ಭೀಮಾ ನದಿಯಲ್ಲಿ ಈಜಲು ಹೋದ ನಾಲ್ಕು ಯುವಕರು ನೀರುಪಾಲು

ಭೀಮಾ ನದಿಯಲ್ಲಿ ಈಜಲು ಹೋದ ನಾಲ್ಕು ಯುವಕರು ನೀರುಪಾಲು

ಯಾದಗಿರಿ: ಭೀಮಾ ನದಿಯಲ್ಲಿ ಈಜಲು ಹೋಗಿ ನಾಲ್ಕು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಗುರಸಣಗಿ ಬಳಿಯ ನಡೆದಿದೆ. ಯಾದಗಿರಿ ನಗರದ ಅಜೀಜ್ ಕಾಲೋನಿಯ ಯುವಕರಾದ ಅಮನ್ (16), ಅಯಾನ್ (16), ಇರ್ಫಾನ್ (17) ಹಾಗೂ ರಿಹಾನ್ (16) ನೀರುಪಾಲಾದ ಯುವಕರು.

ಈಜಲು ತೆರಳಿದ್ದ ಐವರ ಪೈಕಿ ಓರ್ವ ಅಪಾಯದಿಂದ ಪಾರಾಗಿದ್ದು, ಮೃತದೇಹಗಳಿಗಾಗಿ ಅಗ್ನಿ ಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸುತ್ತಿದೆ. ಸ್ಥಳಕ್ಕೆ ಯಾದಗಿರಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click on your DTH Provider to Add TV9 Kannada