ಅಕ್ರಮ ಸಂಬಂಧ: ತಡರಾತ್ರಿ ತೋಟದ ಮನೆಯಲ್ಲಿ ಪತ್ನಿ ಮತ್ತು ಸಹೋದರನ ಡಬಲ್ ಮರ್ಡರ್

ತೋಟದ ಮನೆಯಲ್ಲಿ ಈರಮ್ಮ ಹಾಗೂ ಆಕೆಯ ಮೈದುನ ರುದ್ರಪ್ಪ ಜೊತೆಗಿದ್ದನ್ನು ಕಂಡು ರೋಷಗೊಂಡ ಪತಿ ಲಕ್ಷ್ಮಣ ಕೊಡಲಿಯಿಂದ ಕೊಚ್ಚಿ ಇಬ್ಬರ ಕೊಲೆ ಮಾಡಿದ್ದಾನೆ.

  • Publish Date - 10:02 am, Wed, 6 January 21 Edited By: sadhu srinath
ಅಕ್ರಮ ಸಂಬಂಧ: ತಡರಾತ್ರಿ ತೋಟದ ಮನೆಯಲ್ಲಿ ಪತ್ನಿ ಮತ್ತು ಸಹೋದರನ ಡಬಲ್ ಮರ್ಡರ್
ರುದ್ರಪ್ಪ ಆಲಮೇಲ ಮತ್ತು ಈರಮ್ಮ ಆಲಮೇಲ ಕೊಲೆಯಾದ ಸ್ಥಳ

ವಿಜಯಪುರ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಮತ್ತು ದಾಯಾದಿ ಸಹೋದರನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದಲ್ಲಿ ನಡೆದಿದೆ. ರುದ್ರಪ್ಪ ಆಲಮೇಲ(35) ಮತ್ತು ಈರಮ್ಮ ಆಲಮೇಲ(30) ಹತ್ಯೆಯಾದವರು.

ಕಳೆದ ತಡರಾತ್ರಿ ಗ್ರಾಮದ ತೋಟದ ಮನೆಯಲ್ಲಿ ಈರಮ್ಮ ಹಾಗೂ ಆಕೆಯ ಮೈದುನ ರುದ್ರಪ್ಪ ಜೊತೆಗಿದ್ದನ್ನು ಕಂಡು ರೋಷಗೊಂಡ ಪತಿ ಲಕ್ಷ್ಮಣ ಕೊಡಲಿಯಿಂದ ಕೊಚ್ಚಿ ಇಬ್ಬರ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನೈತಿಕ ಸಂಬಂಧಕ್ಕೆ ವಿಜಯಪುರದಲ್ಲಿ ಇಬ್ಬರ ಕೊಲೆಯಾಗಿದೆ. ಘಟನೆ ಬಳಿಕ ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ.

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ: ಸ್ನೇಹಿತನ ನೆರವಿನಿಂದ ಗಂಡನ ಕೊಲೆ