Budget 2021 ನಿರೀಕ್ಷೆ | ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಬೇಕಿದೆ ಡಿಜಿಟಲ್ ಮೂಲಸೌಕರ್ಯ

ಕೇಂದ್ರ ಬಜೆಟ್ 2021ರಲ್ಲಿ ದೊಡ್ಡ ನಗರ ಮತ್ತು ಸಣ್ಣ ಮಾರುಕಟ್ಟೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರ ಗಮನ ಹರಿಸಬೇಕು ಎಂದು ಚಿಲ್ಲರೆ ವ್ಯಾಪಾರ ಕ್ಷೇತ್ರವು ಬಯಸುತ್ತಿದೆ.

Budget 2021 ನಿರೀಕ್ಷೆ | ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಬೇಕಿದೆ ಡಿಜಿಟಲ್ ಮೂಲಸೌಕರ್ಯ
ಪ್ರಾತಿನಿಧಿಕ ಚಿತ್ರ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 29, 2021 | 3:57 PM

ಕೊರೊನಾವೈರಸ್ ಸಾಂಕ್ರಾಮಿಕದಿಂದ ಹೊಡೆತ ಅನುಭವಿಸಿದ್ದ ಭಾರತೀಯ ಚಿಲ್ಲರೆ ವ್ಯಾಪಾರ ಕ್ಷೇತ್ರವು ನಿಧಾನವಾಗಿ ಪುಟಿದೇಳುತ್ತಿದ್ದು ಕೇಂದ್ರ ಬಜೆಟ್ ಅನ್ನು ಆಶಾವಾದದಿಂದ ನೋಡುತ್ತಿದೆ. ನವೆಂಬರ್ 2020 ರಲ್ಲಿ ದಿನ ಬಳಕೆಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟವು ಶೇ 2ರಷ್ಟು ಹೆಚ್ಚಿದೆ. ಆಹಾರ ಮತ್ತು ದಿನಸಿ ವಸ್ತುಗಳು ಶೇ 5ರಷ್ಟು ಏರಿಕೆ ಆಗಿದೆ. ಆದರೆ ಉಡುಪು ಮತ್ತು ಬಟ್ಟೆ ವ್ಯಾಪಾರವು ಕಳೆದ ವರ್ಷಾಂತ್ಯಕ್ಕೆ ಶೇಕಡಾ 12 ರಷ್ಟು ಮಾತ್ರ ಹೆಚ್ಚಿದೆ. 2018 ರಲ್ಲಿ 13-14 ಶೇಕಡಾ ಮತ್ತು 2019ರಲ್ಲಿ ರಲ್ಲಿ 7-8 ಶೇಕಡಾ ಬೆಳವಣಿಗೆಯನ್ನು ಕಂಡ ನಂತರ ಈ ಉದ್ಯಮವು 2020ರಲ್ಲಿ ಹೊಡೆತಕ್ಕೊಳಗಾಗಿತ್ತು.

ಭಾರತದ ಚಿಲ್ಲರೆ ಉದ್ಯಮವು ಸುಮಾರು 854 ಶತಕೋಟಿ ಎಂದು ಅಂದಾಜಿಸಲಾಗಿದೆ. ಇದು ಭಾರತದ ಜಿಡಿಪಿಯ ಶೇಕಡಾ 10 ಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಹೊಂದಿರುವ ಬೃಹತ್ ವಲಯ ಇದು. ಸರಿಸುಮಾರು 46 ಶತಕೋಟಿ ಜನರು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿ ಆರ್ಥಿಕ ಪುನಶ್ಚೇತನ ಅತ್ಯವಶ್ಯಕ.

ಕಳೆದ ವರ್ಷ ಹೊಸ ಮಾದರಿಯ ಆದಾಯ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಸರ್ಕಾರವು ಹಣದ ಚಲಾವಣೆಯನ್ನು ಹೆಚ್ಚಿಸಲು ಪ್ರಯತ್ನಿಸಿತು. ಅದೇ ವೇಳೆ ರಜೆ ಪ್ರಯಾಣ ಭತ್ಯೆಯ ಬದಲಾಗಿ ಹೆಚ್ಚು ಖರ್ಚು ಮಾಡಲು ತನ್ನ ಉದ್ಯೋಗಿಗಳನ್ನು ಉತ್ತೇಜಿಸಿತು. ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್‌ನಲ್ಲಿ ಈ ವಲಯ ಹೆಚ್ಚಿನ ಅನುದಾನ ಬಯಸುತ್ತಿದೆ.

