ಜೀವ ತೆಗೆಯೋ ಸ್ಪಾಟ್ ಆಗ್ತಿದೆ ಭದ್ರಾ ನಾಲೆ: ಕಣ್ಣೆದುರೇ ಹೋಗ್ತಿದೆ ಜನ-ಜಾನುವಾರುಗಳ ಪ್ರಾಣ!

ಜೀವ ತೆಗೆಯೋ ಸ್ಪಾಟ್ ಆಗ್ತಿದೆ ಭದ್ರಾ ನಾಲೆ: ಕಣ್ಣೆದುರೇ ಹೋಗ್ತಿದೆ ಜನ-ಜಾನುವಾರುಗಳ ಪ್ರಾಣ!

ಚಿಕ್ಕಮಗಳೂರು: ನಾಲೆಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸ್ತಿದ್ದ ಹಸುವೊಂದನ್ನ ರಕ್ಷಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳ ಸಮೀಪ ನಡೆದಿದೆ. ನಾಲೆಗೆ ಬಿದ್ದು ತೇಲಿ ಹೋಗುತ್ತಿರುವ ವಿಚಾರವನ್ನ ತಿಳಿದ ಸ್ಥಳೀಯರು, ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ತೇಲಿ ಹೋಗ್ತಿದ್ದ ಹಸುವನ್ನ ರಕ್ಷಿಸಿ ಮಾನವೀಯತೆ ಮೆರೆದ್ರು. ಹೀಗೆ ಒಂದ್ಕಡೆ ಹಸು ಸಾವು ಬದುಕಿನ ಹೋರಾಟದಲ್ಲಿ ಅದೃಷ್ಟವಶಾತ್ ಬದುಕುಳಿದಿದ್ರೆ ಇನ್ನೊಂದೆಡೆ ತರೀಕೆರೆ ಸಮೀಪದ ಹುಣಸಘಟ್ಟದಲ್ಲಿ ಹಸುವನ್ನ ರಕ್ಷಿಸಲು ಸ್ಥಳೀಯರು ಮಾಡಿದ […]

pruthvi Shankar

|

Nov 15, 2020 | 5:26 PM

ಚಿಕ್ಕಮಗಳೂರು: ನಾಲೆಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸ್ತಿದ್ದ ಹಸುವೊಂದನ್ನ ರಕ್ಷಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳ ಸಮೀಪ ನಡೆದಿದೆ.

ನಾಲೆಗೆ ಬಿದ್ದು ತೇಲಿ ಹೋಗುತ್ತಿರುವ ವಿಚಾರವನ್ನ ತಿಳಿದ ಸ್ಥಳೀಯರು, ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ತೇಲಿ ಹೋಗ್ತಿದ್ದ ಹಸುವನ್ನ ರಕ್ಷಿಸಿ ಮಾನವೀಯತೆ ಮೆರೆದ್ರು. ಹೀಗೆ ಒಂದ್ಕಡೆ ಹಸು ಸಾವು ಬದುಕಿನ ಹೋರಾಟದಲ್ಲಿ ಅದೃಷ್ಟವಶಾತ್ ಬದುಕುಳಿದಿದ್ರೆ ಇನ್ನೊಂದೆಡೆ ತರೀಕೆರೆ ಸಮೀಪದ ಹುಣಸಘಟ್ಟದಲ್ಲಿ ಹಸುವನ್ನ ರಕ್ಷಿಸಲು ಸ್ಥಳೀಯರು ಮಾಡಿದ ಪ್ರಯತ್ನ ಫಲಿಸಲಿಲ್ಲ.

ಕಣ್ಣೆದುರೇ ಹಸು ನೀರುಪಾಲಾಗಿದನ್ನ ಕಂಡು ಜನ ಮರುಗಿದ್ದಾರೆ.. ಜೆಸಿಬಿಯನ್ನ ನಾಲೆ ಬಳಿ ತೆಗೆದುಕೊಂಡು ಹೋದ್ರೂ ಕೂಡ ಹಸುವನ್ನ ರಕ್ಷಿಸಲು ಸಾಧ್ಯವಾಗಿಲ್ಲ. ಹಸುವನ್ನ ರಕ್ಷಿಸೋ ಅವಕಾಶವಿದ್ರೂ ಕೂಡ ಕಣ್ಣೆದುರೇ ಹಸು ನೀರುಪಾಲಾಗಿದನ್ನ ಕಂಡು ಜನರು ಮರುಗಿದ್ದಾರೆ. ಇನ್ನೂ ಕಳೆದ 2 ದಿನದ ಹಿಂದೆಯಷ್ಟೇ ದೋರನಾಳು ಸಮೀಪ ವಿಶ್ವಾಸ್ ಎಂಬ ಯುವಕ ಕೂಡ ನೀರಲ್ಲಿ ಮುಳುಗಿ ಕಣ್ಣೆದುರೇ ಸಾವನ್ನಪ್ಪಿದ್ದ. ಈ ಸಂದರ್ಭದಲ್ಲೂ ಕೂಡ ನಾಲ್ವರು, ಮುಳುಗ್ತಿದ್ದ ಯುವಕನನ್ನ ರಕ್ಷಿಸಲು ಸುಮಾರು 3 ನಿಮಿಷ ಮಾಡಿದ ಹೋರಾಟ ವಿಫಲವಾಗಿತ್ತು.

ಯುವಕ ಕಣ್ಣೆದುರೇ ಸಾವನ್ನಪ್ಪಿದ.. ಮುಳುಗುತ್ತಿದ್ದ ಯುವಕನಿಗೆ ತಮ್ಮ ಶರ್ಟ್ಗಳನ್ನೇ ಬಿಚ್ಚಿ ಹಗ್ಗ ಮಾಡಿ ಎಸೆದ್ರೂ ಕೂಡ ಅದನ್ನ ಹಿಡಿಯಲು ಯುವಕನಿಗೆ ಸಾಧ್ಯವಾಗಿರಲಿಲ್ಲ. ಸ್ಥಳೀಯರೊಬ್ಬರು ಈ ದೃಶ್ಯವನ್ನ ಚಿತ್ರಿಕರಿಸಿದ್ರು. ಕೊನೆಗೆ ಯುವಕ ಕಣ್ಣೆದುರೇ ಸಾವನ್ನಪ್ಪಿದ್ದನ್ನ ಕಂಡು ಜನರು ಕಂಬನಿ ಮಿಡಿದಿದ್ರು. ಇದಕ್ಕೂ ಮುನ್ನ ಇತ್ತೀಚಿಗೆ ಇದೇ ನಾಲೆಯಲ್ಲಿ 5ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಹೀಗಾಗಿ ಭದ್ರಾ ನಾಲೆಯ ಪಕ್ಕದಲ್ಲಿ ಬೇಲಿ ಅಥವಾ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸ್ನಾನಕ್ಕೆಂದು ಗೆಳೆಯರೊಡನೆ ನಾಲೆಗೆ ಇಳಿದವ ನೋಡ ನೋಡ್ತಿದ್ದಂತೆ ಮುಳುಗಿಬಿಟ್ಟ..

Follow us on

Related Stories

Most Read Stories

Click on your DTH Provider to Add TV9 Kannada