World Record: ಏಕಕಾಲದಲ್ಲಿ ಎರಡೂ ಕೈಗಳಿಂದ ಬರೆಯೋದರಲ್ಲಿ ನಿಪುಣೆ ಈ ಚತುರೆ..
ರಜಿನಿಕಾಂತ್ ಸಿನಿಮಾಗಳು ಅಂದ್ರೆ ಯಾರಿಗೆತಾನೆ ಥ್ರಿಲ್ ಇರೋಲ್ಲ ಹೇಳಿ. ಅಂತಾ ಕಲಾಕಾರ ರಜಿನಿಕಾಂತ್! ಇನ್ನು ನಿಮಗೂ ರಜಿನಿಕಾಂತ್ ಅವರ ಮೂವಿಗಳಲ್ಲಿ ಬರುವ ಅದೊಂದು ಸೀನ್ ಗಮನ ಸೆಳೆದಿರುತ್ತೆ. ಅದು ರಜಿನಿ ತಮ್ಮ ಎರಡೂ ಕೈ ನಲ್ಲಿ ಬರೆಯೋದು. ಎರಡೂ ಕೈ ನಲ್ಲಿ, ಎರೆಡೆರಡು ಕಡೆ ಸಹಿ ಮಾಡೋದು. ಹೌದು ಇದು ರಜಿನಿಕಾಂತ್ ಅವರಿಗೆ ಅದೆಷ್ಟು ಕಷ್ಟವೊ ಸುಲಭವೊ ಗೊತ್ತಿಲ್ಲ. ಆದ್ರೆ ಕರಾವಳಿಯ ಬಾಲೆಯೊಬ್ಬಳು ತನ್ನ ಎರಡೂ ಕೈಗಳಲ್ಲಿ ಸುಲಲಿತವಾಗಿ ಬರೆಯುತ್ತಾರೆ. ಮೋಸ್ಟ್ ಟ್ಯಾಲೆಂಟೆಡ್ ಬಾಲೆ ಇದೀಗ, ವರ್ಲ್ಡ್ […]

ರಜಿನಿಕಾಂತ್ ಸಿನಿಮಾಗಳು ಅಂದ್ರೆ ಯಾರಿಗೆತಾನೆ ಥ್ರಿಲ್ ಇರೋಲ್ಲ ಹೇಳಿ. ಅಂತಾ ಕಲಾಕಾರ ರಜಿನಿಕಾಂತ್! ಇನ್ನು ನಿಮಗೂ ರಜಿನಿಕಾಂತ್ ಅವರ ಮೂವಿಗಳಲ್ಲಿ ಬರುವ ಅದೊಂದು ಸೀನ್ ಗಮನ ಸೆಳೆದಿರುತ್ತೆ. ಅದು ರಜಿನಿ ತಮ್ಮ ಎರಡೂ ಕೈ ನಲ್ಲಿ ಬರೆಯೋದು. ಎರಡೂ ಕೈ ನಲ್ಲಿ, ಎರೆಡೆರಡು ಕಡೆ ಸಹಿ ಮಾಡೋದು. ಹೌದು ಇದು ರಜಿನಿಕಾಂತ್ ಅವರಿಗೆ ಅದೆಷ್ಟು ಕಷ್ಟವೊ ಸುಲಭವೊ ಗೊತ್ತಿಲ್ಲ. ಆದ್ರೆ ಕರಾವಳಿಯ ಬಾಲೆಯೊಬ್ಬಳು ತನ್ನ ಎರಡೂ ಕೈಗಳಲ್ಲಿ ಸುಲಲಿತವಾಗಿ ಬರೆಯುತ್ತಾರೆ. ಮೋಸ್ಟ್ ಟ್ಯಾಲೆಂಟೆಡ್ ಬಾಲೆ ಇದೀಗ, ವರ್ಲ್ಡ್ ರೆಕಾರ್ಡ್ ಸನಿಹದಲ್ಲಿ ಇದ್ದಾಳೆ.
ಎರಡು ಕೈ ನಲ್ಲಿ ಬರೆದು ವರ್ಲ್ಡ್ ರೆಕಾರ್ಡ್ ಮಾಡಿದ ಪೋರಿ.. ಈಕೆ ತನ್ನ ಎರಡೂ ಕೈ ನಲ್ಲಿ ಬರೆದು ಈಗ ಎಕ್ಸ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಹಾಗೂ ಸುಂದರವಾಗಿ ಏಕ ಕಾಲದಲ್ಲಿ ಎರಡೂ ಕೈಗಳಿಂದ 10 ರೀತಿಯಲ್ಲಿ ಬರೆಯುವ ಮೂಲಕ, ಇದೀಗ ವಿಶ್ವ ದಾಖಲೆ ಮಾಡಿರುವ ಮಂಗಳೂರಿನ ಬಹುಮುಖ ಪ್ರತಿಭೆಯ ಆದಿ ಸ್ವರೂಪಾ ತಮ್ಮಲ್ಲಿನ ಈ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಎರಡೂ ಕೈನಿಂದ ಒಂದೇ ವಾಕ್ಯವನ್ನು ಬರೆಯುತ್ತಾಳೆ. ಎರಡೆರಡು ಕೆಡೆ ಬರೆಯುವುದು. ಮಿರರ್ ರಿಫ್ಲೆಕ್ಟ್ ಬರವಣಿಗೆ, ಒಂದು ಕೈಯಲ್ಲಿ ಇಂಗ್ಲೀಷ್, ಮತ್ತೊಂದು ಕೈಯಲ್ಲಿ ಕನ್ನಡ ಬರೆಯುತ್ತಾಳೆ. ಒಂದು ನಿಮಿಷಕ್ಕೆ 45 ಪದಗಳನ್ನು ಬರೆಯುವ ಸಾಮರ್ಥ್ಯವನ್ನೂ ಹೊಂದಿದ್ದಾಳೆ ಆದಿ ಸ್ವರೂಪಾ. ಕುತೂಹಲಕಾರಿ ಸಂಗತಿಯೆಂದ್ರೆ ಎರಡೂ ಕಡೆ.. ಬೇರೆ ಬೇರೆ ಸಬ್ಜೆಕ್ಟ್ ಕೂಡ ಬರೆಯಬಲ್ಲವಳಾಗಿದ್ದಾಳೆ.
ಎಡ ಬಲ ಮೆದುಳುಗಳನ್ನು ಪೂರ್ಣ ಏಕ ಕಾಲಕ್ಕೆ ಚುರುಕುಗೊಳಿಸಬಲ್ಲರು..
ಆದಿ, ಎರಡೂ ಕೈಗಳಲ್ಲಿ ಅತಿ ವೇಗದ ಬರಹಗಾರ್ತಿಯಾಗಿದ್ದಾರೆ. ಎಕ್ಸಕ್ಲೂಸಿವ್ ವಲ್ಡ್ ರೆಕಾರ್ಡ್ ಅನ್ನು ಸಹ ಮಾಡಿದ್ದಾಳೆ. ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಶನ್ ಸಂಸ್ಥೆ ಈ ರೆಕಾರ್ಡ್ ಘೋಷಣೆ ಮಾಡಿದೆ. ಇನ್ನೂ 10 ಶೈಲಿಗಳಲ್ಲಿ ಎರಡೂ ಕೈಗಳಲ್ಲಿ ಬರೆಯಬಲ್ಲ ಈಕೆ ಬಹುಮುಖ ಪ್ರತಿಭೆ. ಈಕೆಯ ತಂದೆ-ತಾಯಿ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಹಾಗೂ ಸುಮಾಡ್ಕರ್.
ಇನ್ನು, ತನ್ನ ಎರಡುವರೆ ವರ್ಷ ವಯಸ್ಸಿನಲ್ಲೆ ರಾಜ್ಯಾದಾದ್ಯಂತ ಶಿಕ್ಷಣ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಆದಿ 2019 ರ ತನಕ 1600 ಕ್ಕಿಂತ ಹೆಚ್ಚು ಜಾಥಾ ಕಾರ್ಯಕ್ರಮಗಳಲ್ಲಿ ವಿಶೇಷ ಪ್ರತಿಭಾ ಪ್ರದರ್ಶನವನ್ನು ನೀಡಿದ್ದಾಳೆ. ಕಲಿಸದೆ ಕಲಿಯುವ ಸ್ವರೂಪ ಶಿಕ್ಷಣ ಸ್ವಕಲಿಕಾ ವಿಧಾನದಂತೆ ಒಂದುವರೆ ವರ್ಷ ಪ್ರಾಯದಲ್ಲೆ ಓದಲು, ಎರಡುವರೆ ವರ್ಷ ಪ್ರಾಯದಲ್ಲಿ ದಿನಕ್ಕೆ 30 ಪುಟಗಳಷ್ಟು ಬರೆಯುತ್ತಿದ್ದ ಆದಿ ಎಂದೂ ಶಾಲೆಗೆ ಹೋಗದೆ ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿದ್ದಾಳೆ. ಸದ್ಯ ಇದೀಗ 10ನೇ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಎರಡೂ ಕೈಯಿಂದ ಬರೆಯಲು ಸಿದ್ಧಳಾಗಿದ್ದಾಳೆ.
ವಿವಿಧ ಕಲೆಗಳಲ್ಲಿ ನಿಪುಣೆ..
ಈಕೆ ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್ ಬಾಕ್ಸ್, ಕಲೆಯಲ್ಲೂ ನಿಪುಣೆ. ಇನ್ನೂ ವಿಶೇಷ ಅಂದ್ರೆ ಈಕೆ ಶಾಲೆಗೆ ಹೋಗುತ್ತಿಲ್ಲ. ಈಕೆಯ ತಂದೆಯೇ ಈಕೆಗೆ ಗುರು! ಅದ್ಭುತ ನೆನಪಿನ ಶಕ್ತಿಯ ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್ ಮುಂತಾದ ವಿಷಯಗಳನ್ನು ಅಭ್ಯಾಸ ಮಾಡುತ್ತಿದ್ದಾಳೆ. ಶಾಲೆಗೆ ಹೋಗದೇ ಹತ್ತನೆಯ ತರಗತಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾಳೆ. ಇನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಯತ್ನಿಸುತ್ತಿದ್ದಾಳೆ. ಇಂತಹ ಪ್ರತಿಭೆಯ ಕಣಜಕ್ಕೆ ಒಂದು ಆಲ್ ದ ಬೆಸ್ಟ್ ಹೇಳೋಣವಾ!?
-ಪೃಥ್ವಿರಾಜ್ ಬೊಮ್ಮನಕೆರೆ
Published On - 5:45 pm, Mon, 14 September 20