Forbes 2020 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ ಏಕೈಕ ನಟ, ಯಾರು ಗೊತ್ತಾ?

2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ವಿಶ್ವದ ಕಲಾವಿದರ ಪಟ್ಟಿಯನ್ನು ಫೋರ್ಬ್ಸ್​ ಬಿಡುಗಡೆ ಮಾಡಿದೆ. ಈ ಪೈಕಿ ಅಕ್ಷಯ್​ ಕುಮಾರ್​ 52ನೇ ಸ್ಥಾನದಲ್ಲಿದ್ದಾರೆ.

Forbes 2020 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ ಏಕೈಕ ನಟ, ಯಾರು ಗೊತ್ತಾ?
ಸಾಂದರ್ಭಿಕ ಚಿತ್ರ
Rajesh Duggumane

|

Dec 17, 2020 | 3:40 PM

ಕೊರೊನಾ ವೈರಸ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಹುತೇಕ ಉದ್ಯಮಗಳು ನೆಲ ಕಚ್ಚಿವೆ. ಚಿತ್ರರಂಗವಂತೂ ತೀವ್ರ ಹೊಡೆತ ತಿಂದಿದೆ. ಇದಕ್ಕೆ ಬಾಲಿವುಡ್​ ಕೂಡ ಹೊರತಾಗಿಲ್ಲ. ಈ ಮಧ್ಯೆ ಫೋರ್ಬ್ಸ್​ ಬಿಡುಗಡೆ ಮಾಡಿರುವ ಅತಿ ಹೆಚ್ಚು ಸಂಭಾವನೆ ಪಡೆದ ನಟರ ಸಾಲಿನಲ್ಲಿ ಅಕ್ಷಯ್​ ಕುಮಾರ್​ ಕೂಡ ಸ್ಥಾನ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ವಿಶೇಷ ಎಂದರೆ, ಈ ಸಾಲಿನಲ್ಲಿರುವ ಭಾರತದ ಏಕೈಕ ನಟ ಕೂಡ ಇವರಾಗಿದ್ದಾರೆ.

2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ವಿಶ್ವದ ಸಿನಿಮಾ ಕಲಾವಿದರ ಪಟ್ಟಿಯನ್ನು ಫೋರ್ಬ್ಸ್​ ಬಿಡುಗಡೆ ಮಾಡಿದೆ. ಈ ಪೈಕಿ ಅಕ್ಷಯ್​ ಕುಮಾರ್​ ಜಗತ್ತಿನಲ್ಲಿ 52ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್​ ಕುಮಾರ್​ 2020ರಲ್ಲಿ ಬರೋಬ್ಬರಿ 356 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಫೋರ್ಬ್ಸ್​ ತಿಳಿಸಿದೆ.

ಅನೇಕ ಸಿನಿಮಾಗಳು ತೆರೆಗೆ ಬರೋಕೆ ಸಿದ್ಧವಿದ್ದರೂ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಸಿನಿಮಾಗಳನ್ನು ರಿಲೀಸ್​ ಮಾಡುತ್ತಿಲ್ಲ. ಅನೇಕರು OTT ಮೊರೆ ಹೋಗಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ಲಕ್ಷ್ಮಿ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗಿತ್ತು. ಈ ಬಾರಿ ತೆರೆಕಂಡ ಅವರ ಏಕೈಕ ಚಿತ್ರ ಇದಾಗಿದೆ. ಇದರ ಜೊತೆಗೆ ಅಕ್ಷಯ್​ ಕುಮಾರ್​​ ಬೆಲ್​ ಬಾಟಂ, ಪೃಥ್ವಿ ರಾಜ್​ ಹಾಗೂ ಅತ್ರಂಗಿ ರೇ ಸಿನಿಮಾಗಳಲ್ಲಿ ನಟಿಸುತ್ತಿತಿದ್ದಾರೆ. ಸೂರ್ಯವಂಶಿ ಸಿನಿಮಾ ಈಗಾಲೇ ರಿಲೀಸ್​ ಆಗಬೇಕಿತ್ತು. ಆದರೆ, ಕೊರೊನಾ ವೈರಸ್​ ಕಾರಣಕ್ಕೆ ಸಿನಿಮಾವನ್ನು ಮುಂದೂಡಲಾಗಿತ್ತು. ಸಿನಿಮಾ ಸಂಭಾವನೆ ಜೊತೆಗೆ ಸಾಕಷ್ಟು ಬ್ರ್ಯಾಂಡ್​ಗಳಿಗೆ ಅಕ್ಷಯ್​ ರಾಯಭಾರಿ ಆಗಿದ್ದು, ಇದರಿಂದಲೂ ಸಾಕಷ್ಟು ಹಣ ಗಳಿಕೆ ಮಾಡುತ್ತಿದ್ದಾರೆ..

ಅಕ್ಷಯ್​ ಕುಮಾರ್​ ಗಳಿಕೆಯಲ್ಲಿ ಮಾತ್ರ ಮುಂದಿಲ್ಲ. ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ 29 ಕೋಟಿ ರೂಪಾಯಿ ನೀಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಒಟ್ಟೂ 13.1 ಕೋಟಿ ಹಿಂಬಾಲಕರಿದ್ದಾರೆ.

ಅವಹೇಳನಕಾರಿ ವಿಡಿಯೋ: ಯೂಟ್ಯೂಬರ್​ಗೆ ಮಾನನಷ್ಟ ನೋಟಿಸ್ ಕಳುಹಿಸಿದ ಅಕ್ಷಯ್​ ಕುಮಾರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada