ದಿನಭವಿಷ್ಯ | ಜನವರಿ 21, 2021

ಜನವರಿ 21, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ.

  • TV9 Web Team
  • Published On - 6:18 AM, 21 Jan 2021
ದಿನಭವಿಷ್ಯ | ಜನವರಿ 21, 2021
ದಿನ ಭವಿಷ್ಯ

ನಿತ್ಯ ಪಂಚಾಂಗ: ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಗುರುವಾರ, ಜನವರಿ 21, 2021. ಅಶ್ವಿನಿ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1.50 ರಿಂದ ಇಂದು ಸಂಜೆ 3.14 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.49. ಸೂರ್ಯಾಸ್ತ: ಸಂಜೆ 6.4.

ತಾ. 21-01-2021 ರ ಗುರುವಾರದ ರಾಶಿ ಭವಿಷ್ಯ

ಮೇಷ: ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವದು. ಶುಭ ಸಂಖ್ಯೆ: 6

ವೃಷಭ: ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪಧನಲಾಭವಾದರೂ ಹಳೆಯ ಸಾಲ ತೀರುವದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 9

ಮಿಥುನ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು. ಶುಭ ಸಂಖ್ಯೆ: 4

ಕರ್ಕ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ.ದೂರಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 1

ಸಿಂಹ: ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ.ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ. ಶುಭ ಸಂಖ್ಯೆ: 3

ಕನ್ಯಾ: ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಶುಭ ಸಂಖ್ಯೆ: 7

ತುಲಾ: ಕೈಹಾಕಿದ ಕೆಲಸಗಳು ನಿರಾತಂಕವಾಗಿ ಮುಂದುವರೆಯುವವು. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವದು. ಹೊಸ ಯೋಜನೆಗಳಿಗೆ ಚಾಲನೆ ದೊರೆಯುವದು. ಶುಭ ಸಂಖ್ಯೆ: 8

ವೃಶ್ಚಿಕ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವದು. ಶುಭ ಸಂಖ್ಯೆ: 2

ಧನು: ಬರುವ ಕಷ್ಟಗಳನ್ನು ಎದುರಿಸಿ ಸಫಲತೆಯನ್ನು ಹೊಂದುವಿರಿ. ಭಾಗ್ಯವೃದ್ಧಿಯಾಗುವ ಯೋಗವಿದೆ.ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಶುಭ ಸಂಖ್ಯೆ: 5

ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೊಟ್ಟಸಾಲ ಮರುಪಾವತಿಯಾಗುವದು.. ಶುಭ ಸಂಖ್ಯೆ: 1

ಕುಂಭ: ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವದು. ಅಡೆತಡೆಗಳ ನಿವಾರಣೆ ಯಾಗುವದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವದಿಲ್ಲ. ಹಿರಿಯರ ಸಲಹೆ ದೊರೆಯುವದು. ಶುಭ ಸಂಖ್ಯೆ: 7

ಮೀನ: ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 6

ಬಸವರಾಜ ಗುರೂಜಿ

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)