ಸಚಿವರೇ ತೀರ್ಮಾನಿಸಿ ರಾಜ್ಯದ ತೀರ್ಮಾನ ಅನ್ತಾರೆ..! ಸಚಿವ ಸುರೇಶ್​ಗೆ ಗೂಳಿಹಟ್ಟಿ ಟಾಂಗ್

  • TV9 Web Team
  • Published On - 11:11 AM, 29 Sep 2020
ಸಚಿವರೇ ತೀರ್ಮಾನಿಸಿ ರಾಜ್ಯದ ತೀರ್ಮಾನ ಅನ್ತಾರೆ..! ಸಚಿವ ಸುರೇಶ್​ಗೆ ಗೂಳಿಹಟ್ಟಿ ಟಾಂಗ್

ಚಿತ್ರದುರ್ಗ: ಮಹಾಮಾರಿ ಕೊರೊನಾದಿಂದಾಗಿ ರಾಜ್ಯದಲ್ಲಿ ಮುಚ್ಚಿದ ಶಾಲೆ ಬಾಗಿಲುಗಳು ತೆರೆದೇ ಇಲ್ಲ. ಈ ನಡುವೆ ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪ್ರಾಥಮಿಕ‌ ಮತ್ತು ಪ್ರೌಢ ಶಿಕ್ಷಣ ಸಚಿವರ ಹೇಳಿಕೆಗೆ ಗೂಳಿಹಟ್ಟಿ ಶೇಖರ್ ಟಾಂಗ್ ಕೊಟ್ಟಿದ್ದಾರೆ.

ಶಾಸಕರ ಅಭಿಪ್ರಾಯ ಸಂಗ್ರಹ ಕಣ್ಣೊರೆಸುವ ತಂತ್ರವಷ್ಟೇ. ಶಾಸಕರ ಸಲಹೆ ಸೂಚನೆಗಳನ್ನ ಅವರು ತೆಗೆದುಕೊಳ್ಳುವುದಿಲ್ಲ. ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅತ್ಯಂತ ಮೇಧಾವಿ. ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಮಾಡಿ ಇತಿಹಾಸ ಬರೆದಿದ್ದಾರೆ. ಶಾಸಕರಿಗೆ ಈ ಬಗ್ಗೆ ಏನೂ ಗೊತ್ತಿಲ್ಲ ಅಂದುಕೊಂಡಿದ್ದಾರೆ. ಸಚಿವರೇ ತೀರ್ಮಾನಿಸಿ ರಾಜ್ಯದ ತೀರ್ಮಾನ ಎನ್ನುತ್ತಾರೆ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಟಾಂಗ್ ಕೊಟ್ಟಿದ್ದಾರೆ.