Budget 2021 ನಿರೀಕ್ಷೆ | ಎಲ್ಲ ಬೆಳೆಗಳೂ ಕೃಷಿವಿಮೆ ವ್ಯಾಪ್ತಿಗೆ ಬರಲಿ

ಹವಾಮಾನಲ್ಲಾಗುವ ಅನಿರೀಕ್ಷಿತ ಬದಲಾವಣೆಗಳಿಂದ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ಕೃಷಿವಿಮೆಗಳ ಬಗ್ಗೆ ಅರಿವು ಮೂಡಿಸಿ ಅವುಗಳನ್ನು ಪಡೆಯುವಂತೆ ಪ್ರೇರೇಪಿಸಬೇಕು. ಸರ್ಕಾರ ಯೋಜನೆ ರೂಪಿಸಿದರೆ ಸಾಲದು, ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೂ ಕ್ರಮಕೈಗೊಳ್ಳಬೇಕು.

Budget 2021 ನಿರೀಕ್ಷೆ | ಎಲ್ಲ ಬೆಳೆಗಳೂ ಕೃಷಿವಿಮೆ ವ್ಯಾಪ್ತಿಗೆ ಬರಲಿ
ಕೃಷಿ ವಲಯ
Arun Belly

| Edited By: Rashmi Kallakatta

Jan 29, 2021 | 12:43 PM

ಕೇಂದ್ರ ಸರ್ಕಾರ ಮಂಡಿಸುವ ಒಟ್ಟಾರೆ ಬಜೆಟ್​ನ ಶೇ 5ರಷ್ಟು ಪಾಲು ಹೊಂದಿರುವ ಕೃಷಿ ವಲಯಕ್ಕೆ ಮೀಸಲಿಡುವ ಅನುದಾನವು ಕಳೆದ ವರ್ಷ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಒದಗಿಸುವ ಹಣವನ್ನು ಹೆಚ್ಚಿಸಿದ್ದರಿಂದ ಗಣನೀಯವಾಗಿ ಹೆಚ್ಚಿತು. ಈ ಹಂಚಿಕೆಯ ಶೇ 94ರಷ್ಟು ಕೃಷಿ ಇಲಾಖೆ, ರೈತರ ಕ್ಷೇಮಾಭಿವೃದ್ಧಿಗೆ ಮತ್ತು ಮಿಕ್ಕಿದ್ದು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಗೆ ನೀಡಲಾಗಿತ್ತು.

‘ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಒದಗಿಸಿದ ಶೇಕಡಾವಾರು ಅನುದಾನ ಬಹಳ ಕಡಿಮೆಯಾಗಿದೆ  ಅದರ ಹೆಚ್ಚಿನ ಭಾಗ ಸಿಬ್ಬಂದಿಯ ಸಂಬಳ, ನಿವೃತ್ತಿ ವೇತನ ಮತ್ತು ಇತರ ಆಡಳಿತಾತ್ಮಕ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಜಾಗತಿಕ ಪರಿಮಾಣಗಳಿಗೆ ಹೋಲಿಸಿದರೆ ಸರ್ಕಾರ ಒದಗಿಸಿದ ಅನುದಾನ ಏನೇನೂ ಅಲ್ಲವಾದ್ದರಿಂದ ಅದು ಉತ್ಪಾದಕತೆಯ ಮೇಲೆ ಪರಿಣಾಮ ಬೀರಿ ಅದನ್ನು ಕುಂಠಿತಗೊಳಿಸಿತು.

ಅದಲ್ಲದೆ, ಈ ವಲಯ ಎದುರಿಸುತ್ತಿರುವ ಸವಾಲುಗಳೊಂದಿಗೆ ಏಗಲು ಮತ್ತು ರೈತರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲು, ಹಲವಾರು ಕೃಷಿ ಯೋಜನೆಗಳಿಗೆ ಒದಗಿಸುವ ಹಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಬೇಕಿದೆ. ಉತ್ಪಾದಕತೆ, ಗುಣಮಟ್ಟ ಮತ್ತು ಮೌಲ್ಯವರ್ಧನೆ ಮೊದಲಾದ ಸಮಸ್ಯೆಗಳು ಕೃಷಿವಲಯವನ್ನು ಶತಮಾನಗಳಿಂದ ಕಾಡುತ್ತಿರುವುದರಿಂದ ಅವುಗಳನ್ನು ಬಗೆಹರಿಸಲು ಸರ್ಕಾರ ಈ ವಲಯಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಬೇಕಿದೆ,’ ಎಂದು ಡೆಲಾಯ್ಟ್ ಇಂಡಿಯಾ ಸಂಸ್ಥೆ ಹೇಳಿದೆ.

