ಮಾವನ ಅಂತಿಮ ದರ್ಶನಕ್ಕೆ.. ಹಿಂಡಲಗಾ ಜೈಲಿನಿಂದ ತೆರಳಿದ ಮಾಜಿ ಸಚಿವ ವಿನಯ್ ಕುಲಕರ್ಣಿ

ಇಂದು ನಿಧನರಾದ ತಮ್ಮ ಮಾವನ ಅಂತಿಮ ದರ್ಶನ ಪಡೆಯಲು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೋರ್ಟ್​ ಅನುಮತಿ ನೀಡಿದೆ. ಹೀಗಾಗಿ, ಇಂದು ಜಿಲ್ಲೆಯ ಹಿಂಡಲಗಾ ಜೈಲಿನಿಂದ ವಿನಯ್ ಕುಲಕರ್ಣಿ ತಮ್ಮ ಮಾವನ ಅಂತಿಮ ದರ್ಶನ ಪಡೆಯಲು ತೆರಳಿದರು.

  • TV9 Web Team
  • Published On - 18:11 PM, 24 Jan 2021
ಮಾವನ ಅಂತಿಮ ದರ್ಶನಕ್ಕೆ.. ಹಿಂಡಲಗಾ ಜೈಲಿನಿಂದ ತೆರಳಿದ ಮಾಜಿ ಸಚಿವ ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ

ಬೆಳಗಾವಿ: ಇಂದು ನಿಧನರಾದ ತಮ್ಮ ಮಾವನ ಅಂತಿಮ ದರ್ಶನ ಪಡೆಯಲು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕೋರ್ಟ್​ ಅನುಮತಿ ನೀಡಿದೆ. ಹೀಗಾಗಿ, ಇಂದು ಜಿಲ್ಲೆಯ ಹಿಂಡಲಗಾ ಜೈಲಿನಿಂದ ವಿನಯ್ ಕುಲಕರ್ಣಿ ತಮ್ಮ ಮಾವನ ಅಂತಿಮ ದರ್ಶನ ಪಡೆಯಲು ತೆರಳಿದರು.

ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ತಂದೆ ಗಂಗಪ್ಪ ಸಿಂತ್ರಿ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ಹಾಗಾಗಿ, ವಿನಯ್​ ಕುಲಕರ್ಣಿಗೆ ಗಂಗಪ್ಪ ಅವರ ಅಂತಿಮ ದರ್ಶನ ಪಡೆಯಲು ಸಿಬಿಐ ನ್ಯಾಯಾಲಯ ಅವಕಾಶ ನೀಡಿದೆ. ಹೀಗಾಗಿ, ಮಾಜಿ ಸಚಿವರನ್ನು ಇಂದು ಖಾಕಿ ಪಡೆ ಜೈಲಿನಿಂದ ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಅಂದ ಹಾಗೆ, ಗಂಗಪ್ಪ ಅವರ ಅಂತ್ಯಕ್ರಿಯೆ ಜಿಲ್ಲೆಯ ಸವದತ್ತಿಯ ಯಡ್ರಾಂವಿ ತೋಟದಲ್ಲಿ ನೆರವೇರಲಿದೆ. ವಿನಯ್ ಕುಲಕರ್ಣಿ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಕರೆದೊಯ್ದರು.

ಮಾವನ ಅಂತಿಮ ದರ್ಶನ ಪಡೆದ ವಿನಯ್​ ಕುಲಕರ್ಣಿ
ಇತ್ತ, ಮಾವನ ಅಂತಿಮ ದರ್ಶನ ಪಡೆದ ವಿನಯ್​ ಕುಲಕರ್ಣಿ ನಂತರ ಅಲ್ಲೇ ಇದ್ದ ತಮ್ಮ ಮಕ್ಕಳನ್ನು ತಬ್ಬಿಕೊಂಡು ಅತ್ತರು ಎಂದು ಹೇಳಲಾಗಿದೆ. ಆದರೆ, ಸಮಯದ ಅಭಾವದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೂ ಮುನ್ನವೇ ವಿನಯ್​ ಕುಲಕರ್ಣಿ ಅರ್ಧದಲ್ಲೇ ಹೊರಟು ಹೋದರು. ಅಂತ್ಯಕ್ರಿಯೆಗೂ ಮುನ್ನವೇ ಜೈಲಿಗೆ ವಾಪಸ್​ ಆದರು ಎಂದು ತಿಳಿದುಬಂದಿದೆ.

2 ವರ್ಷಗಳ ಹಿಂದೆ.. ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​!