ಎಲ್ಲಾ ಪೊಲೀಸ್​ ಸಿಬ್ಬಂದಿಗೆ ವಾರದ ರಜೆ ಕಡ್ಡಾಯವಾಗಿ ನೀಡಬೇಕು -DG & IGP ಪ್ರವೀಣ್ ಸೂದ್​ ಸೂಚನೆ

ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ DG & IGP ಪ್ರವೀಣ್ ಸೂದ್​ರಿಂದ ಸುತ್ತೋಲೆ ಹೊರಡಿಸಲಾಗಿದೆ. ಸೂದ್​ರಿಂದ ನಗರ ಪೊಲೀಸ್ ಆಯುಕ್ತರು, ಎಲ್ಲಾ ವಲಯಗಳ IGP ಮತ್ತು ಎಲ್ಲಾ SPಗಳಿಗೆ ಸೂಚನೆ ನೀಡಿದ್ದಾರೆ.

  • TV9 Web Team
  • Published On - 17:28 PM, 28 Jan 2021
ಎಲ್ಲಾ ಪೊಲೀಸ್​ ಸಿಬ್ಬಂದಿಗೆ ವಾರದ ರಜೆ ಕಡ್ಡಾಯವಾಗಿ ನೀಡಬೇಕು -DG & IGP ಪ್ರವೀಣ್ ಸೂದ್​ ಸೂಚನೆ
ಪ್ರವೀಣ್​ ಸೂದ್​

ಬೆಂಗಳೂರು: ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ DG & IGP ಪ್ರವೀಣ್ ಸೂದ್​ರಿಂದ ಸುತ್ತೋಲೆ ಹೊರಡಿಸಲಾಗಿದೆ. ಸೂದ್​ರಿಂದ ನಗರ ಪೊಲೀಸ್ ಆಯುಕ್ತರು, ಎಲ್ಲಾ ವಲಯಗಳ IGP ಮತ್ತು ಎಲ್ಲಾ SPಗಳಿಗೆ ಸೂಚನೆ ನೀಡಿದ್ದಾರೆ.

ತುರ್ತು ಪರಿಸ್ಥಿತಿ ಬಿಟ್ಟು ಎಲ್ಲ ಸಂದರ್ಭದಲ್ಲಿ ವಾರದ ರಜೆ‌ ಕಡ್ಡಾಯವಾಗಿ ನೀಡಬೇಕು. ಅಂದ ಹಾಗೆ, ಈ ಹಿಂದೆಯೂ ವಾರದ ರಜೆ ಕಡ್ಡಾಯಗೊಳಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಠಾಣಾಧಿಕಾರಿಗಳು ವಾರದ ರಜೆಯನ್ನು ನೀಡುತ್ತಿಲ್ಲ ಎಂದು ಕೆಲ ಸಿಬ್ಬಂದಿ ಪ್ರವೀಣ್ ಸೂದ್​ಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ, ಇದೀಗ ಮತ್ತೊಮ್ಮೆ ವಾರದ ರಜೆ ಕಡ್ಡಾಯಗೊಳಿಸುವಂತೆ ನಗರ ಪೊಲೀಸ್ ಆಯುಕ್ತರು, ವಲಯ IGP ಮತ್ತು ಜಿಲ್ಲಾ SPಗಳಿಗೆ ಪ್ರವೀಣ್​ ಸೂದ್​ ಸೂಚನೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ 9ನೇ ತರಗತಿ, ಪ್ರಥಮ ಪಿಯು ತರಗತಿ ಆರಂಭ.. ಯಾವಾಗಿನಿಂದ ಗೊತ್ತಾ?