ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ.. ಅಮಾನುಷವಾಗಿ ಕೊಂದ ನಿವೃತ್ತ ಪೊಲೀಸ್‌ ಇನ್​ಸ್ಪೆಕ್ಟರ್​

ಮಲಗಿದ್ದ ಬೀದಿನಾಯಿಯೊಂದರ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಕೊಂದಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿವೃತ್ತ ಟ್ರಾಫಿಕ್‌ ಪೊಲೀಸ್‌ ಇನ್​ಸ್ಪೆಕ್ಟರ್​ರೊಬ್ಬರಿಂದ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.

  • TV9 Web Team
  • Published On - 23:06 PM, 25 Jan 2021
ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ.. ಅಮಾನುಷವಾಗಿ ಕೊಂದ ನಿವೃತ್ತ ಪೊಲೀಸ್‌ ಇನ್​ಸ್ಪೆಕ್ಟರ್​
ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಕೊಂದ ನಿವೃತ್ತ ಪೊಲೀಸ್‌ ಇನ್​ಸ್ಪೆಕ್ಟರ್

ಬೆಂಗಳೂರು: ಮಲಗಿದ್ದ ಬೀದಿನಾಯಿಯೊಂದರ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಕೊಂದಿರುವ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿವೃತ್ತ ಟ್ರಾಫಿಕ್‌ ಪೊಲೀಸ್‌ ಇನ್​ಸ್ಪೆಕ್ಟರ್​ರೊಬ್ಬರಿಂದ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.

ನಗರದ ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ನಿವೃತ್ತ ಇನ್​​ಸ್ಪೆಕ್ಟರ್​ ನಂತರ ಶ್ವಾನ ನೋವಿನಿಂದ ಕೂಗಿಟ್ಟರೂ ಕ್ಯಾರೇ ಎನ್ನದೆ ಹಾಗೇ ಹೊರಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಚಿಕ್ಕಬಳ್ಳಾಪುರ: ನಾಮಕರಣದ ತಂಗಳು ಮಶ್​ರೂಮ್ ಬಿರಿಯಾನಿ ಸೇವಿಸಿ 25 ಜನರು ಅಸ್ವಸ್ಥ