ಭಾರತದ ಮಾರುಕಟ್ಟೆಗೆ ನೋಕಿಯಾ ಲ್ಯಾಪ್​ಟಾಪ್​; ಏನಿದರ ವೈಶಿಷ್ಟ್ಯ? ಸಿಗೋದೆಲ್ಲಿ? ಇಲ್ಲಿದೆ ಮಾಹಿತಿ

ಮನೆಯಿಂದ ಕೆಲಸ ಮಾಡುವವರು ಹಾಗೂ ಆನ್​ಲೈನ್​ ಕ್ಲಾಸ್​ಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಲ್ಯಾಪ್​ಟಾಪ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕಾರಣಕ್ಕೆ ನೋಕಿಯಾ ಲ್ಯಾಪ್​ಟಾಪ್​ ಪರಿಚಯಿಸುವ ನಿರ್ಧಾರಕ್ಕೆ ಬಂದಿದೆ ಫ್ಲಿಪ್​ಕಾರ್ಟ್​.

ಭಾರತದ ಮಾರುಕಟ್ಟೆಗೆ ನೋಕಿಯಾ ಲ್ಯಾಪ್​ಟಾಪ್​; ಏನಿದರ ವೈಶಿಷ್ಟ್ಯ? ಸಿಗೋದೆಲ್ಲಿ? ಇಲ್ಲಿದೆ ಮಾಹಿತಿ
ನೋಕಿಯಾ ಲ್ಯಾಪ್​ಟಾಪ್
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 14, 2020 | 6:38 PM

ಫ್ಲಿಪ್​ಕಾರ್ಟ್​ ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಗೆ ನೋಕಿಯಾ ಲ್ಯಾಪ್​ಟಾಪ್ ಪರಿಚಯಿಸುತ್ತಿದೆ. ಮನೆಯಿಂದ ಕೆಲಸ ಮಾಡುವವರು ಹಾಗೂ ಆನ್​ಲೈನ್​ ಕ್ಲಾಸ್​ಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಲ್ಯಾಪ್​ಟಾಪ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಕಾರಣಕ್ಕೆ ನೋಕಿಯಾ ಲ್ಯಾಪ್​ಟಾಪ್​ ಪರಿಚಯಿಸುವ ನಿರ್ಧಾರಕ್ಕೆ ಬಂದಿದೆ ಫ್ಲಿಪ್​ಕಾರ್ಟ್​.

ವಾಲ್​ಮಾರ್ಟ್​ ಒಡೆತನದ ಫ್ಲಿಪ್​ಕಾರ್ಟ್​ ಇಂದು ಈ ಘೋಷಣೆ ಮಾಡಿದೆ. ನೋಕಿಯಾ ಪ್ಯೂರ್​ಬಾಕ್ಸ್​ ಎಕ್ಸ್​14 Nokia PureBook X14 ಲ್ಯಾಪ್​​ಟಾಪ್​ ಅನ್ನು ಭಾರತದ ಮಾರುಕಟ್ಟೆಗೆ ತರುತ್ತಿದೆ. ಇದರ ಬೆಲೆ ₹ 59,990.

ಭಾರತದಲ್ಲಿ ಈ ಮೊದಲು ನೋಕಿಯಾ ಮೊಬೈಲ್​ ಮೇಲುಗೈ ಸಾಧಿಸಿತ್ತು. ಆದರೆ ಆ್ಯಂಡ್ರಾಯ್ಡ್​ ಬಂದ ನಂತರ ನೋಕಿಯಾ ಮಾರುಕಟ್ಟೆ ಬಿದ್ದು ಹೋಗಿತ್ತು. ನಂತರ ತಡವಾಗಿ ಆ್ಯಂಡ್ರಾಯ್ಡ್​ ಮೊಬೈಲ್​ಗಳನ್ನು ನೋಕಿಯಾ ಪರಿಚಯಿಸಿತ್ತು. ಈಗ ನೋಕಿಯಾ ತನ್ನ ಲ್ಯಾಪ್​ಟಾಪ್​ ಪ್ರಾಡಕ್ಟ್​ಗಳನ್ನು ಭಾರತದ ಗ್ರಾಹಕರ ಮುಂದಿಡುತ್ತಿದೆ.

ಭಾರತೀಯರು ಡೆಲ್​, ಎಚ್​​ಪಿ, ಲೆನೊವೊ, ಏಸರ್​ ಹಾಗೂ ಆಸೂಸ್​ ಲ್ಯಾಪ್​ಟಾಪ್​ ಬ್ರ್ಯಾಂಡ್​​ಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಈಗ ಈ ಕಂಪೆನಿಗಳಿಗೆ ಸ್ಪರ್ಧೆ ನೀಡುವಲ್ಲಿ ನೋಕಿಯಾ ಯಶಸ್ವಿಯಾಗಲಿದೆಯೇ ಎನ್ನುವ ಕುತೂಹಲ ಕೂಡ ಮೂಡಿದೆ.

ಭಾರತದ ಗ್ರಾಹಕರಿಗೆ ನೋಕಿಯಾ ಲ್ಯಾಪ್​ಟಾಪ್​ ಪರಿಚಯಿಸುತ್ತಿರುವ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಫ್ಲಿಪ್​ಕಾರ್ಟ್​, ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ವರ್ಕ್​ ಫ್ರಮ್​ ಹೋಮ್​ ಭಾರತದಲ್ಲಿ ಹೆಚ್ಚುತ್ತಿದೆ. ಜನರು ಉತ್ತಮ ಗುಣಮಟ್ಟದ ಲ್ಯಾಪ್​ಟಾಪ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ, ನೋಕಿಯಾ ಲ್ಯಾಪ್​ಟಾಪ್​ ಪರಿಚಯಿಸೋಕೆ ಇದು ಸರಿಯಾದ ಸಮಯ ಅನ್ನೋದು ನಮ್ಮ ಆಲೋಚನೆ. ಹೀಗಾಗಿ, ನಾವು ನೋಕಿಯಾ ಲ್ಯಾಪ್​ಟಾಪ್​ ಭಾರತಕ್ಕೆ ತಂದಿದ್ದೇವೆ ಎಂದು ತಿಳಿಸಿದೆ.

ಹೀಗಿದೆ ನೋಕಿಯಾ ಪ್ಯೂರ್​ಬಾಕ್ಸ್​ ಎಕ್ಸ್​14 1.1 ಕೆಜಿ ತೂಕ, 14 ಇಂಚು ಫುಲ್​ ಎಚ್​​ಡಿ ಸ್ಕ್ರೀನ್​, ಡಾಲ್ಬಿ ವಿಷನ್​ ಮತ್ತು ಇಂಟೆಲ್​ ಐ5-10ನೇ ಜನರೇಷನ್​ ಕ್ವಾಡ್​ ಕೋರ್​ ಪ್ರೊಸೆಸರ್. ಡಿಸೆಂಬರ್​ 18ರಿಂದ ಪ್ರಿ ಆರ್ಡರ್​ ಬುಕ್​ ಮಾಡಬಹುದು.

ನೋಕಿಯಾ ಟಿವಿ ಭಾರತದ ಮಾರುಕಟ್ಟೆಗೆ ಈಗಾಗಲೇ ಕೆಲ ನೋಕಿಯಾ ಟಿವಿಗಳು ಪರಿಚಯಗೊಂಡಿವೆ. ಆದರೆ, ಬೆಲೆ ಜಾಸ್ತಿ ಇದ್ದಿದ್ದರಿಂದ ಭಾರತದಲ್ಲಿ ನೋಕಿಯಾ ಟಿವಿ ಅಷ್ಟಾಗಿ ಜನಪ್ರಿಯತೆ ಪಡೆದುಕೊಂಡಿಲ್ಲ.

ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada