ಮೆಕ್ಕೆಜೋಳದ ನಡುವೆ ಬೆಳೆದಿದ್ದ ಗಾಂಜಾ ವಶ, ಯಾವೂರಲ್ಲಿ?

  • Updated On - 7:28 pm, Fri, 2 October 20 Edited By: sadhu srinath
ಮೆಕ್ಕೆಜೋಳದ ನಡುವೆ ಬೆಳೆದಿದ್ದ ಗಾಂಜಾ ವಶ, ಯಾವೂರಲ್ಲಿ?

ಬೆಂಗಳೂರು: ಹಿತ್ತಲಿನಲ್ಲಿ ಗಾಂಜಾ ಬೆಳಿದಿದ್ದ ಅರೋಪಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬೆಣಸಿನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಕೃಷ್ಣಪ್ಪನನ್ನ ದೊಡ್ಡಬೆಳವಂಗಲ ಪೋಲಿಸರು ಸೆರೆಹಿಡಿದಿದ್ದಾರೆ. ಬೇರೊಬ್ಬರಿಗೆ ಗಾಂಜಾ ಮಾರುತ್ತಿದ್ದ ವೇಳೆ ಕೃಷ್ಣಪ್ಪ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ 4 ಕೆ.ಜಿ ಗಾಂಜಾವನ್ನು ಸಹ ಜಪ್ತಿ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ಮೆಕ್ಕೆಜೋಳದ ನಡುವೆ..

ಇತ್ತ ಕೋಟೆನಾಡು ಚಿತ್ರದುರ್ಗದಲ್ಲಿ ಮೆಕ್ಕೆಜೋಳದ ನಡುವೆ ಬೆಳೆದಿದ್ದ 28 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಜಿಲ್ಲೆಯ ಹೊಳಲ್ಕೆರೆ ಬಳಿ ಹೊಲದಲ್ಲಿ ಬೆಳೆದಿದ್ದ ಗಾಂಜಾವನ್ನು ಜಪ್ತಿಮಾಡಲಾಗಿದೆ.

ಅಬಕಾರಿ ಉಪ ಅಧೀಕ್ಷಕ ಶಿವಹರಳಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಕಸ್ತೂರಪ್ಪ ಮತ್ತು ನರಸಿಂಹಪ್ಪಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನು ಜಪ್ತಿಮಾಡಲಾಗಿದೆ. ಸದ್ಯ ಗಾಂಜಾ ಬೆಳೆದಿದ್ದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.