ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ, ಅಕ್ಷಯ್ ಆರತಕ್ಷತೆ: ಗಣ್ಯಾತಿಗಣ್ಯರಿಂದ ನವದಂಪತಿಗೆ ಶುಭಹಾರೈಕೆ

ಸ್ಯಾಂಡಲ್​ವುಡ್ ನಟ ರಮೇಶ್ ಅರವಿಂದ್ ಪುತ್ರಿಯ ಆರತಕ್ಷತೆ ಸಮಾರಂಭವು ಇಂದು ನೆರವೇರಿತು. ನಗರದ ಖಾಸಗಿ ಹೋಟೆಲ್​ನಲ್ಲಿ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿತ್ತು.

  • TV9 Web Team
  • Published On - 23:22 PM, 16 Jan 2021
ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ, ಅಕ್ಷಯ್ ಆರತಕ್ಷತೆ: ಗಣ್ಯಾತಿಗಣ್ಯರಿಂದ ನವದಂಪತಿಗೆ ಶುಭಹಾರೈಕೆ
ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ, ಅಕ್ಷಯ್ ಆರತಕ್ಷತೆ ಸಮಾರಂಭ

ಬೆಂಗಳೂರು: ಸ್ಯಾಂಡಲ್​ವುಡ್ ನಟ ರಮೇಶ್ ಅರವಿಂದ್ ಪುತ್ರಿಯ ಆರತಕ್ಷತೆ ಸಮಾರಂಭವು ಇಂದು ನೆರವೇರಿತು. ನಗರದ ಖಾಸಗಿ ಹೋಟೆಲ್​ನಲ್ಲಿ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್ ಡಿಸೆಂಬರ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆರತಕ್ಷತೆಗೆ ರಾಜಕಾರಣಿಗಳು ಹಾಗೂ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ನವಜೋಡಿಗೆ ಶುಭಹಾರೈಸಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಶುಭ ಹಾರೈಸಿದರು.