Gold Silver Price: ಇಳಿಕೆಯತ್ತ ಮುಖ ಮಾಡಲಿದೆಯಾ ಚಿನ್ನದ ಬೆಲೆ, ಇಂದಿನ ದರ ಏನು?

Gold Silver Price: ಬಜೆಟ್ ಬಳಿಕ ಚಿನ್ನ ಬೆಳ್ಳಿ ದರ ಇಳಿಕೆಯತ್ತ ಮುಖಮಾಡಲಿದೆ ಎಂಬ ಅಭಿಪ್ರಾಯವಿದೆ. ಆಮದು ಸುಂಕ ಕಡಿತದಿಂದ ಈ ಬೆಳವಣಿಗೆ ಅಂದಾಜಿಸಲಾಗಿದೆ.

Gold Silver Price: ಇಳಿಕೆಯತ್ತ ಮುಖ ಮಾಡಲಿದೆಯಾ ಚಿನ್ನದ ಬೆಲೆ, ಇಂದಿನ ದರ ಏನು?
ಸಾಂದರ್ಭಿಕ ಚಿತ್ರ
TV9kannada Web Team

| Edited By: ganapathi bhat

Apr 06, 2022 | 8:22 PM

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಚಿನ್ನದ ದರ ಈ ಬಾರಿ ಅತಿ ಹೆಚ್ಚು ಏರಿಕೆ ಕಾಣುತ್ತಿತ್ತು. ಆದರೆ ನಿನ್ನೆ ಮತ್ತು ಇಂದು ಚಿನ್ನದ ಮೌಲ್ಯ ಇಳಿಕೆಯತ್ತ ಮುಖಮಾಡಿದೆ. ನಿನ್ನೆ (ಫೆ.1) ಹೋಲಿಸಿದರೆ ಇಂದಿನ ಚಿನ್ನದ ದರ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,490 ರೂ. ಆಗಿದೆ. ನಿನ್ನೆ 22-ಕ್ಯಾರೆಟ್ 10 ಗ್ರಾಂ ಚಿನ್ನದ ಮೊತ್ತ 45,500 ಆಗಿತ್ತು. 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಇಂದು 49,260 ರೂ. ಆಗಿದೆ. 10 ಗ್ರಾಂ ಬೆಳ್ಳಿ ದರ ಇಂದು 740 ರೂ. ಆಗಿದೆ. Gold Silver Price

ನಿನ್ನೆ (ಫೆ.1) ಮತ್ತು ಇಂದು (ಫೆ.2) ಚಿನ್ನದ ದರ ಕೊಂಚ ಇಳಿಕೆಯತ್ತ ಮುಖ ಮಾಡಿದೆ. ಜನವರಿ 30 ಮತ್ತು 31ರಂದು ಚಿನ್ನದ ಮೌಲ್ಯ ಏರಿಕೆಯಾಗಿತ್ತು. ಒಂದು ವಾರದ ಬೆಂಗಳೂರು ಚಿನ್ನದ ದರ ಲೆಕ್ಕಾಚಾರ ಗಮನಿಸಿದರೆ ಎರಡು ದಿನಗಳಿಗೊಮ್ಮೆ ಏರಿಕೆ, ಇಳಿಕೆ ಆಗುತ್ತಿರುವುದು ಕಂಡುಬರುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ 22 ಕ್ಯಾರೆಟ್ ಚಿನ್ನದ ದರ ರೂ. 190 ಹೆಚ್ಚಾಗಿದೆ. ಆ ಮೂಲಕ, 10 ಗ್ರಾಂ. ಚಿನ್ನದ ಬೆಲೆ 48,150 ರೂ. ಆಗಿದೆ. ಮುಂಬೈನಲ್ಲಿ ಚಿನ್ನದ ಮೊತ್ತ 48,450 ಆಗಿದೆ. ಚೆನ್ನೈನಲ್ಲಿ 24-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 50,450 ರೂ. ಆಗಿದೆ. ಭಾರತ ಚಿನ್ನ ಆಮದು ಮಾಡಿಕೊಳ್ಳುವ ಎರಡನೇ ಅತಿ ದೊಡ್ಡ ದೇಶವಾಗಿದೆ. ಅಬಕಾರಿ ಸುಂಕ, ರಾಜ್ಯ ತೆರಿಗೆ, ಹಾಗೂ ಮೇಕಿಂಗ್ ಚಾರ್ಜ್​ನಂತೆ ಚಿನ್ನಾಭರಣಗಳ ಬೆಲೆ ದೇಶಾದ್ಯಂತ, ವಿವಿಧ ಸ್ಥಳಗಳಲ್ಲಿ ಬದಲಾಗಿರುತ್ತದೆ.

ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕ ಕಡಿತಗೊಳಿಸಿದೆ. ಆಮದು ಸುಂಕವನ್ನು ಶೇ. 12.5ರಿಂದ 7.5ಕ್ಕೆ ಇಳಿಕೆ ಮಾಡಲಾಗಿದೆ. ಆದರೆ, ಶೇ. 2.5 ಕೃಷಿ ಸೆಸ್ ಹಾಕಲಾಗಿದೆ. ಈ ಬೆಳವಣಿಗೆಯಿಂದ ಮೊದಲಿನ ಶೇ. 12.5 ತೆರಿಗೆ ಮೊತ್ತವು ಶೇ. 10.75ಕ್ಕೆ ಇಳಿಕೆಯಾಗಿದೆ. ಹೀಗಾಗಿ ಚಿನ್ನದ ದರ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada