30ಕ್ಕೂ ಹೆಚ್ಚು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ: ಐವರು BDA ಇಂಜಿನಿಯರ್ಸ್​ ಜೈಲುಪಾಲು

30ಕ್ಕೂ ಹೆಚ್ಚು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಐವರು BDA ಇಂಜಿನಿಯರ್​ಗಳ ಬಂಧನವಾಗಿದೆ. ಬಂಧಿತರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಪೊಲೀಸರಿಂದ ಇಂಜಿನಿಯರ್​ಗಳ ಬಂಧನವಾಗಿದೆ.

  • Publish Date - 11:54 pm, Thu, 11 February 21
30ಕ್ಕೂ ಹೆಚ್ಚು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ: ಐವರು BDA ಇಂಜಿನಿಯರ್ಸ್​ ಜೈಲುಪಾಲು
ಬಿಡಿಎ ಹೆಡ್ ಆಫೀಸ್

ಬೆಂಗಳೂರು: 30ಕ್ಕೂ ಹೆಚ್ಚು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಐವರು BDA ಇಂಜಿನಿಯರ್​ಗಳ ಬಂಧನವಾಗಿದೆ. ಬಂಧಿತರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಪೊಲೀಸರಿಂದ ಇಂಜಿನಿಯರ್​ಗಳ ಬಂಧನವಾಗಿದೆ. ಇವರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ BDA ಸೈಟ್ಸ್ ಕಬಳಿಕೆಯ ಆರೋಪ ಕೇಳಿಬಂದಿದೆ.

ಎಂ.ಎಸ್.ಶಂಕರಮೂರ್ತಿ(50), ಡಿ.ಶ್ರೀರಾಮ್(50), ಕೆ.ಎನ್.ರವಿಕುಮಾರ್(50), ಶಬ್ಬೀರ್ ಅಹ್ಮದ್(50) ಮತ್ತು ಶ್ರೀನಿವಾಸ್ ಬಂಧಿತ ಇಂಜಿಯರ್​ಗಳು. ಇಂಜಿನಿಯರ್​​ಗಳು ಹತ್ತಾರು ವರ್ಷಗಳಿಂದ BDAನಲ್ಲಿದ್ದರು.

ಲೇಔಟ್ ಭೂದಾಖಲೆ ಪರಿಶೀಲನೆ ವೇಳೆ ಇವರು ಮಾಡಿದ್ದ ಅಕ್ರಮ ಪತ್ತೆಯಾಗಿದೆ. ಇದೀಗ ಪೊಲೀಸರು, ಐವರು ಇಂಜಿನಿಯರ್​ಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್​ ಅಪ್ ‘ಮಾನ್ಯ’ತೆ!