Budget 2021 ನಿರೀಕ್ಷೆ: ಕೃಷಿ ಸಬ್ಸಿಡಿ ಬದಲು ನೇರ ನಗದು ವರ್ಗಾವಣೆಗೆ ಸಿಗಲಿ ಆದ್ಯತೆ

ಕೃಷಿ ವಲಯದ ಒಟ್ಟಾರೆ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶಿಯ ಕೃಷಿ ಸಂಶೋಧನೆ, ಎಣ್ಣೆಬೀಜಗಳ ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಸಾವಯವ ಕೃಷಿ ಮೊದಲಾದವುಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಉದ್ಯಮ ಪರಿಣಿತರು ಅಭಿಪ್ರಾಯಪಡುತ್ತಾರೆ.

Budget 2021 ನಿರೀಕ್ಷೆ: ಕೃಷಿ ಸಬ್ಸಿಡಿ ಬದಲು ನೇರ ನಗದು ವರ್ಗಾವಣೆಗೆ ಸಿಗಲಿ ಆದ್ಯತೆ
ದೇಶದ ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಚೇತರಿಕೆ ಕಾಣಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ 2021 ತಿಳಿಸಿದೆ.
Arun Belly

| Edited By: Rashmi Kallakatta

Jan 29, 2021 | 11:04 AM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1 ರಂದು ಮಂಡಿಸಲಿರುವ ಬಜೆಟ್-2021ರಲ್ಲಿ ಕೃಷಿ ವಲಯದ ಒಟ್ಟಾರೆ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶಿಯ ಕೃಷಿ ಸಂಶೋಧನೆ, ಎಣ್ಣೆಬೀಜಗಳ ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಸಾವಯವ ಕೃಷಿ ಮೊದಲಾದವುಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಉದ್ಯಮ ಪರಿಣಿತರು ಅಭಿಪ್ರಾಯಪಡುತ್ತಾರೆ. ಹಾಗೆಯೇ, ರೈತರಿಗೆ ಸಬ್ಸಿಡಿಗಳನ್ನು ಒದಗಿಸುವ ಬದಲು ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕೆಂದು ಸಹ ಅವರು ಹೇಳುತ್ತಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಸಿಎಮ್ ಶ್ರೀರಾಮ್ ಸಂಸ್ಥೆಯ ಅಧ್ಯಕ್ಷ ಮತ್ತು ಹಿರಿಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಶ್ರೀರಾಮ್ ಕೃಷಿ ಕ್ಷೇತ್ರದಲ್ಲಿ ಆಗಬೇಕಾದ ಸುಧಾರಣೆಗಳು ಮತ್ತು ಪ್ರಸಕ್ತ ಬಜೆಟ್​ನಿಂದ ತಾನು ನಿರೀಕ್ಷಿಸುತ್ತಿರುವುದೇನು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮಾತುಗಳ ಅಕ್ಷರರೂಪ ಇಲ್ಲಿದೆ.

ರೈತರು ತಮ್ಮ ಉತ್ಪನ್ನಗಳ ಮೇಲೆ ಯೋಗ್ಯ ಬೆಲೆ ಪಡೆದುಕೊಳ್ಳಲು ಹಾಗೂ ಮಧ್ಯವರ್ತಿಗಳ ಕಾಟ ನಿಯಂತ್ರಿಸಲು ಆಹಾರ ಸಂಸ್ಕರಣೆ ಉದ್ಯಮ ಪ್ರಮುಖ ಪಾತ್ರ ನಿರ್ವಹಿಸಿದೆ. ಈ ಹಿನ್ನೆಲೆಯಲ್ಲಿ, ಸಾಲದ ಮೇಲಿನ ಬಡ್ಡಿ ಮತ್ತು ತೆರಿಗೆಯನ್ನು ಕಡಿಮೆಗೊಳಿಸಿ, ತಾಂತ್ರಿಕ ನೆರವನ್ನು ಒದಗಿಸುವ ಮೂಲಕ ಆಹಾರ ಸಂಸ್ಕರಣೆ ಉದ್ಯಮಕ್ಕೆ ಬಜೆಟ್ ನೆರವಾಗಬೇಕು.

ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹ 6,000 ವರ್ಗಾಯಿಸುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಾಕಷ್ಟು ಯಶಸ್ವಿಯಾಗಿದೆ. ಡಿಬಿಟಿ ಪ್ರಕ್ರಿಯೆಯಲ್ಲಿ ಮತ್ತಷ್ಟು ಸುಧಾರಣೆ ತಂದು ಸಬ್ಸಿಡಿಗಳ ಬದಲು ಆ ಯೋಜನೆಯ ಮೂಲಕವೇ ರೈತರಿಗೆ ಇನ್ನೂ ಹೆಚ್ಚಿನ ಬೆಂಬಲ ಒದಗಿಸಬೇಕು.

ಇದನ್ನೂ ಓದಿ: ಏನಿದು ಆರ್ಥಿಕ ಸಮೀಕ್ಷೆ? ಏನಿದರ ಮಹತ್ವ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಹಣವನ್ನು ಹೇಗೆ ಸಂದರ್ಭೋಚಿತವಾಗಿ ಉಪಯೋಗಿಸಬೇಕೆಂದು ರೈತರೇ ನಿರ್ಧರಿಸಲಿ, ಡಿಬಿಟಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅವರು ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಆಧುನಿಕ ರಸಗೊಬ್ಬರ ಖರೀದಿಸಲಿ ಮತ್ತು ನೀರಿನ ಉಪಯೋಗವನ್ನು ಸಹ ಹೆಚ್ಚಿಸಿಕೊಳ್ಳಲಿ. ಕೃಷಿ ತಂತ್ರಜ್ಞಾನದಲ್ಲಿ ಅನೇಕ ಸ್ಟಾರ್ಟ್​ಅಪ್​ಗಳು ಹೂಡಿಕೆ ಮಾಡಿವೆ. ಹೊಸ ಉದ್ಯಮಿಗಳನ್ನು ಉತ್ತೇಜಿಸುವ ನೀತಿಯನ್ನು ಸರ್ಕಾರ ರೂಪಿಸಿದರೆ ಅದು ಅವರ ಪ್ರಗತಿಯ ಜೊತೆಗೆ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂಥ ಅವಿಷ್ಕಾರಗಳೇನೂ ಅಗಿಲ್ಲ.

ಸರ್ಕಾರದಿಂದ ಎರಡು ಕೆಲಸಗಳು ಅತ್ಯಂತ ಜರೂರಾಗಿ ಆಗಬೇಕಿದೆ. ಮೊದಲನೆಯದ್ದು, ಕೃಷಿ ಸಂಶೋಧನೆಯನ್ನು ಉದ್ಯಮದ ಅಗತ್ಯಗಳಿಗೆ ಲಿಂಕ್ ಮಾಡುವುದು ಮತ್ತು ಎರಡನೆಯದ್ದು, ಹೊಸ ಯುಗದ ತಂತ್ರಜ್ಞಾನದ ಬಳಕೆಗೆ ಯಾವುದೇ ತಾತ್ವಿಕ ಅಡಚಣೆಯೊಡ್ಡದೆ, ಅದರ ನೆರವನ್ನು ಯಥೇಚ್ಛವಾಗಿ ಪಡೆಯಲು ಅನುವು ಮಾಡಿಕೊಡುವುದು.

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada