WITT TV9 Global Summit 2024: ಸೈಬರ್ ಮತ್ತು ಡಾಟಾ ಸೆಕ್ಯುರಿಟಿ ಬ್ಯಾಂಕಿಂಗ್ ಉದ್ಯಮದ ಅತಿದೊಡ್ಡ ಸವಾಲುಗಳು: ರಜನೀಶ್ ಕುಮಾರ್
WITT TV9 Global Summit 2024: 1984 ರಲ್ಲಿ ಎಸ್ ಬಿಐ ಎಲೆಕ್ಟ್ರಾನಿಕ್ ಟೈಪರೈಟ್ ಒಂದನ್ನು ರೂ. 75,000ಗೆ ಖರೀದಿಸಿತ್ತು. ಅಲ್ಲಿಂದಲೇ ಬ್ಯಾಂಕ್ ಗಳಲ್ಲಿ ಕಂಪ್ಯೂಟರ್ ಗಳ ಪ್ರವೇಶವಾಯಿತು. ಆ ಕಾಲದಲ್ಲಿ ಖಾಸಗಿ ಬ್ಯಾಂಕ್ ಗಳು ಭಾರತದಲ್ಲಿರಲಿಲ್ಲ, 1991 ರಲ್ಲಿ ಭಾರತದಲ್ಲಿ ಜಾಗತೀಕರಣದ ಅಬ್ಬರ ಆರಂಭಗೊಂಡ ಬಳಿಕ ಅವು ನಮ್ಮ ದೇಶದಲ್ಲಿ ಒಂದೊಂದಾಗಿ ಕಾಲಿರಿಸಿದವು ಮತ್ತು ಬ್ಯಾಂಕಿಂಗ್ ಉದ್ಯಮದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗತೊಡಗಿತು ಎಂದು ಕುಮಾರ್ ಹೇಳಿದರು.
ದೆಹಲಿ: ಟಿವಿ9 ನೆಟ್ವರ್ಕ್ ರಾಷ್ಟ್ರದ ರಾಜಧಾನಿಯಲ್ಲಿ ಆಯೋಜಿಸಿರುವ 3-ದಿನಗಳ ವ್ಹಾಟ್ ಇಂಡಿಯ ಥಿಂಕ್ಸ್ ಟುಡೇ (What India Thinks Today) ಜಾಗತಿಕ ಶೃಂಗಸಭೆಯ ಎರಡನೇ ದಿನ ಫಿನ್ಟೆಕ್ 3.0 ಸವಾಲುಗಳು ಮತ್ತು ಅವಕಾಶಗಳು ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತಾಡಿದ ಭಾರತೀಯ ಸ್ಟೇಟ್ ಬ್ಯಾಂಕ್ ಮಾಜಿ ಅಧ್ಯಕ್ಷ ಭಾರತ್ ಪೇ ಚೇರ್ಮನ್ ರಜನೀಶ್ ಕುಮಾರ್ (Rajinish Kumar), ಬ್ಯಾಂಕಿಂಗ್ ಉದ್ಯಮ (banking sector) ನಿರಂತರವಾಗಿ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದರೂ ಪ್ರತಿಬಾರಿ ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಮತ್ತು ಕ್ಷಮತೆ ಪ್ರದರ್ಶಿಸಿದೆ ಎಂದು ಹೇಳಿದರು. 1980 ರಲ್ಲಿ ತಾವು ಎಸ್ ಬಿ ಐ ಸೇರಿದಾಗ ಪ್ರತಿ ಕೆಲಸ ಮ್ಯಾನುಯಲ್ಲಾಗಿ ನಡೆಯುತಿತ್ತು ಆದರೆ ಕಳೆದ ನಾಲ್ಕೂವರೆ ದಶಕಗಳ ಆವಧಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಬ್ಯಾಂಕಿಂಗ್ ಉದ್ಯಮ ಕಂಡಿದೆ. 1984 ರಲ್ಲಿ ಎಸ್ ಬಿಐ ಎಲೆಕ್ಟ್ರಾನಿಕ್ ಟೈಪರೈಟ್ ಒಂದನ್ನು ರೂ. 75,000ಗೆ ಖರೀದಿಸಿತ್ತು. ಅಲ್ಲಿಂದಲೇ ಬ್ಯಾಂಕ್ ಗಳಲ್ಲಿ ಕಂಪ್ಯೂಟರ್ ಗಳ ಪ್ರವೇಶವಾಯಿತು. ಆ ಕಾಲದಲ್ಲಿ ಖಾಸಗಿ ಬ್ಯಾಂಕ್ ಗಳು ಭಾರತದಲ್ಲಿರಲಿಲ್ಲ, 1991 ರಲ್ಲಿ ಭಾರತದಲ್ಲಿ ಜಾಗತೀಕರಣದ ಅಬ್ಬರ ಆರಂಭಗೊಂಡ ಬಳಿಕ ಅವು ನಮ್ಮ ದೇಶದಲ್ಲಿ ಒಂದೊಂದಾಗಿ ಕಾಲಿರಿಸಿದವು ಮತ್ತು ಬ್ಯಾಂಕಿಂಗ್ ಉದ್ಯಮದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗತೊಡಗಿತು ಎಂದು ಕುಮಾರ್ ಹೇಳಿದರು.
ಫಿನ್ಟೆಕ್ ಉದ್ಯಮದಲ್ಲಿ ಸೈಬರ್ ಹ್ಯಾಕರ್ ಗಳ ಹಾವಳಿಯಿಂದ ತೃತೀಯ ರಾಷ್ಟ್ರಗಳು ತತ್ತರಿಸುವಂಥ ಸ್ಥಿತಿ ನಿರ್ಮಾಣವಾಗಿದೆ, ಹೂಡಿಕೆಗಳಲ್ಲಿ ಶೇಕಡಾ 30 ರಷ್ಟು ಹ್ಯಾಕರ್ ಗಳ ಪಾಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರ್, ಸೈಬರ್ ಮತ್ತು ಡಾಟಾ ಸೆಕ್ಯುರಿಟಿ ಬ್ಯಾಂಕಿಂಗ್ ವ್ಯವಸ್ಥೆಯ ಅತಿ ದೊಡ್ಡ ಸವಾಲುಗಳಾಗಿವೆ ಹಾಗಾಗಿ ವಿಷಯವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದರು. ಭಾರತದಲ್ಲಿ ಬಳಕೆದಾರಿಕೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದಿದ್ದರೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದಂತೆ, ಹೂಡಿಕೆ ಮತ್ತು ಮೂಲ ಸೌಕರ್ಯಗಳಲ್ಲಿ 4 ಪಟ್ಟು ವೃದ್ಧಿಯಾಗಿದೆ ಎಂದು ಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