ಬಂದೇ ಬಿಟ್ಟ ಡಾಕ್ಟರ್​ ಗಣೇಶ.. ಮೂಷಕ ವಾಹನ ಸೈನ್ಯವೂ ಜೋರಾಗಿದೆ! ಎಲ್ಲಿ?

  • TV9 Web Team
  • Published On - 9:52 AM, 3 Aug 2020
ಬಂದೇ ಬಿಟ್ಟ ಡಾಕ್ಟರ್​ ಗಣೇಶ.. ಮೂಷಕ ವಾಹನ ಸೈನ್ಯವೂ ಜೋರಾಗಿದೆ! ಎಲ್ಲಿ?

ಬೆಂಗಳೂರು: ಈ ಭೂಮಿ ಮೇಲೆ ಮಹಾಮಾರಿ ಕೊರೊನಾ ಕಾಣಿಸಿಕೊಳ್ಳದ ಜಾಗವೇ ಇಲ್ಲ ಅನ್ನುವಷ್ಟಿದೆ ಅದರ ಹಾವಳಿ. ಕೊರೊನಾ ವಿರುದ್ಧದ ಸಂಗ್ರಾಮವೂ ವಿಶ್ವದೆಲ್ಲೆಡೆ ವ್ಯಾಪಕಾಗಿ ನಡೆದಿದೆ. ಈ ಮಧ್ಯೆ, ಸಾಂಪ್ರದಾಯಿಕ ಭಾರತದಲ್ಲಿ ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸಾಲು ಗರಿಗಟ್ಟಿದೆ. ಆದ್ರೆ ಅದೇ ಕೊರೊನಾ ಕ್ರಿಮಿ ಹಬ್ಬಗಳ ಸಂಭ್ರಮಕ್ಕೆ ಕಡಿವಾಣ ಹಾಕಿದೆ.

ಹಸ್ತದಲ್ಲಿ ಮೋದಕದ ಬದಲು..ಸ್ಟೆಥಾಸ್ಕೋಪ್: ಮೂಷಕ ವಾಹನ ಸೈನ್ಯವೂ ಜೋರಾಗಿದೆ
ಈ ಮಧ್ಯೆ ಈ ಬಾರಿಯ ಗಣೇಶನ ಹಬ್ಬ ಇದೇ 22ರಂದು ಶನಿವಾರ ಬಂದಿದೆ. ಗಣೇಶ ಬಂದ ಅದ್ರೆ ಸಂಭ್ರಮ ಇದ್ದೇ ಇರುತ್ತದೆ. ಆದ್ರೆ ಈ ಬಾರಿ ಗಣೇಶ ಪರಿಸ್ಥಿತಿಗೆ ತಕ್ಕಂತೆ ವೈದ್ಯನಾಗಿಯೂ ಅವತರಿಸಿದ್ದಾನೆ. ಬೆಂಗಳೂರಿನಲ್ಲಿ ಗಣೇಶನ ವಿಗ್ರಹ ತಯಾರಕರು ಕಾಲಾಯ ತಸ್ಮೈನಮಃ ಎಂದು ಗಣೇಶನ ಕೈಗೆ ಸ್ಟೆಥಾಸ್ಕೋಪ್ ಕೊಟ್ಟು, PPE Kit ಹಾಕಿಸಿ, ಭಕ್ತರನ್ನು ವಿಚಾರಿಸಿಕೊಂಡು ಬಾಪ್ಪ ಗಣೇಶಬಪ್ಪಾ ಎಂದಿದ್ದಾರೆ. ಮೂಷಕ ವಾಹನ ಸೈನ್ಯವೂ ಜೋರಾಗಿದೆ. ನೀವೂ ನೋಡಿ