ಮೈಸೂರಿನಲ್ಲಿ ಸೋಂಕಿಗೆ ಕೊರೊನಾ ವಾರಿಯರ್​ ಬಲಿ

  • TV9 Web Team
  • Published On - 15:13 PM, 19 Jul 2020
ಮೈಸೂರಿನಲ್ಲಿ ಸೋಂಕಿಗೆ ಕೊರೊನಾ ವಾರಿಯರ್​ ಬಲಿ

ಮೈಸೂರು: ನಗರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಮಹಾಮಾರಿ ಇದೀಗ ವಾರಿಯರ್ ಒಬ್ಬರ ಬಲಿಪಡೆದಿದೆ. ಸೋಂಕಿಗೆ ತುತ್ತಾಗಿದ್ದ 49 ವರ್ಷದ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅರಣ್ಯ ಸಂಚಾರ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ನಿನ್ನೆಯಷ್ಟೇ ಸೋಂಕು ಪತ್ತೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ. ಮೃತ ಪೇದೆ ಈ ಹಿಂದೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.