ಕೈ ಶಾಸಕರಿಗೆ ಸಿದ್ದರಾಮಯ್ಯರೇ ಬೇಕು ಅನ್ನೋ ‘ಮುನಿ’ ಏಟಿಗೆ ಡಿಕೆಶಿ ತಿರುಗೇಟು!

  • TV9 Web Team
  • Published On - 15:06 PM, 25 Oct 2020
ಕೈ ಶಾಸಕರಿಗೆ ಸಿದ್ದರಾಮಯ್ಯರೇ ಬೇಕು ಅನ್ನೋ ‘ಮುನಿ’ ಏಟಿಗೆ ಡಿಕೆಶಿ ತಿರುಗೇಟು!

ಬೆಂಗಳೂರು: ಮುನಿರತ್ನ ಆದಷ್ಟು ಬೇಗ ಕೆಂಪೇಗೌಡರ ಇತಿಹಾಸದ ಬಗ್ಗೆ ಇರುವ ಪುಸ್ತಕವನ್ನು ನನಗೆ ಗಿಫ್ಟ್ ನೀಡಲಿ. ನಾನು ಅವರ ಸಲಹೆ ಸ್ವೀಕರಿಸುತ್ತೇನೆ. ನನಗೆ ರಾಜಕೀಯದಲ್ಲಿ ಈ ವಿದ್ಯೆನೂ ಇದೆ ಅಂತಾ ಗೊತ್ತಿರಲಿಲ್ಲ. ಮುನಿರತ್ನಗೆ ಒಳ್ಳೆದಾಗಲಿ ಎಂದು ಮುನಿರತ್ನ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

‘ನಾನು ಕೂಡ ಸಿದ್ದರಾಮಯ್ಯರ ಜೊತೆಯೇ ಇದ್ದೇನೆ’
‘ಕೈ’ ಶಾಸಕರು ಸಿದ್ದರಾಮಯ್ಯ ಜೊತೆ ಇದ್ದಾರೆಂಬ ಮುನಿರತ್ನ ಹೇಳಿಕೆಗೆ ಶಿವಕುಮಾರ್​ ಹೌದು ನಾನು ಕೂಡ ಸಿದ್ದರಾಮಯ್ಯರ ಜೊತೆಯೇ ಇದ್ದೇನೆ. ಸಿದ್ದರಾಮಯ್ಯನವರೇ ನಮ್ಮ ನಾಯಕರು. ಅವರೇ ನಮ್ಮ ಶಾಸಕಾಂಗ ಪಕ್ಷದ ನಾಯಕರು. ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಜೊತೆ ಇದ್ದೇವೆ ಎಂದು ಟಾಂಗ್ ಕೊಟ್ಟರು.

‘ಹಬ್ಬದ ದಿನ ನನ್ನ ಬಗ್ಗೆ ಮಾತಾಡಿದ್ದಾರೆ’
ಜೊತೆಗೆ, ಅಲ್ಪಸಂಖ್ಯಾತರ ವೋಟರ್ ಐಡಿ ಕಲೆಕ್ಟ್ ಮಾಡುತ್ತಿದ್ದಾರೆ. ಮತದಾನವನ್ನು ತಡೆಯುವುದು ಅವರ ಉದ್ದೇಶವಾಗಿದೆ. ಹೀಗಾಗಿ, ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾವು ಕಾಂಗ್ರೆಸ್ ಬಿಡಲು ಡಿಕೆಶಿ ಕಾರಣವೆಂಬ ಸಚಿವ S.T.ಸೋಮಶೇಖರ್ ಹೇಳಿಕೆಗೆ ಹಬ್ಬದ ದಿನ ನನ್ನ ಬಗ್ಗೆ ಮಾತಾಡಿದ್ದಾರೆ, ಬಹಳ ಸಂತೋಷ. ಅವರಿಗೆಲ್ಲಾ ಆದಷ್ಟು ಬೇಗ ಪ್ರಮೋಷನ್ ಸಿಗಲಿ. ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಪ್ರಚಾರ ಸಿಗುತ್ತದೆ. ನನಗೆ, ಸಿದ್ದರಾಮಯ್ಯಗೆ ಮಾರ್ಕೆಟ್‌ನಲ್ಲಿ ಒಳ್ಳೆಯ ಬೆಲೆ ಇದೆ. ನನ್ನ ಬಗ್ಗೆ, ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ರೆ ಪ್ರಚಾರ ಸಿಗುತ್ತೆ. ಹೀಗಾಗಿ ನಮ್ಮ ಬಗ್ಗೆ ಮಾತಾಡ್ತಾರೆ, ಅವರಿಗೆ ಒಳ್ಳೇದಾಗಲಿ ಎಂದು ಹೇಳಿದರು.
‘ಡಿಕೆಶಿ ನಾಯಕತ್ವ ಬೇಕು ಅಂತಾ ಕಾಂಗ್ರೆಸ್​ನ ಒಬ್ರೂ ಹೇಳಲ್ಲ.. ಸಿದ್ದರಾಮಯ್ಯನೇ ಬೇಕು ಅಂತಾರೆ’