ಅಲಿಬಾಗ್‌ಗೆ ಅಪ್ಪಳಿಸಿಯೇ ಬಿಟ್ತು Cyclone Nisarga, ಪರಿಸ್ಥಿತಿ ಹೇಗಿದೆ?

  • TV9 Web Team
  • Published On - 13:32 PM, 3 Jun 2020
ಅಲಿಬಾಗ್‌ಗೆ ಅಪ್ಪಳಿಸಿಯೇ ಬಿಟ್ತು Cyclone Nisarga, ಪರಿಸ್ಥಿತಿ ಹೇಗಿದೆ?

ಮಹಾರಾಷ್ಟ್ರ: ತೀವ್ರ ಸ್ವರೂಪದ ನಿಸರ್ಗ ಸೈಕ್ಲೋನ್ ನಿರೀಕ್ಷೆಯಂತೆ ಮುಂಬೈ ಬಳಿಯ ಅಲಿಬಾಗ್ ತೀರಕ್ಕೆ ಅಪ್ಪಳಿಸಿದೆ. ಮಹಾರಾಷ್ಟ್ರದ ರತ್ನಗಿರಿ, ರಾಯಘಡದಲ್ಲಿ ಭಾರಿ ಮಳೆಯಾಗುತ್ತಿದೆ. 129 ವರ್ಷಗಳ ಬಳಿಕ ಮುಂಬೈಗೆ ಸೈಕ್ಲೋನ್ ಅಪ್ಪಳಿಸಿದೆ.

ಮಹಾರಾಷ್ಟ್ರದ ಕರಾವಳಿ ತೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂಬೈನ ಕೋಲಬಾದಲ್ಲಿ ಗಂಟೆಗೆ 72 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ರೇಡಿಯೋ, ಬ್ಯಾಟರಿ ಆಪರೇಟೆಡ್ ಉಪಕರಣ ಬಳಸುವಂತೆ ಮಹಾರಾಷ್ಟ್ರ ಜನರಿಗೆ ಸಿಎಂ ಉದ್ದವ್ ಠಾಕ್ರೆ ಸೂಚನೆ ನೀಡಿದ್ದು, ಚಂಡಮಾರುತ ಅಪ್ಪಳಿಸಿರುವಾಗ ವಿದ್ಯುತ್ ಉಪಕರಣಗಳನ್ನು ಬಳಸದಂತೆ ಸೂಚಿಸಿದ್ದಾರೆ.

ನಿಸರ್ಗ ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 50,000 ಮಂದಿ ಹಾಗೂ ದಮನ್‌ನ ಸುಮಾರು 4,000 ನಿವಾಸಿಗಳ ಸ್ಥಳಾಂತರ ಮಾಡಲಾಗಿದೆ. ಇನ್ನು, ನಿಸರ್ಗ ಚಂಡಮಾರುತ ಹಿನ್ನೆಲೆ ಮುಂಬೈ ಮೃಗಾಲಯದ ಪ್ರಾಣಿಗಳನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.