ಚರ್ಚ್ ಪಾದ್ರಿಯ ಜೊತೆ ಯುವತಿ ನಾಪತ್ತೆ : ವಿಡಿಯೋ ಮೂಲಕ ಸಿಕ್ತು ಬಿಗ್ ಟ್ವಿಸ್ಟ್

ಚರ್ಚ್ ಪಾದ್ರಿ (ಡಿ.16) ರಂದು ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ಠಾಣೆಗೆ ದೂರು ನೀಡಿದ್ದರು. ತಾನು ಇದ್ದ ಸ್ಥಳದಿಂದ ಯುವತಿ ಕಳುಹಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

  • TV9 Web Team
  • Published On - 10:48 AM, 29 Dec 2020
ಚರ್ಚ್ ಪಾದ್ರಿಯ ಜೊತೆ ಯುವತಿ ನಾಪತ್ತೆ : ವಿಡಿಯೋ ಮೂಲಕ ಸಿಕ್ತು ಬಿಗ್ ಟ್ವಿಸ್ಟ್

ಬಳ್ಳಾರಿ: ಚರ್ಚ್ ಪಾದ್ರಿಯ  ಜೊತೆ ಯುವತಿ ನಾಪತ್ತೆಯಾಗಿರುವ ಪ್ರಕರಣ ಡಿ. 16 ರಂದು ವರದಿಯಾಗಿತ್ತು. ಚರ್ಚ್​ ಪಾದ್ರಿ ತಮ್ಮ ಮಗಳನ್ನು (ಯುವತಿಯನ್ನು) ಕಿಡ್ನಾಪ್ ಮಾಡಿರುವುದಾಗಿ ಪೋಷಕರು ಠಾಣೆಗೆ ದೂರು ನೀಡಿದ್ದರು. ಇದೀಗ, ಯುವತಿ ಕಳುಹಿಸಿರುವ ವಿಡಿಯೋದಲ್ಲಿ ಯುವತಿ ತಾನು ರವಿಕುಮಾರ್ ( ಪಾದ್ರಿ) ಜೊತೆ ಸ್ವ ಇಚ್ಛೆಯಿಂದ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಳೆ.

ಯುವತಿ ಕಳುಹಿಸಿರುವ ವಿಡಿಯೋ ವೈರಲ್ ಆಗಿದ್ದು, ನಾನು ನನ್ನಿಷ್ಟದಂತೆ ಚರ್ಚ್​ ಪಾದ್ರಿ ರವಿಕುಮಾರ್ ಜೊತೆ ಬಂದಿದ್ದೇನೆ. ಇಬ್ಬರೂ ಸೇರಿ ಮದುವೆಯಾಗಿದ್ದೇವೆ. ರವಿ ಕುಮಾರ್​ಗೆ ನನ್ನ ಪೋಷಕರು ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ನಮಗೆ ರಕ್ಷಣೆ ನೀಡಿ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಾನು ಚರ್ಚ್​ಗೆ ಹೋಗುವುದು ಪೋಷಕರಿಗೆ ಇಷ್ಟವಿರಲಿಲ್ಲ. ಪೋಷಕರು ನನ್ನ ಮತ್ತು ರವಿಕುಮಾರ್ ಮಧ್ಯೆ ಸಂಬಂಧ ಕಲ್ಪಿಸಿದ್ದು. ಇದೀಗ, ರವಿಕುಮಾರ್ ನನ್ನನ್ನು ಕಿಡ್ನಾಪ್​ ಮಾಡಿರುವುದಾಗಿ ದೂರು ನೀಡಿದ್ದಾರೆ. ಪೋಷಕರು ಹೇಳಿರುವುದು ಸುಳ್ಳು. ನಾನು ಸ್ವ-ಇಚ್ಛೆಯಿಂದ ರವಿಕುಮಾರ್​ನೊಂದಿಗೆ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ.

ಬಾಮ್ಮ, ಪರೀಕ್ಷೆ ಬರೆಯಮ್ಮ.. ಆಮೇಲೆ ಅವನ ಜೊತೆಯೇ ಮದ್ವೆ ಮಾಡಿಸ್ತೀನಿ: ಅಪ್ಪನ ಕಣ್ಣೀರಧಾರೆ