ಕೊಲೆ ಯತ್ನ ಪ್ರಕರಣದ ಆರೋಪಿಯನ್ನ ಕೈಬಿಡುವಂತೆ DySPಗೆ ಮಾಜಿ ಶಾಸಕ ಒತ್ತಾಯ.. ಕಚೇರಿಗೆ ನುಗ್ಗಿ ದಬ್ಬಾಳಿಕೆ
ಜನವರಿ18ರಂದು ನಡೆದ ಹಲ್ಲೆ ಪ್ರತಿ ಹಲ್ಲೆ ಕೇಸ್ ಆರೋಪಿ 65ವರ್ಷದ ಲಲಿತಮ್ಮರನ್ನ ಕೈಬಿಡುವ ವಿಚಾರವಾಗಿ ನೆಲಮಂಗಲ DySPಕಚೇರಿಗೆ ನುಗ್ಗಿದ ಮಾಜಿ ಶಾಸಕ ಸುರೇಶ್ ಗೌಡ DySP ಜಗದೀಶ್‌ಗೆ ಆರೋಪಿಯನ್ನು ಕೈಬಿಡುವಂತೆ ಒತ್ತಡ ಹಾಕಿದ್ದಾರೆ.

ನೆಲಮಂಗಲದ ಶಾಂತಿನಗರದಲ್ಲಿ ನಡೆದಿದ್ದ ಹಲ್ಲೆ ಪ್ರಕರಣದ ನಂತರ, ಮರು ಹಲ್ಲೆ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಈ ಸಂಬಂಧ ಆರೋಪಿಯೊಬ್ಬರನ್ನ ಕೈಬಿಡುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ಡಿವೈಎಸ್ಪಿ ಜಗದೀಶ್‌ಗೆ ಒತ್ತಾಯ ಮಾಡಿದ್ದಾರೆ.
ಜನವರಿ 18ರಂದು ನಡೆದ ಹಲ್ಲೆ ಮತ್ತು ಪ್ರತಿ ಹಲ್ಲೆ ಕೇಸ್ ಆರೋಪಿ 65 ವರ್ಷದ ಲಲಿತಮ್ಮರನ್ನ ಕೈಬಿಡುವ ವಿಚಾರವಾಗಿ ನೆಲಮಂಗಲ DySP ಕಚೇರಿಗೆ ನುಗ್ಗಿದ ಮಾಜಿ ಶಾಸಕ ಸುರೇಶ್ ಗೌಡ DySP ಜಗದೀಶ್‌ಗೆ ಆರೋಪಿಯನ್ನು ಕೈಬಿಡುವಂತೆ ಒತ್ತಡ ಹಾಕಿದ್ದಾರೆ. ಅಷ್ಟೆ ಅಲ್ಲದೆ ಏರು ಧ್ವನಿಯಲ್ಲೇ ಅವಾಜ್ ಹಾಕಿದ್ದಾರೆ. ಏನ್ ನಡಿತಾ ಇದೆ ಇಲ್ಲಿ ಅನ್ನೋದು ನನಗೆ ಗೊತ್ತು. ಇದು ಸರಿಯಲ್ಲ, ನಾನು ಬಂದಿದ್ದೀನಿ ಅಂದ್ರೆ ಕಾರಣ ಇರುತ್ತೆ. ಕೀಪ್ ಇಟ್ ಇನ್ ಯುವರ್ ಮೈಂಡ್. ನ್ಯಾಯ ಕೇಳೋಕೆ ಬಂದಿದ್ದೇವೆ. ನಿಮಗೆ ಅಧಿಕಾರ ಇದೆ. ನಮ್ಮ MLA ಇಲ್ಲ ಅಂತ ಸವಾರಿ ಮಾಡೋಕೆ ಬರ್ಬೇಡಿ. ಕೇಸ್ ಫೈಲ್ ಮಾಡ್ಬೇಡಿ ಅಂತ ಹೇಳಿದ್ದೀನಿ, ಮಾಡುದ್ರೆ ಧರಣಿ ಮಾಡ್ತೀವಿ. ಅಷ್ಟೆ ಅಲ್ಲ ಗೃಹ ಸಚಿವರಿಗೆ ತನಿಖೆಗೆ ಒಪ್ಪಿಸಿದ್ರೆ ಇವೆಲ್ಲ ಸಮಸ್ಯೆನೇ ಇರಲ್ಲ ಎಂದು ಆವಾಜ್ ಹಾಕಿ DySP ಮುಂದೆ ಮಾಜಿ ಶಾಸಕ ಸುರೇಶ್ ಗೌಡ ದರ್ಪ ತೋರಿಸಿದ್ದಾರೆ.
ಇನ್ನು ಈ ವೇಳೆ ನೆಲಮಂಗಲ ಮಾಜಿ ಶಾಸಕ ನಾಗರಾಜು ಪ್ರಕರಣದ ಗಂಭೀರತೆ ತಿಳಿದು ಸುಮ್ಮನೆ ಕೂತಿದ್ದರು. ಆದ್ರೆ ಸುರೇಶ್ ಗೌಡ ಇಂತಹ ವರ್ತನೆ ತೋರಿದ್ದಾರೆ. ಮಾತುಕತೆಯನ್ನ ರೆಕಾರ್ಡ್ ಮಾಡುತ್ತಿದ್ದ ಇಲಾಖೆಯ ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡ್ಬೇಕು ಅಂದ್ಕೊಂಡಿದ್ದೀಯಾ ಎಂದೂ ಅವಾಜ್ ಹಾಕಿದ್ದಾರೆ. ಅಲ್ಲದೆ ಪ್ರಕರಣದ ಮಾಹಿತಿಯನ್ನು DySP ಜಗದೀಶ್ ಹೇಳಲು ಮುಂದಾದಾಗ ಅವರ ಮಾತು ಕೇಳದೆ ಸುರೇಶ್ ಗೌಡ ಕೋಪದಿಂದ ಹೊರ ನಡೆದಿದ್ದಾರೆ.
ಕೆಲಸದಾಳು ಜೊತೆ ಸೇರಿಕೊಂಡು ಪತಿಯ ಕೊಲೆ.. ಪತ್ನಿ ಮತ್ತು ಪ್ರಿಯಕರ ಅರೆಸ್ಟ್