ಚಿಕ್ಕಮಗಳೂರು: ಟಿಪ್ಪುಇತಿಹಾಸದ ಬಗ್ಗೆ ವಿಶ್ವನಾಥ್ ಹೇಳಿಕೆ ವಿಚಾರ, ವಿಶ್ವನಾಥ್ ಬಹುಶಃ ಅರ್ಧ ಇತಿಹಾಸ ಓದಿದ್ದಾರೆ ಎಂದು ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಟಿಪ್ಪುವಿಗೆ ಎರಡು ಮುಖವಿದೆ. ಆದರೆ ವಿಶ್ವನಾಥ್ ಅವರು ಒಂದು ಮುಖ ಮಾತ್ರ ಓದಿದ್ದಾರೆ. ಒಂದು 1781 ರಿಂದ 1793ರವರೆಗೆ ಟಿಪ್ಪು ತುಂಬಾ ಕ್ರೂರಿ ಆಗಿದ್ದ. ನಂತರ1793 ರಿಂದ 1799ರವರೆಗೆ ಉದಾರಿ ಆಗಿದ್ದ. ಹೀಗಾಗಿ ವಿಶ್ವನಾಥ್, ಟಿಪ್ಪುವಿನ ಎರಡು ಮುಖದ ಅಧ್ಯಯನ ಮಾಡಬೇಕು ಎಂದಿದ್ದಾರೆ.
ಟಿಪ್ಪುವಿನ ಎರಡನೇ ಮುಖದಲ್ಲಿ ಕೊಡವರ ನೋವು, ಕ್ರಿಶ್ಚಿಯನ್ನರ ಮಾರಣ ಹೋಮದ ಕಥೆ ತಿಳಿಯುತ್ತೆ. ವಿಶ್ವನಾಥ್ ಅವರೇ, ಚರಿತ್ರೆಯನ್ನ ಪೂರ್ಣ ಓದಿ ಎಂದು ಸಿಟಿ ರವಿ ವಿಶ್ವನಾಥ್ಗೆ ಸಲಹೆ ಮಾಡಿದ್ದಾರೆ. ಅಷ್ಟೇ ಅಲ್ಲ ಅವರ ಮಕ್ಕಳು ಕೂಡಾ ಟಿಪ್ಪುವಿನ ಇತಿಹಾಸ ಓದಬೇಕು ಎಂದಿದ್ದಾರೆ.
ಆಗ ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಹೇರಿದ್ದು ಯಾರು ಎಂಬುದು ಮಕ್ಕಳಿಗೆ ತಿಳಿಯುತ್ತೆ. ಆಗ ಕನ್ನಡ ಪ್ರೇಮಿ ಟಿಪ್ಪು ಅಂತ ಘೋಷಣೆ ಕೂಗುವವರ ಬಾಯಿ ಮುಚ್ಚುತ್ತೆ ಎಂದು ಖಾರವಾಗಿಯೇ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.