ಪ್ರಥಮ ಮಹಿಳೆಯಿಂದ ಶಕ್ತಿ ಹಟ್‌ನಲ್ಲಿ ಮಾಸ್ಕ್ ತಯಾರಿ

  • TV9 Web Team
  • Published On - 8:59 AM, 23 Apr 2020
ಪ್ರಥಮ ಮಹಿಳೆಯಿಂದ ಶಕ್ತಿ ಹಟ್‌ನಲ್ಲಿ ಮಾಸ್ಕ್ ತಯಾರಿ

ನವದೆಹಲಿ: ಕೊರೊನಾ ವೈರೆಸ್​ನ ವಿರುದ್ಧದ ಹೋರಾಟಕ್ಕೆ ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರು ಪ್ರೆಸಿಡೆಂಟ್‌ ಎಸ್ಟೇಟ್‌ನಲ್ಲಿರುವ ಶಕ್ತಿ ಹಟ್​ನಲ್ಲಿ ಮಾಸ್ಕ್​ಗಳನ್ನು ಹೊಲಿಯುವುದರ ಮೂಲಕ ಮುಂದಾಗಿದ್ದಾರೆ.

ಮಾಸ್ಕ್ ಹೊಲಿಯುವ ಮೂಲಕ, ಎಲ್ಲರೂ ಒಟ್ಟಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂಬ ಸಂದೇಶವನ್ನು ಸವಿತಾ ಕೋವಿಂದ್ ನೀಡಿದ್ದಾರೆ. ತಾವು ತಯಾರಿಸಿದ ಮಾಸ್ಕ್​ಗಳನ್ನ ದೆಹಲಿಯ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ, ವಸತಿ ಗೃಹಗಳಿಗೆ ವಿತರಿಸಲಿದ್ದಾರೆ.

ಮಾಸ್ಕ್ ಧರಿಸುವುದರ ಜೊತೆಗೆ ಜನರು ಸಾಮಾಜಿಕ ಅಂತರ ಮತ್ತು ಸೋಂಕನ್ನು ತಡೆಗಟ್ಟುವ ಕ್ರಮಗಳನ್ನು ನಿಭಾಯಿಸಬೇಕು ಎಂದು ಈಗಾಗಲೇ ಆರೋಗ್ಯ ತಜ್ಞರು ಶಿಫಾರಸು ಮಾಡಿದ್ದಾರೆ. ಹೀಗಾಗಿ ಮಾಸ್ಕ್​ಗಳ ಬಳಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಿದೆ. ದೃಶ್ಯದಲ್ಲಿ ನೋಡಬಹುದು ರಾಷ್ಟ್ರಪತಿ ಕೋವಿಂದ್‌ ಪತ್ನಿ ಸವಿತಾ ಕೋವಿಂದ್ ಅವರು ಕೂಡ ಕೆಂಪು ಬಣ್ಣದ ಬಟ್ಟೆಯ ಮಾಸ್ಕ್ ಧರಿಸಿದ್ದಾರೆ.
https://www.facebook.com/Tv9Kannada/videos/558606725074110/