ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌

  • TV9 Web Team
  • Published On - 14:05 PM, 1 Sep 2020
ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ.

ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ ನೀಡಿದೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್ಸ್‌ಗಳಿಗಾಗಿ ಭಾರತ 2,580 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಗತ್ಯ ಮಂಜೂರಾತಿ ನೀಡಿದ್ದಾರೆ.

ಎಲ್ಲವೂ ಅಂದು ಕೊಂಡಂತೆ ನಡೆದ್ರೆ 2024ಕ್ಕೆ ಈ ಪಿನಾಕಾ ಮಲ್ಟಿಪಲ್‌ ರಾಕೆಟ್‌ ಲಾಂಚರ್ಸ್‌ ಭಾರತೀಯ ಸೇನೆ ಸೇರಿಕೊಳ್ಳಲಿವೆ. ಶತೃಗಳ ಚಲನವಲನಗಳನ್ನು ಮತ್ತು ಅವರ ಸೈನ್ಯದ ಗತಿಯನ್ನು ಗುರಿಯಾಗಿಟ್ಟುಕೊಂಡು ರಾಕೆಟ್‌ ದಾಳಿ ನಡೆಸಲು ಈ ಪಿನಾಕಾ ಬಹು ಉಪಯೋಗಿಯಾಗಲಿದೆ.

ಹೀಗಾಗಿ ಇನ್ನು ಮುಂದೆ ಭಾರತದೊಂದಿಗೆ ತಗಾದೆ ತೆಗೆಯುವುದಕ್ಕಿಂತ ಮೊದಲು ಶತ್ರಗಳು ಹತ್ತು ಬಾರಿ ಯೋಚಿಸುವ ಕಾಲ ಸನ್ನಿಹಿತವಾಗುತ್ತಿದೆ.