ಬೆಳಗಾವಿ: ಉಪ ಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ತಮ್ಮ ಖಾಸಗಿ ವಾಹನಕ್ಕೆ ಸರ್ಕಾರಿ ಬಸ್ ಡಿಪೋದಲ್ಲಿ ಡೀಸೆಲ್ ಹಾಕಿಸಿಕೊಂಡಿರುವ ಘಟನೆ ಬೆಳಗಾವಿಯ NWKRTC ಡಿಪೋ ನಂಬರ್ ಮೂರರಲ್ಲಿ ನಡೆದಿದೆ.
ಮೊದಲೇ ಕೊರೊನಾ ಹೊಡೆತ, ಜೊತೆಗೆ ಡೀಸೆಲ್ ದರ ಏರಿಕೆ.. ಆದರೂ ಸಚಿವರಿಗೆ ‘ಉಚಿತ’ ಡೀಸೆಲ್
ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ
ಈಗಾಗಲೇ ಕೊರೊನಾ ಸಂಕಷ್ಟದಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಸಾರಿಗೆ ಇಲಾಖೆಯ ಸಚಿವ ಲಕ್ಷ್ಮಣ್ ಸವದಿ, ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆಗೆ ಬೆಳಗಾವಿಯ ಡಿಪೋ ನಂಬರ್ 3ಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮ ಖಾಸಗಿ ವಾಹನಕ್ಕೆ ಲಕ್ಷ್ಮಣ್ ಸವದಿ ಅವರ ಕಾರು ಚಾಲಕ ಡಿಪೋದಲ್ಲಿನ ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ಹಾಕಿಸಿಕೊಂಡಿದ್ದಾರೆ.
ಸವದಿ ಕಾರು ಚಾಲಕನ ಈ ನಡೆ ಸಾರ್ವಜನಿಕರ ಅಸಮಾಧಾನಕ್ಕೆ ನೀರೆರೆದಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 78 ರೂ ಆಗಿದೆ. ಸವದಿ ಅವರ ಖಾಸಗಿ ವಾಹನಕ್ಕೆ 44 ಲೀಟರ್ ಡೀಸೆಲ್ ಹಾಕಲಾಗಿದೆ. ಹೀಗಾಗಿ 44 ಲೀಟರ್ ಡೀಸೆಲ್ಗೆ 3,432 ರೂ ಆಗುತ್ತದೆ ಎಂದು ಸಾರ್ವಜನಿಕರು ಲಕ್ಷ್ಮಣ್ ಸವದಿ ವಿರುದ್ಧ ಕಿಡಿಕಾರಿದ್ದಾರೆ.