New Bank Rules: ಗ್ರಾಹಕರೇ ಇತ್ತ ಗಮನಿಸಿ, ನಾಳೆಯಿಂದ ಬ್ಯಾಂಕ್ ಆಫ್ ಬರೋಡಾ ನಿಯಮದಲ್ಲಿ ಆಗಲಿದೆ ಬದಲಾವಣೆ

New Bank Rules: ಗ್ರಾಹಕರೇ ಇತ್ತ ಗಮನಿಸಿ, ನಾಳೆಯಿಂದ ಬ್ಯಾಂಕ್ ಆಫ್ ಬರೋಡಾ ನಿಯಮದಲ್ಲಿ ಆಗಲಿದೆ ಬದಲಾವಣೆ
ಪ್ರಾತಿನಿಧಿಕ ಚಿತ್ರ

New Bank Rules: ದೇಶದ ಎರಡು ಪ್ರಮುಖ ಬ್ಯಾಂಕ್​ಗಳ ನಿಯಮಗಳಲ್ಲಿ ಕೆಲ ಬದಲಾವಣೆಯಾಗಲಿವೆ. ನೀವು ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್​ಗಳ ಗ್ರಾಹಕರಾಗಿದ್ದಲ್ಲಿ ಒಮ್ಮೆ ಈ ಬರಹ ಓದುವುದು ಉತ್ತಮ.

guruganesh bhat

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 28, 2021 | 6:31 PM

ದೇಶದ ಪ್ರಮುಖ ಬ್ಯಾಂಕ್​ ಒಂದರ ನಿಯಮಗಳಲ್ಲಿ ಸೋಮವಾರದಿಂದ (ಫೆ.28) ಕೆಲ ಬದಲಾವಣೆಗಳು ಆಗಲಿವೆ. ನೀವು ಹಿಂದೊಮ್ಮೆ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್​ನ ಗ್ರಾಹಕರಾಗಿದ್ದಲ್ಲಿ ಈಗಾಗಲೇ ಸಹಜವಾಗಿ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಾಗಿ ಬದಲಾಗಿರುತ್ತೀರಿ. ಇಷ್ಟು ದಿನ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್​ಗಳ ಇ-ವಿಜಯಾ, ಇ-ದೇನಾ ಸೌಲಭ್ಯಗಳನ್ನು ಬಳಸುತ್ತಿದ್ದಲ್ಲಿ ನಾಳೆಯಿಂದ ಈಗಿನ IFSC ಕೋಡ್​ಗಳನ್ನು ಬಳಸಲು ಸಾಧ್ಯವಾಗದು. ನೀವು ಬ್ಯಾಂಕ್​ ಆಫ್ ಬರೋಡಾದ ಹೊಸ IFSC ಕೋಡ್​ಗಳನ್ನು ಪಡೆಯುವ ಮೂಲಕ ವ್ಯವಹಾರ ನಡೆಸಬಹುದು ಎಂದು ಬ್ಯಾಂಕ್ ತಿಳಿಸಿದೆ.

ಅಂದಹಾಗೆ, ಬ್ಯಾಂಕ್ ಆಫ್ ಬರೋಡಾದ ವೆಬ್​ಸೈಟ್​ ಮೂಲಕ ಹೊಸ IFSC ಕೋಡ್​ ಪಡೆಯಬಹುದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ 1800 258 1700 ಟೋಲ್​ಫ್ರೀ ನಂಬರ್ ಒದಗಿಸಿರುವ ಬ್ಯಾಂಕ್, 84220 09988 ನಂಬರ್​ಗೆ ಕರೆ ಮಾಡುವ ಮೂಲಕವೂ ಹೊಸ ಕೋಡ್​ ಪಡೆಯಬಹುದು ಎಂದು ತಿಳಿಸಿದೆ.

ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್​ಗಳು ವಿಲೀನಗೊಂಡ ನಂತರ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿರುವ ಬ್ಯಾಂಕ್ ಆಫ್ ಬರೋಡಾ, ಹೊಸ IFSC ಕೋಡ್​ ಪಡೆಯುವಂತೆ ತನ್ನ ಗ್ರಾಹಕರ ಬಳಿ ಈ ಮೂಲಕ ಮನವಿ ಮಾಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ ಗ್ರಾಹಕರೂ ಇತ್ತ ಗಮನಿಸಿ IFSC ಕೋಡ್​ಗೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್​ ಸಹ ಕೆಲ ಬದಲಾವಣೆಗಳನ್ನು ನಾಳೆಯಿಂದ (ಮಾರ್ಚ್ 1) ಜಾರಿ ಮಾಡಲಿದೆ. ತನ್ನ ಸಹವರ್ತಿ ಬ್ಯಾಂಕ್​ಗಳಾದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ IFSC ಕೋಡ್ ಮತ್ತು ಚೆಕ್​ಬುಕ್​ಗಳ ಮೂಲಕವೇ ವ್ಯವಹಾರ ನಡೆಸುತ್ತಿರುವ ಗ್ರಾಹಕರ ಬಳಿ ಕೆಲ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದೆ.

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದವರು ತಮ್ಮ ಹಳೆಯ IFSC ಕೋಡ್ ಮತ್ತು ಚೆಕ್​ಬುಕ್​ಗಳನ್ನು ಬದಲಿಸಿಕೊಂಡ ನಂತರವೇ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ವ್ಯವಹಾರ ಮುಂದುವರಿಸಬೇಕಿದೆ. ಹೊಸ ಕೋಡ್ ಮತ್ತು ಚೆಕ್​ಬುಕ್ ಪಡೆಯಲು ಮಾರ್ಚ್ 31ರವರೆಗೆ ಸಮಯ ನೀಡಿದ್ದು, ಆ ನಂತರ ಹಳೆಯ ಕೋಡ್​ಗಳ ಮೂಲಕ ಹಣ ವರ್ಗಾಯಿಸಲು ಅಥವಾ ವ್ಯವಹಾರ ನಡೆಸಲು ಸಾಧ್ಯವಾಗದು ಎಂದು ಬ್ಯಾಂಕ್ ತಿಳಿಸಿದೆ.

ಬ್ಯಾಂಕ್​ಗಳ ವಿಲೀನದ ನಂತರ ಗ್ರಾಹಕರು ವಹಿಸಬೇಕಾದ ಮುಂಜಾಗ್ರತೆ ಕ್ರಮಗಳು *  ಬ್ಯಾಂಕ್​ಗಳ ವಿಲೀನವಾದಾಗ ಗ್ರಾಹಕರ ಅಕೌಂಟ್​ ನಂಬರ್ ಬದಲಾವಣೆಯಾಗುವ ಸಾಧ್ಯತೆ ಇರುತ್ತೆ. ಈ ಕುರಿತು ಬ್ಯಾಂಕ್​ಗಳಿಗೆ ತೆರಳಿ ಗ್ರಾಹಕರು ಮಾಹಿತಿ ಪಡೆಯಬೇಕು.

*  ಬ್ಯಾಂಕ್​ನ ಬ್ರಾಂಚ್​ಗಳ ಐಎಫ್​ಎಸ್​ಸಿ ಕೋಡ್ ಸಹ ಬದಲಾವಣೆಯಾಗುವ ಸಾಧ್ಯತೆಯಿರುತ್ತೆ.

*  ಚೆಕ್​ ಪುಸ್ತಕವನ್ನು ಬದಲಾಯಿಸಬೇಕು.

*  ಹಳೆಯ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಪಿನ್ ನಂಬರ್ ಬದಲಿಸಿಕೊಳ್ಳಬೇಕು. ಕಾರ್ಡ್​ ವಾಯಿದೆ ಅವಧಿಯವರೆಗೂ ಅದೇ ಕಾರ್ಡ್​ ಬಳಸಬಹುದು.

*  ಫಿಕ್ಸೆಡ್‌ ಡೆಪಾಸಿಟ್​ಗಳನ್ನು ಇಟ್ಟಿದ್ದರೆ ಇವನ್ನು ಹೊಸ ಬ್ಯಾಂಕ್‌ಗೆ ಬದಲಾಯಿಸಬೇಕಾಗುತ್ತದೆ.

ಇದನ್ನೂ ಓದಿ:ಕರ್ನಾಟಕದ ಬ್ಯಾಂಕ್​ಗಳ ವಿಲೀನವಾಯ್ತು;ಈಗ ಮಂಗಳೂರಿನ MRPL ಸರದಿ​.. ಯಾರಿಗೆ ಹಾನಿ? ಹೇಗೆ?

ಎಸ್​ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ

Follow us on

Most Read Stories

Click on your DTH Provider to Add TV9 Kannada