ಕೃಷಿಕರು ನಿರಂತರವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಕೃಷಿವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕೆಳಕಾಣಿಸಿರುವ ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಬೇಕು.

ಇದನ್ನೂ ಓದಿ: Kannada News Live | ಸಂಸತ್ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಮಾತು

ರೈತರು ಹತಾಶೆಗೊಳಗಾಗದಿರಲು ವಿಮೆಯ ಅವಶ್ಯಕತೆಯಿದೆ

ಸಾಲದ ಮೇಲಿನ ಬಡ್ಡಿಗೆ ಸಬ್ಸಿಡಿ ರೈತರು ತೆಗೆದುಕೊಂಡಿರುವ ದೀರ್ಘಾವಧಿ ಕೃಷಿಸಾಲಗಳ ಮೇಲಿನ ಬಡ್ಡಿಗೆ ಸಬ್ಸಿಡಿಯನ್ನು ನೀಡಬೇಕು. ತಾವು ಪಡೆದಿರುವ ಸಾಲವನ್ನು ಕಳೆಕೀಳಲು, ಸುಗ್ಗಿ, ತಮ್ಮ ಉತ್ಪನ್ನ ಸಾಗಣೆ ಮೊದಲಾದವುಗಳಿಗೆ ವಿನಿಯೊಗಿಸುವೆಡೆ ಅವರು ಗಮನ ಕೇಂದ್ರೀಕರಿಸುವ ಬದಲು ಕೃಷಿ ಉಪಕರಣಗಳ ಮೇಲಿನ ಹೂಡಿಕೆ, ನೀರಾವರಿ. ಅಥವಾ ಕೃಷಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಅವರಿಗೆ ನೆರವಾಗಬೇಕು.

ಕೃಷಿವಿಮೆ ಹವಾಮಾನದಲ್ಲಾಗುವ ಅನಿರೀಕ್ಷಿತ ಬದಲಾವಣೆಗಳಿಂದ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ಕೃಷಿವಿಮೆಗಳ ಬಗ್ಗೆ ಅರಿವು ಮೂಡಿಸಿ ಅವುಗಳನ್ನು ಪಡೆಯುವಂತೆ ಪ್ರೇರೇಪಿಸಬೇಕು. ವಿಮೆ ಬಗ್ಗೆ ಅವರಲ್ಲಿ ಜಾಗೃತಿ ಇಲ್ಲದಿರುವುದು ಅನಿಶ್ಚಿತತೆ ಮತ್ತು ಹತಾಶೆ ಹುಟ್ಟುವಂತೆ ಮಾಡುತ್ತಿದೆ. ಎಲ್ಲ ಕೃಷಿಕರನ್ನು ವಿಮೆಯ ಚಾವಣಿಯೊಳಗೆ ತರುವುದು ಸಹ ಸರ್ಕಾರದ ಆದ್ಯತೆಯಾಗಿರಬೇಕು.

ನೀರಾವರಿ ನೀರಿನ ಲಭ್ಯತೆ ಕುರಿತ ಸಮಸ್ಯೆಗಳನ್ನು ಬಗೆಹರಿಸಿ, ಹನಿ ನಿರಾವರಿ ಕೃಷಿಪದ್ಧತಿಯನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬೇಕು. ಕೃಷಿಗಾಗಿ ಜಮೀನಿನ ಕೊರತೆ ಎದುರಾಗುತ್ತಿರುವುದರಿಂದ ವಿದೇಶಗಳಲ್ಲಿ ಅನುಸರಿಸಲಾಗುತ್ತಿರುವ ಲಂಬ ಕೃಷಿ (vertical farming) ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಮತ್ತು ಅದಕ್ಕೆ ಅಗತ್ಯವಿರುವ ತರಬೇತಿಯನ್ನು, ಮೂಲಸೌಕರ್ಯವನ್ನು ಒದಗಿಸಬೇಕು.

ಇದನ್ನೂ ಓದಿ: Budget 2021: ಬಜೆಟ್ ಮಂಡನೆ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಬಹುದು?

