ಅಬ್ಬಾ ಸದ್ಯ! ದೇಶದಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಅಧಿಕವಾಯ್ತು..

  • TV9 Web Team
  • Published On - 6:45 AM, 11 Jun 2020
ಅಬ್ಬಾ ಸದ್ಯ! ದೇಶದಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಅಧಿಕವಾಯ್ತು..

ದೆಹಲಿ: ರಣಹಂತಕ ಕೊರೊನಾ ವೈರಸ್ ದಿನೇ ದಿನೆ ತನ್ನ ಅಟ್ಟಹಾಸವನ್ನು ಹೆಚ್ಚಿಸುತ್ತಲೇ ಬಂದಿದೆ. ಸೋಂಕಿತರ ಹಾಗೂ ಬಲಿಯಾದವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಆದರೆ ಇದೇ ಮೊದಲ ಬಾರಿಗೆ ಕೊರೊನಾದಿಂದ ಗುಣಮುಖರಾದವರ ಒಟ್ಟು ಜನರ ಸಂಖ್ಯೆ ಏಕಾಏಕಿ ಹೆಚ್ಚಿದೆ.

ಹೆಚ್‌ಟಿಯ ಕೋವಿಡ್ -19 ಡ್ಯಾಶ್‌ಬೋರ್ಡ್ ಪ್ರಕಾರ, ಮಂಗಳವಾರ ಸಂಜೆಯ ವರೆಗೆ, ಸೋಂಕಿತ ರೋಗಿಗಳಿಗಿಂತ 1,375 ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ವರದಿಯಾಗಿದೆ.

ಕಳೆದ ವಾರದಲ್ಲಿ, ರಾಷ್ಟ್ರೀಯ ಸರಾಸರಿಯಲ್ಲಿ ಪ್ರತಿದಿನ ಸುಮಾರು 4,529 ಹೊಸ ಸಕ್ರಿಯ ಪ್ರಕರಣಗಳನ್ನು ಸೇರಿಸಲಾಗುತ್ತಿತ್ತು. ಹಾಗೂ ಪ್ರತಿದಿನ 5,397 ರೋಗಿಗಳು ಸೋಂಕಿನಿಂದ ಗುಣಮುಖರಾಗುತ್ತಿದ್ದರು. ಇದೇ ಮಾದರಿಯಲ್ಲಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಈ ಅಂತರವು ವಿಸ್ತರಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಲೂ ಮುಖ್ಯ ಕಾರಣ ಅಂದ್ರೆ ಇಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಸೋಂಕಿತರಲ್ಲಿ 2.8% ಜನರು ಇಲ್ಲಿಯವರೆಗೆ ಸಾವನ್ನಪ್ಪಿರುವುದರಿಂದ, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಹಾಗೂ ಕಳೆದ ತಿಂಗಳುಗಳಿಗೆ ಹೋಲಿಸಿದರೆ ಮೇ ತಿಂಗಳಲ್ಲಿ ಚೇತರಿಕೆ ಕಾಣಿತ್ತಿರುವವರ ಸಂಖ್ಯೆ ಹೆಚ್ಚಿದೆ.

ವಿಶೇಷವಾಗಿ ಮೇ ತಿಂಗಳಿನಲ್ಲಿ ವರದಿಯಾದ 155,668 ಹೊಸ ಪ್ರಕರಣಗಳು ಬಿಡುಗಡೆಯಾಗಲು ಪ್ರಾರಂಭಿಸಿದಾಗ ಚೇತರಿಕೆಯ ವೇಗವನ್ನು ಪಡೆದುಕೊಂಡಿತು. ಮೇ 29 ರಂದು ಭಾರತವು 11,707 ಹೊಸ ಚೇತರಿಕೆಕಂಡಿರುವುದರ ಬಗ್ಗೆ ವರದಿ ಮಾಡಿದೆ. ಮಹಾರಾಷ್ಟ್ರದ ಸಹಾಯದಿಂದ ಒಂದೇ ದಿನದಲ್ಲಿ 8,381 ರೋಗಲಕ್ಷಣವಿಲ್ಲದ ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ದೇಶದಲ್ಲಿ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆ 5 ಮಿಲಿಯನ್ ದಾಟಿದೆ. ಮಂಗಳವಾರ ರಾತ್ರಿಯ ಹೊತ್ತಿಗೆ, ಭಾರತ 5,061,332 ಮಾದರಿಗಳನ್ನು ಪರೀಕ್ಷಿಸಿದೆ.