30ಕ್ಕೂ ಹೆಚ್ಚು ಸೈಟ್‌ಗಳಿಗೆ ನಕಲಿ ದಾಖಲೆ‌ ಸೃಷ್ಟಿಸಿದ ಆರೋಪ: ನಾಲ್ವರು BDA ಇಂಜಿನಿಯರ್ಸ್​ ಪೊಲೀಸ್ ಕಸ್ಟಡಿಗೆ

BDA 30ಕ್ಕೂ ಹೆಚ್ಚು ಸೈಟ್‌ಗಳಿಗೆ ನಕಲಿ ದಾಖಲೆ‌ ಸೃಷ್ಟಿಸಿರುವ ಆರೋಪದಡಿ ಬಂಧನವಾಗಿದ್ದ ನಾಲ್ವರು BDA ಇಂಜಿನಿಯರ್‌ಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಫೆ.22ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ 4ನೇ ACMM ನ್ಯಾಯಾಲಯದಿಂದ ಆದೇಶ ನೀಡಲಾಗಿದೆ.

  • TV9 Web Team
  • Published On - 17:30 PM, 15 Feb 2021
ಬಿಡಿಎ ಹೆಡ್ ಆಫೀಸ್

ಬೆಂಗಳೂರು: 30ಕ್ಕೂ ಹೆಚ್ಚು ಸೈಟ್‌ಗಳಿಗೆ ನಕಲಿ ದಾಖಲೆ‌ ಸೃಷ್ಟಿಸಿರುವ ಆರೋಪದಡಿ ಬಂಧನವಾಗಿದ್ದ ನಾಲ್ವರು BDA ಇಂಜಿನಿಯರ್‌ಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಫೆ.22ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ 4ನೇ ACMM ನ್ಯಾಯಾಲಯ ಆದೇಶ ನೀಡಿದೆ. ಅರೆಸ್ಟ್​ ಆಗಿದ್ದ BDA ಉತ್ತರ ವಿಭಾಗದ ಇಂಜಿನಿಯರ್‌ಗಳಾದ ಶ್ರೀರಾಮ್‌, M.S.ಶಂಕರಮೂರ್ತಿ, K.N.ರವಿಕುಮಾರ್ ಹಾಗೂ ಶಬೀರ್​ರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ.

30ಕ್ಕೂ ಹೆಚ್ಚು ಸೈಟ್‌ಗಳಿಗೆ ನಕಲಿ ದಾಖಲೆ‌ ಸೃಷ್ಟಿಸಿರುವ ಆರೋಪದಡಿ ಐವರು BDA ಇಂಜಿನಿಯರ್‌ಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಾಧಿಕಾರದ ಆಯುಕ್ತರ ಸೂಚನೆ ಮೇರೆಗೆ ಕೇಸ್ ದಾಖಲಿಸಿ ಶೇಷಾದ್ರಿಪುರಂ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದರು.

ಇದನ್ನೂ ಓದಿ: 30ಕ್ಕೂ ಹೆಚ್ಚು ಸೈಟ್​ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ: ಐವರು BDA ಇಂಜಿನಿಯರ್ಸ್​ ಜೈಲುಪಾಲು