ಹಾವೇರಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧ ಕೃಷಿಕರು ಗಣರಾಜ್ಯೋತ್ಸವದ ದಿನದಂದೇ ಟ್ರ್ಯಾಕ್ಟರ್ ಱಲಿ ನಡೆಸಿದ್ದಾರೆ. ಇತ್ತ, ಈ ದಿನದಂದೇ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವಗಿರಿ ಗ್ರಾಮದಲ್ಲಿ ನಡೆದಿದೆ. ಸಾಲಬಾಧೆ ತಾಳಲಾರದೆ 36 ವರ್ಷದ ರೈತ ಮಲ್ಲಪ್ಪ ಸುಂಕದ ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಲ್ಲಪ್ಪ ಬ್ಯಾಂಕ್ ಸೇರಿ ವಿವಿಧೆಡೆ 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ರು ಎಂದು ಹೇಳಲಾಗಿದೆ. ಈ ನಡುವೆ, ತಮ್ಮ 4 ಎಕರೆ ಜಮೀನಿನಲ್ಲಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಸಿದ್ದರಂತೆ. ಆದರೆ, ಅತಿವೃಷ್ಟಿಯಿಂದ ತಾವು ಬೆಳೆದ ಬೆಳಗಳೆಲ್ಲಾ ಹಾಳಾಗಿದ್ದಕ್ಕೆ ಬೇಸತ್ತು ಹೋಗಿದ್ದರು. ಈ ಮಧ್ಯೆ, ತಾವು ಪಡೆದಿದ್ದ ಸಾಲದ ಹೊರೆಯ ಒತ್ತಡ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಕ್ಕೆ..ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ದೂರು ಸಲ್ಲಿಕೆ