‘ಸದ್ಯ ಅವರು ಕೇರಳಕ್ಕೆ ಹೋಗಿದ್ದಾರೆ.. ಕರೆ ಮಾಡಿದೆ, ಸ್ವೀಕರಿಸಿಲ್ಲ’

  • Updated On - 5:41 pm, Tue, 15 September 20
‘ಸದ್ಯ ಅವರು ಕೇರಳಕ್ಕೆ ಹೋಗಿದ್ದಾರೆ.. ಕರೆ ಮಾಡಿದೆ, ಸ್ವೀಕರಿಸಿಲ್ಲ’

ಬೆಂಗಳೂರು: ದಿಗಂತ್ ಐಂದ್ರಿತಾ ದಂಪತಿಗೆ CCB ನೋಟಿಸ್ ನೀಡಿರುವ ವಿಚಾರವಾಗಿ ನಟ ದಿಗಂತ್ ತಾಯಿ ಮಲ್ಲಿಕಾ ಕೃಷ್ಣಮೂರ್ತಿ ಟಿವಿ 9ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Drugs ಕೇಸ್ ಬಯಲಾಗ್ತಿದ್ದಂತೆ ಬೆಂಗಳೂರು ತೊರೆದ್ರಾ ಌಂಡಿ-ದಿಗಂತ್​?
ನಮ್ಮ ಮಗ ಹಾಗೂ ಸೊಸೆ ಆ ರೀತಿ ಭಾಗಿಯಾಗಿಲ್ಲ. ನಮ್ಮದು ಸಾಂಪ್ರದಾಯಿಕ ಕುಟುಂಬ ಅಂತಾ ಮಲ್ಲಿಕಾ ಕೃಷ್ಣಮೂರ್ತಿ ಹೇಳಿದ್ದಾರೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಬಹುದು. ಆದ್ರೆ ಅವರಿಬ್ಬರು ಹೇಗೆ ಅನ್ನೋದು ನಮಗೆ ಗೊತ್ತಿದೆ. ಡ್ರಗ್ಸ್ ಬಗ್ಗೆ ಅವರ ಪಾತ್ರ ಏನು ಇರೋದಿಲ್ಲ ಅಂತಾ ಸಹ ನನಗೆ ಗೊತ್ತಿದೆ ಎಂದು ಮಲ್ಲಿಕಾ ಹೇಳಿದ್ದಾರೆ.

ಸದ್ಯ ಅವರು ಕೇರಳಕ್ಕೆ ಹೋಗಿದ್ದಾರೆ. ನಾನು ಕರೆ ಮಾಡಿದೆ ಆದರೆ ಅವರು ಸ್ವೀಕರಿಸಿಲ್ಲ. ಆದ್ರೆ ಇದರಿಂದ ಅವರು ಹೊರಬರುತ್ತಾರೆ ಅಂತಾ ದಿಗಂತ್ ತಾಯಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಐಂದ್ರಿತಾ-ದಿಗಂತ್ ದಂಪತಿಗೂ CCB ಬುಲಾವ್​ ಬಂತು