ಕೇಂದ್ರ ಸರ್ಕಾರವು ನೂತನ ಕೃಷಿ ಕಾಯ್ದೆಗಳಿಗೆ ಅನುಮೋದನೆ ಪಡೆದುಕೊಂಡ ಬಳಿಕ ಸಾಕಷ್ಟು ವಾದ ವಿವಾದಗಳು ನಡೆದಿವೆ. ಎರಡು ತಿಂಗಳು ನಡೆದ ರೈತ ಚಳುವಳಿಯು ಅನುಚಿತ ತಿರುವು ಪಡೆದು ವಿವಾದಾತ್ಮಕ ಸ್ವರೂಪ ಪಡೆದುಕೊಂಡಿದೆ.
1 / 8
ರೈತ ಸಮುದಾಯದಲ್ಲಿ ಇದೀಗ ಹೋರಾಟದ ಪರ ಹಾಗೂ ಕೇಂದ್ರದ ಪರ ಎಂಬ ಎರಡು ಗುಂಪುಗಳು ನಿರ್ಮಾಣವಾಗಿವೆ. ಏನೇ ಆದರೂ ರೈತ ಪರವಾಗಿ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್ನಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
2 / 8
PM Kisan Samman Nidhi Yojana 2021 8th Installment Announcement LIVE Narendra Modi government to release over Rs 19000 cr to 9-5 cr farmers in Kannada
3 / 8
Govt of India Announces Measures to Improve Farmers Income Through Agriculture Research
4 / 8
ಪಿಎಂ ಕೃಷಿ ಸಮ್ಮಾನ್ ಮೊತ್ತವನ್ನು ಏರಿಕೆ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ಕಳೆದ ವರ್ಷದ (2019-20) ಬಜೆಟ್ನಲ್ಲಿ ಇದಕ್ಕಾಗಿ ₹ 1.51 ಲಕ್ಷ ಕೋಟಿ ಮೀಸಲಿಡಲಾಗಿತ್ತು. ಈ ಬಾರಿ (2021-22) ಮೊತ್ತವನ್ನು ₹ 1.54 ಲಕ್ಷ ಕೋಟಿ ರೂಪಾಯಿ ಮೀಸಲಿಡುವ ಸಾಧ್ಯತೆಯಿದೆ.
5 / 8
2020-21ರ ಬಜೆಟ್ನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ₹1.44 ಲಕ್ಷ ಕೋಟಿ ಮೀಸಲಿಡಲಾಗಿತ್ತು. 2019-20ರಲ್ಲಿ ₹ 1.40 ಲಕ್ಷ ಕೋಟಿ ಮೊತ್ತ ನೀಡಲಾಗಿತ್ತು. ಅಂದರೆ, 2019-20 ಬಜೆಟ್ಗೆ ಹೋಲಿಸಿದರೆ 2020-21ರ ಬಜೆಟ್ನಲ್ಲಿ ಗ್ರಾಮಾಭಿವೃದ್ಧಿಗೆ ನೀಡಿದ ಮೊತ್ತದಲ್ಲಿ ಏರಿಕೆಯಾಗಿತ್ತು. ಈ ವರ್ಷದ ಪರಿಸ್ಥಿತಿ ಗಮನಿಸಿದರೆ, ಈ ಮೊತ್ತ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
6 / 8
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ, 2019-20ರಲ್ಲಿ ₹ 9,682 ಕೋಟಿ ನಿಗದಿಪಡಿಸಲಾಗಿತ್ತು. ಈ ಮೊತ್ತ 2020-21ರಲ್ಲಿ ₹ 11,127 ಕೋಟಿ ರೂ.ಗೆ ಏರಿಕೆಯಾಗಿತ್ತು. ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ, 2019-20ರಲ್ಲಿ ₹ 14,000 ಕೋಟಿ ನಿಗದಿಪಡಿಸಲಾಗಿತ್ತು. 2020-21ರಲ್ಲಿ ಈ ಮೊತ್ತವನ್ನು ₹ 15,695 ಕೋಟಿಗೆ ಹೆಚ್ಚಿಸಲಾಗಿತ್ತು.
7 / 8
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಡಿಸೆಂಬರ್ 1, 2018ರಂದು ಜಾರಿಗೆ ಬಂತು. ಈ ಯೋಜನೆಯಂತೆ ರೈತರು ವಾರ್ಷಿಕ ₹ 6,000 ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ವೆಬ್ಸೈಟ್ನ ಮಾಹಿತಿಯಂತೆ, 11.47 ಕೋಟಿ ರೈತರು ಯೋಜನೆಯ ಲಾಭ ಪಡೆಯುತ್ತಿದ್ದಾರೆ.