ಕೃಷಿ ಆದಾಯವನ್ನು ಹೆಚ್ಚಿಸುವ ಕ್ರಮಗಳು (ವಿಶೇಷವಾಗಿ ಇತ್ತೀಚಿನ ಕೃಷಿ ಪ್ರತಿಭಟನೆಯ ಹಿನ್ನೆಲೆಯಲ್ಲಿ) ಗ್ರಾಮೀಣ ಪ್ರದೇಶಗಳಲ್ಲಿನ ಆದಾಯದ ಮಟ್ಟವನ್ನು ಬೆಂಬಲಿಸಲು ಸಹಾಯವಾಗಲಿದೆ.

ಎಲೆಕ್ಟ್ರಾನಿಕ್ ವಾಣಿಜ್ಯ ವಲಯದ ಪ್ರಮುಖ ಬೇಡಿಕೆಯೆಂದರೆ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯನ್ನು ಜಾರಿಗೆ ತರುವುದು (ಸಿಐಐ ಅದರ ಬಗ್ಗೆ ವರದಿ ಪ್ರಕಟಿಸಿದೆ). ಈ ನೀತಿಯು ಚಿಲ್ಲರೆ ಮಾರಾಟ ಉದ್ಯಮದ ಬೆಳವಣಿಗೆಗೆ ಸಹಕಾರಿ ಆಗಲಿದೆ. ಸುಲಭ ವ್ಯಾಪಾರ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಅಂತರವನ್ನು ಕಡಿಮೆ ಮಾಡುವುದು, ಕಾರ್ಮಿಕರ ಭಾಗವಹಿಸುವಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಂತಹ ವಿಶಾಲ ಕ್ರಮಗಳನ್ನು ಕೈಗೊಳ್ಳುವ ಅಗತ್ಯಗಳನ್ನು ಸಿಐಐ ಹೇಳಿದೆ. ಮಲ್ಟಿ-ಬ್ರಾಂಡ್ ಅಥವಾ ಸಿಂಗಲ್ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಯ ಹೆಚ್ಚಳಕ್ಕೆ ಸಹಕಾರಿಯಾಗುವ ನೀತಿಯನ್ನು ತರಬೇಕು ಇದು ಸಂಘಟಿತ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಅಂತಾರೆ ತಜ್ಞರು.

ದೊಡ್ಡ ನಗರ ಮತ್ತು ಸಣ್ಣ ಮಾರುಕಟ್ಟೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಸರ್ಕಾರದ ಗಮನ ಹರಿಸಬೇಕಿದೆ. ಕೋವಿಡ್ 19ನಿಂದಾಗಿ ಪ್ರಮುಖ ಚಿಲ್ಲರೆ ವ್ಯಾಪಾರಗಳು (ಆಭರಣಗಳು, ಪಾದರಕ್ಷೆಗಳು, ಉಡುಪುಗಳು ಇತ್ಯಾದಿ) ಇ-ಕಾಮರ್ಸ್ ಮೂಲಕ ಮಾರಾಟ ಕ್ಷೇತ್ರವನ್ನು ವಿಸ್ತರಿಸಿಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಪರ್ಕ ಮತ್ತು ಪಿಒಎಸ್ (ಪಾಯಿಂಟ್ ಆಫ್ ಸೇಲ್ ) ಹೆಚ್ಚಳವು ಚಿಲ್ಲರೆ ಉದ್ಯಮದಲ್ಲಿ ಎಲೆಕ್ಟ್ರಾನಿಕ್ ವಹಿವಾಟು ಗಾತ್ರವನ್ನು ಹೆಚ್ಚಿಸಿದೆ.

ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಪ್ರೋತ್ಸಾಹಿಸುವ ಸಲುವಾಗಿ, ಸರ್ಕಾರವು ಕೆಲವು ಜವಳಿಗಳ ಮೇಲಿನ ಆಮದು ಸುಂಕವನ್ನು ಶೇ 10 ರಿಂದ ಶೇ 20ಕ್ಕೆ ಹೆಚ್ಚಿಸಿದೆ. ಪಾದರಕ್ಷೆಗಳ ಆಮದು ಸುಂಕವನ್ನು ಕಳೆದ ವರ್ಷ ಶೇ 25 ರಿಂದ ಶೇ 35ಕ್ಕೆ ಹೆಚ್ಚಿಸಲಾಗಿತ್ತು. ಹಾಗಾಗಿ ಚಿಲ್ಲರೆ ಮಾರುಕಟ್ಟೆ ವಲಯದಲ್ಲಿ ಇತರ ಉತ್ಪನ್ನಗಳ ಮೇಲಿನ ಯಾವುದೇ ಆಮದು ಸುಂಕವನ್ನು ಹೆಚ್ಚಿಸುವುದು ಉದ್ಯಮಕ್ಕೆ ಲಾಭವಾಗಬಹುದು.

Budget 2021 ನಿರೀಕ್ಷೆ | ಜಿಎಸ್​ಟಿ ಪಾವತಿಯಲ್ಲಿ ಲಂಚಾವತಾರ, ಬೇಕಿದೆ ಕಡಿವಾಣ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada