Budget 2021 | ಆಪತ್ಕಾಲದಲ್ಲಿ ಕೈಹಿಡಿದ ಟೆಲಿಮೆಡಿಸಿನ್
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಗೊಳಿಸಿದರೆ ಗ್ರಾಮೀಣ ಆರೊಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದಂತೆಯೇ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಕೇಂದ್ರ ಬಜೆಟ್ನಲ್ಲಿನ ಬಹುದೊಡ್ಡ ನಿರೀಕ್ಷೆ. ಆರೋಗ್ಯ ವಲಯದಲ್ಲಿ ಜಾರಿಯಲ್ಲಿರುವ ನಿಯಮಗಳು ಟೆಲಿ ಮೆಡಿಸಿನ್ನ್ನು ಉತ್ತೇಜಿಸಬೇಕಿದೆ.

ಕೊರೊನಾ ಕಾಲದಲ್ಲಿ ನಡೆದ ಅವಾಂತರಗಳು ಒಂದೇ, ಎರಡೇ. ದೇಶದ ಆರೋಗ್ಯ ವ್ಯವಸ್ಥೆ ಚೆನ್ನಾಗಿದೆಯೆಂಬ ಭ್ರಮೆ ಥಟ್ ಎಂದು ಕ್ಷಣಮಾತ್ರದಲ್ಲಿ ಕಳಚಿಬಿತ್ತು. ಲಾಕ್ಡೌನ್, ಹೊರಗೆ ಕಾಲಿಡುವಂತಿಲ್ಲ ಎಂಬ ಆದೇಶ ಬಂತು. ಜನಸಾಮಾನ್ಯರು ಅಗತ್ಯ ದಿನಸಿ ವಸ್ತುಗಳನ್ನು ಸರ್ಕಸ್ ಮಾಡಿ ಸಂಗ್ರಹಿಸಿಕೊಂಡರು. ಆದರೆ, ತಕ್ಷಣಕ್ಕೆ ಅವಶ್ಯ ಬಿದ್ದ ಔಷಧಗಳನ್ನು ತರಿಸಿಕೊಳ್ಳುವುದು ಹರಸಾಹಸವೇ ಆಯಿತು. ಮಾತ್ರೆಯ ಖಾಲಿ ಚೀಟಿ ಹಿಡಿದು ಹೊರಹೋಗುವಂತಿಲ್ಲ. ಹಿರಿಯ ನಾಗರಿಕರಿಗಂತೂ ಇನ್ನೂ ಹೆಚ್ಚು ಕಳವಳ, ಭೀತಿ ಅನುಭವಿಸಿದರು. ಅತ್ತ ದರಿ ಇತ್ತ ಪುಲಿ ಎಂಬ ಇಕ್ಕಟ್ಟಿನ ಸಂಧಿಯಲ್ಲಿ ನಡೆಯಬೇಕಾದ ಪರಿಸ್ಥಿತಿಯದು. ಈ ಪಿಡುಗಿನಲ್ಲಿ ದೇಶದ ಗ್ರಾಮೀಣ ಜನರನ್ನು, ಮಧ್ಯಮ ವರ್ಗವನ್ನು ಕಾಪಾಡಿದ್ದು ಟೆಲಿಮೆಡಿಸಿನ್.
ಇ- ಸಂಜೀವಿನಿ ಟೆಲಿಮೆಡಿಸಿನ್ ಕೊರೊನಾ ಕಾಲದಲ್ಲಿ ದೇಶದ ಜನರು ಇಂತಹ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದರು. ಆಗಲೇ ಆರಂಭವಾದದ್ದು ಇ- ಸಂಜೀವಿನಿ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆ. ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು ತಜ್ಞ ವೈದ್ಯರನ್ನು ಮನೆಯಿಂದಲೇ ವೀಡಿಯೋ ಕಾಲ್ ಮೂಲಕ ಸಂಪರ್ಕಿಸುವ ಯೋಜನೆ ಬಹು ಶ್ಲಾಘನೆಗೆ ಪಾತ್ರವಾಯಿತು. ವಿಡಿಯೋ ಸಂವಹನದಲ್ಲಿ ತಮ್ಮ ಆರೋಗ್ಯ-ಮಾನಸಿಕ ಸಮಸ್ಯೆಗಳನ್ನು ತಜ್ಞರೆದುರು ತೆರೆದಿಟ್ಟು ಸರಳವಾಗಿ ಚಿಕಿತ್ಸೆ ಪಡೆಯುವುದು ವೃದ್ಧರ ಪಾಲಿಗಂತೂ ವರದಾಯಕವಾಯಿತು. ಕೇವಲ ವೀಡಿಯೋ ಕಾಲ್ ಒಂದೇ ಅಲ್ಲದೇ, ಫೋನ್ ಮೂಲಕವೂ ತಜ್ಞ ವೈದ್ಯರನ್ನು ಸುಲಭವಾಗಿ ಸಂಪರ್ಕಿಸುವ ಸೇವೆಯೂ ಸಹ ಲಭ್ಯವಿತ್ತು. ಅಂತರ್ಜಾಲ ಸೌಕರ್ಯವಿಲ್ಲದ ಲಕ್ಷಾಂತರ ಹಳ್ಳಿಗರು ಈ ಸೌಲಭ್ಯದ ಪ್ರಯೋಜನ ಪಡೆದರು. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಮಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಹಿಂಜರಿಕೆ ತೋರಿದ್ದರು. ಅಂಥವರು ಮನೆಯಲ್ಲೇ ಕಿಮೋಥೆರಪಿಯನ್ನೂ ಆರಂಭಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಗೊಳಿಸಿದರೆ ಗ್ರಾಮೀಣ ಆರೊಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದಂತೆಯೇ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಕೇಂದ್ರ ಬಜೆಟ್ನಲ್ಲಿನ ಬಹುದೊಡ್ಡ ನಿರೀಕ್ಷೆ. ಆರೋಗ್ಯ ವಲಯದಲ್ಲಿ ಇಂದು ಜಾರಿಯಲ್ಲಿರುವ ನಿಯಮಗಳು ಟೆಲಿ ಮೆಡಿಸಿನ್ನ್ನು ಉತ್ತೇಜಿಸಬೇಕಿದೆ. ಆಪತ್ತಿನ ಕಾಲದಲ್ಲಿ ಕೈಹಿಡಿದವರನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿಯೂ ಹೌದು.
ಕೊವಿಡ್ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ
Budget 2021 | ಕಿಸಾನ್ ರೈಲು: ಕೊರೊನಾ ಕಾಲದಲ್ಲಿ ಮಹದುಪಯೋಗ, ಹೆಚ್ಚಲಿದೆಯೇ ರೈತ ರೈಲುಗಳ ಸಂಖ್ಯೆ?