ರಾಯಚೂರು: ಔಷಧ ಖರೀದಿ ಮಾಡಿದ ಜನರ ಮಾಹಿತಿ ನೀಡದಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 110 ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ರಾಜ್ಯ ಔಷಧ ನಿಯಂತ್ರಣ ಇಲಾಖೆಯಿಂದ ರಾಜ್ಯದ 110 ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ಮಾಡಿ ಆದೇಶ ಹೊರಡಿಸಿದೆ.
ಕೆಮ್ಮು, ನೆಗಡಿ, ಜ್ವರಕ್ಕೆ ಸಂಬಂಧಿಸಿದಂತೆ ಔಷಧ ಖರೀದಿಸಿದವರ ವಿವರ ದಾಖಲಿಸದ ಆರೋಪಕ್ಕೆ ಕಲಬುರಗಿ 70, ಬೆಂಗಳೂರು 3, ಬೀದರ್ 4, ಮೈಸೂರು 4, ವಿಜಯಪುರ 15, ರಾಯಚೂರು 9, ಬಾಗಲಕೋಟೆ 5 ಶಾಪ್ಗಳ ಲೈಸೆನ್ಸ್ ರದ್ದಾಗಿದೆ.