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವ್ಯಾಪ್ತಿ ಹಿಗ್ಗಬೇಕಿದೆ

ಗುಣಮಟ್ಟ ಕಾಯ್ದುಕೊಳ್ಳಲು ಹಂಚಿಕೆಯನ್ನು ಹೆಚ್ಚಿಸಬೇಕು ಮಣ್ಣಿನ ಗುಣಮಟ್ಟ ಮತ್ತು ಅದರ ಸ್ವಾಸ್ಥ್ಯವನ್ನು ಕಾಪಾಡಲು ಯೂರಿಯಾ ಮತ್ತು ಇತರ ರಸಗೊಬ್ಬರಗಳ ಸಮತೋಲಿತ ಬಳಕೆ ಕುರಿತು ರೈತರಿಗೆ ವಿವರಿಸಬೇಕು. ಅದಕ್ಕಾಗಿ ಹೆಚ್ಚುವರಿ ವೆಚ್ಚ ತಗಲುವುದರಿಂದ ಅನುದಾನವನ್ನು ಹೆಚ್ಚಿಸಬೇಕು. ಹಣವನ್ನು ಸಂಚಾರಿ ಮಣ್ಣು ಪರೀಕ್ಷೆ ಕೇಂದ್ರ ಸ್ಥಾಪಿಸಲು ವಿನಿಯೋಗಿಸಿದರೆ ಅದು ಸಣ್ಣ ರೈತರಿಗೆ ಪ್ರಯೋಜನಕಾರಿಯಾಗುತ್ತದೆ. ಗ್ರಾಮಿಣ ಪ್ರದೇಶಗಳಲ್ಲಿ ಮಣ್ಣು ಪರೀಕ್ಷೆ ಕೇಂದ್ರಗಳಿಲ್ಲ. ಕೆಂದ್ರ ಸರ್ಕಾರವು ಅನುದಾನವನ್ನು ಹೆಚ್ಚಿಸಿದರೆ ಆಹಾರ ಸುರಕ್ಷತೆಯ ಬಗ್ಗೆ ಜನ ಹೆಚ್ಚು ಜಾಗೃತರಾಗಿರುವುದರಿಂದ ಈಗ ಅಸ್ತಿತ್ವದಲ್ಲಿರುವ ಲ್ಯಾಬ್​ಗಳನ್ನು ಆಧುನೀಕರಿಸಲೂ ಹೆಚ್ಚಿನ ಅನುದಾನ ನೆರವಾಗುತ್ತದೆ.

ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಾಶಸ್ತ್ಯ ತರಕಾರಿ ಎಣ್ಣೆ ಮತ್ತು ಬೇಳೆಕಾಳುಗಳಂಥ ಪ್ರಮುಖ ವಸ್ತುಗಳಿಗೆ ಭಾರತ ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಅನುದಾನ ಹಂಚಿಕೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕಿದೆ. ಈ ವಸ್ತುಗಳ ದೇಶೀಯ ಉತ್ಪಾದನೆ ಹೆಚ್ಚಿಸುವುದು ಬಹಳ ಮುಖ್ಯವಾಗಿರುವುದರಿಂದ ಅನುದಾನದ ಹೆಚ್ಚುವರಿ ಭಾಗವನ್ನು ಇದರಲ್ಲಿ ತೊಡಗಿಸಬಹುದು.

ಪಶುಸಾಕಣೆಗೆ ಕಾಯಕಲ್ಪ ಪಶು ಸಾಕಾಣಿಕೆ ರೈತರ ಆದಾಯದ ಪ್ರಮುಖ ಮೂಲವಾಗಿದೆ; ಅದರೆ, ಜಾನುವಾರುಗಳಿಗೆ ತಗಲುತ್ತಿರುವ ರೋಗಗಳಿಂದ ಅವು ಅಕಾಲಿಕ ಮರಣವನ್ನಪ್ಪಿ ನಿರೀಕ್ಷಿತ ಉತ್ಪಾದನೆಯ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಜಾನುವಾರುಗಳಿಗೆ ನೀಡುವ ಲಸಿಕೆಗಳ ಬೇಡಿಕೆ ಹೆಚ್ಚಾಗಿರುವುದರಿಂದ ಸರಬರಾಜು ಸಮರ್ಪಕವಾಗಿಲ್ಲ. ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಸೃಷ್ಟಿಸಲು ಈ ಬಾರಿಯ ಬಜೆಟ್​ನಲ್ಲಿ ಅನುದಾನ ಮೀಸಲಿಡಬೇಕೆಂಬ ಒತ್ತಾಯ ಕೇಳಿಬಂದಿದೆ.

ಕೃಷಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ: ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada