ಕೇಂದ್ರ ಬಜೆಟ್​ ಮಂಡನೆಗೆ ಇನ್ನೊಂದು ವಾರ ಬಾಕಿ; ಪೂರ್ವಭಾವಿಯಾಗಿ ನಡೆದ ಹಲ್ವಾ ಸಮಾರಂಭ, ಮೊಬೈಲ್ ಆ್ಯಪ್ ಉದ್ಘಾಟನೆ

ಬಜೆಟ್​ ಪೇಪರ್​ ಪ್ರಿಂಟ್​ಗೆ ಹೋಗುವ ಮೊದಲು ಪ್ರತಿವರ್ಷ ಹಲ್ವಾ ಸಮಾರಂಭ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಬಜೆಟ್​ ಪೇಪರ್​ ಪ್ರಿಂಟ್ ಆಗುತ್ತಿಲ್ಲ. ಅದರ ಬದಲು ಇಂದು ನಿರ್ಮಲಾ ಸೀತಾರಾಮನ್​ ಯೂನಿಯನ್ ಬಜೆಟ್​ ಮೊಬೈಲ್​ ಆ್ಯಪ್​ನ್ನು ಬಿಡುಗಡೆ ಮಾಡಿದ್ದಾರೆ.

  • TV9 Web Team
  • Published On - 18:53 PM, 23 Jan 2021
ಕೇಂದ್ರ ಬಜೆಟ್​ ಮಂಡನೆಗೆ ಇನ್ನೊಂದು ವಾರ ಬಾಕಿ; ಪೂರ್ವಭಾವಿಯಾಗಿ ನಡೆದ ಹಲ್ವಾ ಸಮಾರಂಭ, ಮೊಬೈಲ್ ಆ್ಯಪ್ ಉದ್ಘಾಟನೆ
ಹಲ್ವಾ ಸಮಾರಂಭದಲ್ಲಿ ಪಾಲ್ಗೊಂಡ ನಿರ್ಮಲಾ ಸೀತಾರಾಮನ್​, ಅನುರಾಗ್ ಠಾಕೂರ್ ಇತರರು..

ನವದೆಹಲಿ: ಬಜೆಟ್​ ಪೂರ್ವಭಾವಿಯಾಗಿ ಪ್ರತಿವರ್ಷವೂ ನಡೆಯುವ ಹಲ್ವಾ ಸಮಾರಂಭ ಇಂದು ನಡೆಯಿತು. 2021-22ನೇ ಸಾಲಿನ ಬಜೆಟ್​ನ್ನು ಫೆ.1ರಂದು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆಯವ್ಯಯ ಮಂಡಿಸಲಿದ್ದಾರೆ.

ಬಜೆಟ್​ ಪೂರ್ವ 7-10 ದಿನ ಮೊದಲು ಹಲ್ವಾ ತಯಾರಿಸುವ ಸಂಪ್ರದಾಯ ಸುಮಾರು 70 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಇಂದು ಕೂಡ ಉತ್ತರ ಬ್ಲಾಕ್​ನಲ್ಲಿ ನಡೆದ ಹಲ್ವಾ ತಯಾರಿಕೆ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಹಲ್ವಾವನ್ನು ನಂತರ ಹಣಕಾಸು ಇಲಾಖೆಯ ಎಲ್ಲ ಸಿಬ್ಬಂದಿಗೂ ಹಂಚಲಾಯಿತು.

ಬಜೆಟ್​ ಪೇಪರ್​ ಪ್ರಿಂಟ್​ಗೆ ಹೋಗುವ ಮೊದಲು ಪ್ರತಿವರ್ಷ ಹಲ್ವಾ ಸಮಾರಂಭ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಬಜೆಟ್​ ಪೇಪರ್​ ಪ್ರಿಂಟ್ ಆಗುತ್ತಿಲ್ಲ. ಅದರ ಬದಲು ಇಂದು ನಿರ್ಮಲಾ ಸೀತಾರಾಮನ್​ ಯೂನಿಯನ್ ಬಜೆಟ್​ ಮೊಬೈಲ್​ ಆ್ಯಪ್​ನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಮೂಲಕ ಜನಸಾಮಾನ್ಯರೂ ಬಜೆಟ್​ ಕಾಪಿಗಳನ್ನು ನೋಡಬಹುದಾಗಿದೆ.

ತಮಿಳುನಾಡಿನ ಜನ, ಸಂಸ್ಕೃತಿಯ ಮೇಲೆ ಪ್ರಧಾನಿ ಮೋದಿಗಿಲ್ಲ ಗೌರವ, ಆದರೆ ನನಗಿದು ಕುಟುಂಬದಂತೆ!: ರಾಹುಲ್ ಗಾಂಧಿ