ನನಗೆ ಕೊಹ್ಲಿಯೇ ನಾಯಕ, ನಾನು ಉಪನಾಯಕನಷ್ಟೇ: ಅಜಿಂಕ್ಯ ರಹಾನೆ

ರಹಾನೆ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಅಭೂತಪೂರ್ವ ಗೆಲುವು ಸಾಧಿಸಿತ್ತು. ಈ ಗೆಲುವಿನ ನಂತರ ಟೆಸ್ಟ್​​ ಆವೃತ್ತಿಗೆ ರಹಾನೆ ಅವರೇ ನಾಯಕರಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು.

  • TV9 Web Team
  • Published On - 21:29 PM, 26 Jan 2021
ನನಗೆ ಕೊಹ್ಲಿಯೇ ನಾಯಕ, ನಾನು ಉಪನಾಯಕನಷ್ಟೇ: ಅಜಿಂಕ್ಯ ರಹಾನೆ
ವಿರಾಟ್​ ಕೊಹ್ಲಿ-ಅಜಿಂಕ್ಯ ರಹಾನೆ

ವಿರಾಟ್​ ಕೊಹ್ಲಿ ನನ್ನ ನಾಯಕ. ಅವರು ಮರಳಿ ಬಂದಾಗ ನಾಯಕತ್ವ ಬಿಟ್ಟುಕೊಡೋದು ನನ್ನ ಕರ್ತವ್ಯ ಎಂದು ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ರಹಾನೆ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಅಭೂತಪೂರ್ವ ಗೆಲುವು ಸಾಧಿಸಿತ್ತು. ಈ ಗೆಲುವಿನ ನಂತರ ಟೆಸ್ಟ್​​ ಆವೃತ್ತಿಗೆ ರಹಾನೆ ಅವರೇ ನಾಯಕರಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಈ ವಿಚಾರ ರಹಾನೆ ಕಿವಿಗೂ ಬಿದ್ದಿದೆ. ಹೀಗಾಗಿ, ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್ ಯಾವಾಗಲೂ ಟೆಸ್ಟ್ ತಂಡದ ನಾಯಕ ಮತ್ತು ನಾನು ಅವರ ಉಪನಾಯಕ. ವಿರಾಟ್​ ಗೈರಾದಾಗ ತಂಡವನ್ನು ಮುನ್ನಡೆಸುವುದು ನನ್ನ ಕರ್ತವ್ಯ ಮತ್ತು ಟೀಮ್ ಇಂಡಿಯಾದ ಯಶಸ್ಸಿಗೆ ನನ್ನ ಅತ್ಯುತ್ತಮವಾದದನ್ನು ನೀಡುವುದು ನನ್ನ ಜವಾಬ್ದಾರಿ ಎಂದು ರಹಾನೆ ತಿಳಿಸಿದ್ದಾರೆ.

ನಾಯಕನಾಗುವುದು ಮಾತ್ರ ಮುಖ್ಯವಾಗುವುದಿಲ್ಲ. ನಾಯಕನಾಗಿ ಆ ಪಾತ್ರವನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಹೆಚ್ಚು ಮುಖ್ಯ. ಇಲ್ಲಿಯವರೆಗೆ ನಾನು ಯಶಸ್ವಿಯಾಗಿದ್ದೇನೆ. ಭವಿಷ್ಯದಲ್ಲಿಯೂ ನನ್ನ ತಂಡಕ್ಕೆ ಇದೇ ರೀತಿಯ ಫಲಿತಾಂಶಗಳನ್ನು ನೀಡಲು ಪ್ರಯತ್ನಿಸುತ್ತೇನೆ ಎಂದರು ಅಜಿಂಕ್ಯ ರಹಾನೆ.

ಫೆಬ್ರವರಿ 5ರಿಂದ ಭಾರತದಲ್ಲಿ ಇಂಗ್ಲೆಡ್​ ವಿರುದ್ಧದ ಟೆಸ್ಟ್​​ ಪಂದ್ಯ ಆರಂಭಗೊಳ್ಳಲಿದೆ. ವಿರಾಟ್​ ಈ ಪಂದ್ಯಕ್ಕೆ ಕಂಬ್ಯಾಕ್​ ಮಾಡುತ್ತಿದ್ದಾರೆ.

ಆಸಿಸ್ ಸರಣಿ ವಿಜಯ ಎಫೆಕ್ಟ್​: ಮತ್ತೆ ಸುದ್ದಿಯಾದ ನಾಯಕತ್ವ ಬದಲಾವಣೆ, ರಹಾನೆಯೇ ಬೆಸ್ಟ್​ ಅಂತಿವೆ ಅಂಕಿ-ಅಂಶಗಳು..!