ಈ ಬಾರಿಯ ಬಜೆಟ್ನಲ್ಲಿ ಭಾರತದ ಆಮದು ಸುಂಕ ರಚನೆಯಲ್ಲಿ ಮಹತ್ವದ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ. ರಫ್ತು ಮಾಡುವ ಉತ್ಪನ್ನಗಳ ತೆರಿಗೆ ಕಡಿಮೆ ಮಾಡಲು, ಸಿದ್ಧ ಉತ್ಪನ್ನಗಳ ಆಮದಿನ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ಮೂಲಕ ಮೌಲ್ಯವರ್ಧನೆಗೆ ಕೇಂದ್ರ ಒತ್ತು ನೀಡಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಿಥೇನ್ ಆಲ್ಕೋಹಾಲ್, ಅಸಿಡಿಕ್ ಆ್ಯಸಿಡ್ ಮತ್ತು ಪಿವಿಸಿಯಂತಹ ರಾಸಾಯನಿಕಗಳನ್ನು ಉತ್ಪಾದಿಸಲು ಬಳಸುವ ವಸ್ತುಗಳಿಗೆ ಸುಂಕ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಕಟ್ಟಡ ನಿರ್ಮಾಣ, ಆರೋಗ್ಯ ಕೇಂದ್ರ, ಎಲೆಕ್ಟ್ರಾನಿಕ್, ವಾಹನ ಸೇರಿ ಇತರ ಕೈಗಾರಿಕೆಯಲ್ಲಿ ಪಿವಿಸಿ ಬಳಕೆ ಆಗುತ್ತದೆ. ಕರಕುಶಲ ವಸ್ತುಗಳ ಬಳಕೆಗೆ ಸಿದ್ಧಗೊಳ್ಳುವ ಕಚ್ಚಾ ವಸ್ತುಗಳಿಗೆ ಸುಂಕ ಕಡಿಮೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ರಫ್ತಿಗೆ ಒತ್ತು ನೀಡಲು ಚಿಂತಿಸಲಾಗಿದೆ.
ಆಮದು ಮಾಡಿಕೊಳ್ಳುವ ರಬ್ಬರ್, ಚರ್ಮ ಹಾಗೂ ಪ್ಲಾಸ್ಟಿಕ್ನ ಸಿದ್ಧ ವಸ್ತುಗಳಿಗೆ ಹೆಚ್ಚಿನ ಸುಂಕ ಹೇರಲು ಕೇಂದ್ರ ಮುಂದಾಗಿದೆ. ಪ್ರಸ್ತುತ, ಆಮದಾಗುವ ರಬ್ಬರ್ ವಸ್ತುಗಳಿಗೆ ಶೇ 3-20, ಚರ್ಮದ ವಸ್ತುಗಳಿಗೆ ಶೇ 10-30 ಹಾಗೂ ಪ್ಲಾಸ್ಟಿಕ್ ವಸ್ತುಗಳಿಗೆ ಶೇ 10-15 ತೆರಿಗೆ ವಿಧಿಸಲಾಗುತ್ತಿದೆ.
ಮೇಕ್ ಇನ್ ಇಂಡಿಯಾಗೆ ಒತ್ತು ನೀಡುವ ದೃಷ್ಟಿಯಿಂದ ಆಮದಾಗುತ್ತಿರುವ ಕಡಿಮೆ ಸುಂಕದ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಟೈರ್, ಎಸಿ ಮತ್ತು ಟಿವಿ ಆಮದಿನ ತೆರಿಗೆ ಹೆಚ್ಚು ಮಾಡುವ ಸಾಧ್ಯತೆ ಇದೆ. ಮೇಕ್ ಇನ್ ಇಂಡಿಯಾಗೆ ಒತ್ತು ಆಮದು ಮಾಡಿಕೊಳ್ಳುವ ಸಿದ್ಧ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಿದರೆ, ಸಹಜವಾಗಿಯೇ ಆಮದು ಕಡಿಮೆ ಆಗುತ್ತದೆ. ಆದಾಗ್ಯೂ ಆಮದು ಮಾಡಿಕೊಂಡರೆ ಆ ವಸ್ತುಗಳ ಬೆಲೆ ಹೆಚ್ಚಲಿದೆ. ಆಗ ಜನರು ಭಾರತದಲ್ಲಿ ತಯಾರಿಸುವ ವಸ್ತುಗಳತ್ತ ಮುಖ ಮಾಡುತ್ತಾರೆ. ಸರ್ಕಾರ ಈ ಕ್ರಮಕ್ಕೆ ಮುಂದಾದರೆ, ವಿದೇಶದಿಂದ ಅಪೂರ್ಣ ವಸ್ತುಗಳನ್ನು ತರಿಸಿಕೊಂಡು ಭಾರತದಲ್ಲಿ ಅದಕ್ಕೆ ಅಂತಿಮರೂಪಕೊಡುವ ಕೆಲಸಕ್ಕೆ ಹೆಚ್ಚು ಒತ್ತು ಸಿಗಲಿದೆ.
Budget 2021 | ಬ್ರಿಟಿಷ್ ಭಾರತದ ಮೊದಲ ಬಜೆಟ್ 161 ವರ್ಷಗಳ ಹಿಂದೆ ಮಂಡನೆಯಾಗಿತ್ತು!