ಕುಮಾರಣ್ಣ.. ದಯವಿಟ್ಟು ನನ್ನ ಅಂತ್ಯಸಂಸ್ಕಾರಕ್ಕೆ ಬನ್ನಿ -ಸಾಯುವ ಮುನ್ನ HDKಗೆ ಪತ್ರ ಬರೆದ ಅಭಿಮಾನಿ

ಸಾಯುವ ಮುನ್ನ ವ್ಯಕ್ತಿಯೊಬ್ಬ ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಪತ್ರ ಬರೆದು ತನ್ನ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ ಮಾಡಿಕೊಂಡಿರುವ ಮನಮಿಡಿಯುವ ಸಂಗತಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

  • TV9 Web Team
  • Published On - 21:47 PM, 16 Jan 2021
ಕುಮಾರಣ್ಣ.. ದಯವಿಟ್ಟು ನನ್ನ ಅಂತ್ಯಸಂಸ್ಕಾರಕ್ಕೆ ಬನ್ನಿ -ಸಾಯುವ ಮುನ್ನ HDKಗೆ ಪತ್ರ ಬರೆದ ಅಭಿಮಾನಿ
ಮೃತ ಅಭಿಮಾನಿ ಜಯರಾಂ (ಎಡ); H.D.ಕುಮಾರಸ್ವಾಮಿ (ಬಲ)

ರಾಮನಗರ: ಸಾಯುವ ಮುನ್ನ ವ್ಯಕ್ತಿಯೊಬ್ಬ ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಪತ್ರ ಬರೆದು ತನ್ನ ಅಂತ್ಯಸಂಸ್ಕಾರಕ್ಕೆ ಬರುವಂತೆ ಮನವಿ ಮಾಡಿಕೊಂಡಿರುವ ಮನಮಿಡಿಯುವ ಸಂಗತಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕಾಲಿನ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದ ಜಿಲ್ಲೆಯ ಗಾಂಧಿನಗರದ ನಿವಾಸಿ ಆರ್.ಜಯರಾಂ​ ಮಾಜಿ ಮುಖ್ಯಮಂತ್ರಿಗಳ ಕಟ್ಟಾ ಅಭಿಮಾನಿ. ಹೀಗಾಗಿ, ತನ್ನ ಆರೋಗ್ಯ ಹದಗೆಟ್ಟು ಬದುಕಿನ ಅಂತಿಮ ಘಟ್ಟ ತಲುಪಿದ ಜಯರಾಂ ಕುಮಾರಸ್ವಾಮಿಗೆ ತನ್ನ ಶವಸಂಸ್ಕಾರಕ್ಕೆ ಬರುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜೊತೆಗೆ, ತಮ್ಮ ಬುದ್ಧಿಮಾಂದ್ಯ ಮಗನಿಗೆ ಆರ್ಥಿಕ ನೆರವು ನೀಡುವಂತೆ ಸಹ ತಮ್ಮ ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಪತ್ರ ಬರೆದ ನಂತರ ಜಯರಾಂ ಇಂದು ಸಂಜೆ ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಮದುವೆಗಾಗಿ ಪೀಡಿಸಿದ ಪ್ರೇಯಸಿಯ ಕೊಲೆ ಮಾಡಿ ಫ್ಲಾಟ್​ನಲ್ಲೇ ಹೂತಿಟ್ಟ.. 3 ತಿಂಗಳ ನಂತರ ಸಿಕ್ತು ಅಸ್ಥಿಪಂಜರ