ಸಿಟಿ ಮಂದಿಯೇ ವಿಪರೀತ ಚಳಿ ಇದೆ ಎಚ್ಚರ!

ಬೆಳ್ಳಂಬೆಳಗ್ಗೆ ಜಾಗಿಂಗ್ ಹೋಗುವುದೆಂದರೆ ಕೆಲವೊಂದಿಷ್ಟು ಜನರಿಗೆ ಖುಷಿ. ಇನ್ನು ಕೆಲವರು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ವಾಕ್ ಹೋಗ್ತಾರೆ. ಈ ವಿಪರೀತ ಚಳಿಯಲ್ಲಿ ವಾಕ್ ಹೋಗುವುದು ಬೇಡ ಅಂತಾರೆ ವೈದ್ಯರು.

  • TV9 Web Team
  • Published On - 8:14 AM, 7 Jan 2021
ಸಿಟಿ ಮಂದಿಯೇ ವಿಪರೀತ ಚಳಿ ಇದೆ ಎಚ್ಚರ!
ಸಾಂದರ್ಭಿಕ ಚಿತ್ರ

ಬೆಂಗಳೂರು: ಜನವರಿ, ಫೆಬ್ರವರಿ ತಿಂಗಳಲ್ಲಿ ಚಳಿ ಅತಿರೇಕವಾಗಿರುತ್ತದೆ. ಈ ಚಳಿಗೆ ಆರೋಗ್ಯ ಸಮಸ್ಯೆ ಉಂಟಾಗುವುದು ಸಹಜ. ಈ ಕುರಿತಂತೆ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಪ್ರತಿಷ್ಟಿತ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ tv9ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ. ಹಾಗಾದರೆ ಏನಿರಬಹುದು ಈ ವಿಚರೀತ ಚಳಿಯಲ್ಲಿ ನಮ್ಮ ಆರೋಗ್ಯ ಕಾಪಡಿಕೊಳ್ಳುವ ರಾಮಬಾಣ?

ಬೆಳ್ಳಂಬೆಳಗ್ಗೆ ಜಾಗಿಂಗ್ ಹೋಗುವುದೆಂದರೆ ಕೆಲವೊಂದಿಷ್ಟು ಜನರಿಗೆ ಖುಷಿ. ಇನ್ನು ಕೆಲವರು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ವಾಕ್ ಹೋಗ್ತಾರೆ. ಈ ವಿಪರೀತ ಚಳಿಯಲ್ಲಿ ವಾಕ್ ಹೋಗುವುದು ಬೇಡ ಅಂತಾರೆ ವೈದ್ಯರು.

ಚಳಿ ಜೊತೆಗೆ ಮೋಡ ಕವಿದ ವಾತಾವರಣ, ಮಳೆ ಮತ್ತು ಮಂಜು ಸುರಿಯುತ್ತಿದೆ. ಇದರಿಂದ, ಉಸಿರಾಟದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬ್ರಾಂಕೈಟಿಸ್, ಬ್ರಾಂಕೈಲ್ ಅಸ್ತಮಾ, ಶ್ವಾಸಕೋಶದ ಸಂಬಂಧಪಟ್ಟ ಕಾಯಿಲೆಗಳು ಉಂಟಾಗಬಹುದು. ಕಡ್ಡಾಯವಾಗಿ ಬೆಚ್ಚಗಿನ ಉಡುಪು ಧರಿಸಬೇಕು. ಅಧಿಕ ರಕ್ತದೊತ್ತಡ, ಶುಗರ್, ಬೈಪಾಸ್ ಸರ್ಜರಿ ಆಗಿರೋರು ಎಚ್ಚರದಿಂದ ಇರಬೇಕಾಗುತ್ತದೆ. ಹೃದಯ, ಶ್ವಾಶಕೋಶವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಎರಡು ತಿಂಗಳು ಬೆಳಿಗ್ಗೆಯ ಚಳಿಗೆ ಹೊರಗಡೆ ತಿರುಗಾಡಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರಲ್ಲಿ ಮೈಕೊರೆಯುವ ಚಳಿ ವಾತಾವರಣ.. ಕೂಲ್ ವೆದರ್ ಬಗ್ಗೆ ನಿರ್ಲಕ್ಷ್ಯ ಮಾಡಿದ್ರೆ ಡೇಂಜರ್, ಹವಾಮಾನ ಇಲಾಖೆ ಎಚ್ಚರಿಕೆ