಎಲ್ಲಿಂದ ಬಂತು ಅನ್ನೋದ್ರ ತಳಬುಡನೇ ಅರ್ಥವಾಗ್ತಿಲ್ಲ. ಆದ್ರೆ ದಿನದಿಂದ ದಿನಕ್ಕೆ ಕೊರೊನಾದ ಸುಳಿಗೆ ಸಿಲುಕುತ್ತಿರೋರ ಸಂಖ್ಯೆ ಮಾತ್ರ ಒನ್ ಟು ಡಬಲ್ ಆಗ್ತಿದೆ. ನಿನ್ನೆ ಒಂದೇ ದಿನ ಮೂವರಲ್ಲಿ ವಕ್ಕರಿಸಿದ ಕ್ರೂರಿ ರಣಕೇಕೆ ಹಾಕ್ತಿದೆ. ಮೂವರಿಗೆ ಕೂಡ ಜ್ಯುಬಿಲಿಯಂಟ್ ಫ್ಯಾಕ್ಟರಿ ಲಿಂಕ್ನಿಂದ ಸೋಂಕು ಬಂದಿರೋದು ಗೊತ್ತಾಗಿದೆ. ಇದ್ರಲ್ಲಿ ಇಬ್ಬರು ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸಿಬ್ಬಂದಿಯ ಪತ್ನಿಗೂ ವೈರಸ್ ತಗುಲಿದೆ.
ಚೀನಾ ಕಂಟೈನರ್ನಿಂದ ಕೊರೊನಾ ಬಂದಿಲ್ಲ..! ಇಡೀ ಮೈಸೂರಿಗೆ ಮೈಸೂರನ್ನೇ ಪತರಗುಟ್ಟುವಂತೆ ಮಾಡಿದ್ದೇ ಜ್ಯುಬಿಲಿಯಂಟ್ನ ನಂಜು. ಹೀಗಾಗಿ ಜ್ಯುಬಿಲಿಯಂಟ್ ಕಂಪನಿ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿದೆ. ಎರಡು ವಿಚಾರಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದೆ.
ಚೀನಾದಿಂದ ಬಂದ ಕಂಟೈನರ್ನಿಂದ ಸೋಂಕು ಹರಡೇ ಇಲ್ಲ. ಚೀನಾದಿಂದ ತರಿಸಿದ ಕಚ್ಚಾವಸ್ತುವಿನ ಮೂಲಕ ಕೊರೊನಾ ಬಂದಿಲ್ಲ. ಈ ಬಗ್ಗೆ ಪುಣೆಯ ಲ್ಯಾಬ್ನಿಂದ ಬಂದಿರೋ ವರದಿ ಕೂಡ ನೆಗೆಟಿವ್ ಇದೆ. ಇದಿಷ್ಟೇ ಅಲ್ಲದೇ ಫ್ಯಾಕ್ಟರಿಯಲ್ಲಿ ಮೊದಲ ಸೋಂಕಿತ ಅಂದ್ರೆ, 52 ನಂಬರ್ನ ಸೋಂಕಿತ ಕಳೆದ 6 ತಿಂಗಳಿಂದ ವಿದೇಶ ಪ್ರವಾಸಕ್ಕೇ ಹೋಗಿಲ್ಲ. ಇಡೀ ಫ್ಯಾಕ್ಟರಿಯಿಂದ ಯಾರೊಬ್ಬರು ಬರೋಬ್ಬರಿ 6 ತಿಂಗಳಿಂದ ವಿದೇಶ ಪ್ರವಾಸವೇ ಮಾಡಿಲ್ಲ. ಆದ್ರೂ ಕೊರೊನಾ ಹೇಗೆ ಬಂತು ಅನ್ನೋದು ಗೊತ್ತಿಲ್ಲ ಅಂತಾ ಸ್ಪಷ್ಟನೆ ನೀಡಿದೆ.
ಒಟ್ನಲ್ಲಿ ಜ್ಯುಬಿಲಿಯಂಟ್ ಕಂಪನಿ ಏನೋ ಕೊರೊನಾ ಬರೋಕೆ ನಮ್ಮಿಂದ ಏನ್ ತಪ್ಪೇ ಆಗಿಲ್ಲ. ನಾವ್ಯಾರೂ ಫಾರಿನ್ಗೆ ಕಾಲಿಟ್ಟಲ್ಲ ಅಂತಾ ಆರೋಪಗಳಿಗೆ ತೆರೆ ಎಳೆದಿದೆ. ಹೀಗಾಗಿ ಸೋಂಕಿನ ಮೂಲ ಪತ್ತೆಹಚ್ಚೋದೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಆದ್ರೆ ದಿನೇದಿನೆ ಹೆಚ್ಚುತ್ತಿರೋ ಪಾಸಿಟಿವ್ ಕೇಸ್ಗಳಿಂದ ಮೈಸೂರು ಜನರು ನಿದ್ದೆಯಲ್ಲೂ ಬೆಚ್ಚಿಬೀಳ್ತಿರೋದಂತೂ ನಿಜ.