ಮೈಸೂರು: ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸರ್ಕಾರದಿಂದ ನೀಡಲಾಗುವ ಗೌರವಧನ ಸಿಗದೇ ಕಳೆದ 3 ತಿಂಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಸರ್ಕಾರದಿಂದ ಬರುವ ಗೌರವ ಧನವನ್ನೇ ಕೆಲವು ಕುಟುಂಬಗಳು ನಂಬಿಕೊಂಡಿದ್ದು ಜೀವನ ನಿರ್ವಹಣೆಗೆ ಹಣವಿಲ್ಲದೆ ಪರದಾಡಿತ್ತಿವೆ.
ಪ್ರತಿ ತಿಂಗಳು ಸರ್ಕಾರದಿಂದ 10,000 ರೂ ಗೌರವಧನ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಕೊರೊನಾ ಮಹಾಮಾರಿ ಎಫೆಕ್ಟ್ ನಿಂದಾಗಿ 3 ತಿಂಗಳಿಂದ ಹಣ ಕೈಸೇರಿಲ್ಲ.
ರಾಜ್ಯದಲ್ಲಿ ಒಟ್ಟು 3,900 ಜನರು ಈ ಗೌರವ ಧನ ಪಡೆಯುತ್ತಿದ್ದು, ಮೈಸೂರು ಒಂದರಲ್ಲೇ 110 ಮಂದಿ ಗೌರವ ಧನ ಪಡೆಯುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರೆ ಕೊರೊನಾ ಕೆಲಸದಲ್ಲಿ ತೊಡಗಿರುವ ಕಾರಣ ಗೌರವ ಧನ ತಡವಾಗುತ್ತಿದೆಯೆಂದು ಕಾರಣ ನೀಡುತ್ತಿದ್ದಾರೆ. ಆದರೆ ಗೌರವ ಧನ ಕೈಸೇರದೆ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ದಿಕ್ಕು ತೋಚದಂತ್ತಾಗಿದೆ.