ಜೀವನಾಧಾರಕ್ಕಾಗಿ ರಸ್ತೆ ಬದಿ ಹೋಟೆಲ್ ನಡೆಸ್ತಿದ್ದ ವಿಕಲಾಂಗನ ಮೇಲೆ ಹಲ್ಲೆ

ಜೀವನಾಧಾರಕ್ಕಾಗಿ ರಸ್ತೆ ಬದಿ ಹೋಟೆಲ್ ನಡೆಸ್ತಿದ್ದ ವಿಕಲಾಂಗನ ಮೇಲೆ ಹಲ್ಲೆ

ನೆಲಮಂಗಲ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ವಿಶೇಷ ಚೇತನ ವ್ಯಕ್ತಿಯ ಮೇಲೆ ದೌರ್ಜನ್ಯವೆಸಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಿಪಾಳ್ಯದ ಬಳಿ ನಡೆದಿದೆ. ದೊಡ್ಡಿಪಾಳ್ಯದ ತಿಮ್ಮರಾಯಪ್ಪ ಎಂಬುವವರು ವಿಶೇಷ ಚೇತನ ಬಸವರಾಜು ಮೇಲೆ ತೀವ್ರ ಸ್ವರೂಪದ ಹಲ್ಲೆ ಮಾಡಿದ್ದಾರೆ. ವಿಶೇಷ ಚೇತನ ಬಸವರಾಜು ಜೀವನಾಧಾರಕ್ಕಾಗಿ ರಸ್ತೆ ಬದಿ ಸರ್ಕಾರಿ ಜಮೀನಿನಲ್ಲಿ 15 ವರ್ಷದಿಂದ ಹೋಟೆಲ್ ನಡೆಸುತ್ತಿದ್ದರು. ಇದನ್ನು ಸಹಿಸದ ತಿಮ್ಮರಾಯಪ್ಪ ಎಂಬ ವ್ಯಕ್ತಿ ಸರ್ಕಾರಿ ಜಮೀನಿನಲ್ಲಿ ಹೋಟೆಲ್ ನಡೆಸಬಾರದೆಂದು ವಿಶೇಷ ಚೇತನ ಬಸವರಾಜು ಮೇಲೆ ಕ್ಯಾತೆ […]

sadhu srinath

|

Sep 18, 2020 | 1:34 PM

ನೆಲಮಂಗಲ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ವಿಶೇಷ ಚೇತನ ವ್ಯಕ್ತಿಯ ಮೇಲೆ ದೌರ್ಜನ್ಯವೆಸಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಿಪಾಳ್ಯದ ಬಳಿ ನಡೆದಿದೆ.

ದೊಡ್ಡಿಪಾಳ್ಯದ ತಿಮ್ಮರಾಯಪ್ಪ ಎಂಬುವವರು ವಿಶೇಷ ಚೇತನ ಬಸವರಾಜು ಮೇಲೆ ತೀವ್ರ ಸ್ವರೂಪದ ಹಲ್ಲೆ ಮಾಡಿದ್ದಾರೆ. ವಿಶೇಷ ಚೇತನ ಬಸವರಾಜು ಜೀವನಾಧಾರಕ್ಕಾಗಿ ರಸ್ತೆ ಬದಿ ಸರ್ಕಾರಿ ಜಮೀನಿನಲ್ಲಿ 15 ವರ್ಷದಿಂದ ಹೋಟೆಲ್ ನಡೆಸುತ್ತಿದ್ದರು.

ಇದನ್ನು ಸಹಿಸದ ತಿಮ್ಮರಾಯಪ್ಪ ಎಂಬ ವ್ಯಕ್ತಿ ಸರ್ಕಾರಿ ಜಮೀನಿನಲ್ಲಿ ಹೋಟೆಲ್ ನಡೆಸಬಾರದೆಂದು ವಿಶೇಷ ಚೇತನ ಬಸವರಾಜು ಮೇಲೆ ಕ್ಯಾತೆ ತೆಗೆದಿದ್ದಾನೆ. ಪರಸ್ಪರ ವಾಗ್ವಾದದ ನಡುವೆ ಕಾರಿನ ಗ್ಲಾಸ್ ಪುಡಿಗಟ್ಟಿ, ತಿಮ್ಮರಾಯಪ್ಪ ವಿಶೇಷ ಚೇತನ ಬಸವರಾಜು ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.

ಗಾಯಾಳು ವಿಶೇಷ ಚೇತನ ಬಸವರಾಜುಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಸಿದೆ.

Follow us on

Related Stories

Most Read Stories

Click on your DTH Provider to Add TV9 Kannada