ಧಾರಾಕಾರ ಮಳೆಯಿಂದ ಕುಶಾಲನಗರಕ್ಕೆ ಎಂಟ್ರಿ ಕೊಟ್ಟ ಮೊಸಳೆ ಮರಿ!

  • TV9 Web Team
  • Published On - 11:33 AM, 5 Aug 2020
ಧಾರಾಕಾರ ಮಳೆಯಿಂದ ಕುಶಾಲನಗರಕ್ಕೆ ಎಂಟ್ರಿ ಕೊಟ್ಟ ಮೊಸಳೆ ಮರಿ!

ಕೊಡಗು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಡಿಕೇರಿ,ತಲಕಾವೇರಿ, ದಕ್ಷಿಣ ಕೊಡಗು ಹಾಗೂ ಸೋಮವಾರಪೇಟೆ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆಗಳ ಮೇಲೆ ನೀರು ಹರಿಯೋಕೆ ಶುರುವಾಗಿದೆ. ಜೊತೆಗೆ, ನಾಪೋಕ್ಲು ಹಾಗೂ ಭಾಗಮಂಡಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಸಂಪೂರ್ಣವಾಗಿ ಬಂದ್​ ಆಗಿದೆ.

ಇನ್ನು, ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ಮಳೆಯಿಂದ ತಪ್ಪಸಿಕೊಳ್ಳಲು ಮೊಸಳೆ ಮರಿಯೊಂದು ಪಟ್ಟಣಕ್ಕೆ ಎಂಟ್ರಿ ಕೊಟ್ಟಿದೆ. ಕುಶಾಲನಗರದ ವಿವೇಕಾನಂದ ಬಡವಾಣೆಯಲ್ಲಿ ಪ್ರತ್ಯಕ್ಷವಾದ ಮೊಸಳೆ ಮರಿಯನ್ನ ನೋಡಲು ಹಲವಾರು ಸ್ಥಳೀಯರು ಆಗಮಿಸಿದರು.