‘ನಾವು ಪಟಾಕಿ ಹೊಡೆಯುವವರಲ್ಲ, ಗುಂಡು ಹೊಡೆಯುವವರು’ ಪುಂಡರ ಸಂಭ್ರಮಾಚಾರಣೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ತಡರಾತ್ರಿ ಪುಂಡರ ಗುಂಪೊಂದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ‘ನಾವು ಪಟಾಕಿ ಹೊಡೆಯುವವರಲ್ಲ, ಗುಂಡು ಹೊಡೆಯುವವರು’ ಎಂದು ಮಚ್ಚೆ ಮಂಜ ಮತ್ತು ಸ್ನೇಹಿತರು ಕುಡಿದು ಕುಪ್ಪಳಿಸಿರುವುದನ್ನು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  • TV9 Web Team
  • Published On - 12:21 PM, 3 Jan 2021
‘ನಾವು ಪಟಾಕಿ ಹೊಡೆಯುವವರಲ್ಲ, ಗುಂಡು ಹೊಡೆಯುವವರು’ ಪುಂಡರ ಸಂಭ್ರಮಾಚಾರಣೆ
ಗುಂಡು ಹಾರಿಸಿ ಪುಂಡರಿಂದ ಹೊಸ ವರ್ಷಾಚರಣೆ

ಹಾಸನ: ಹೊಸ ವರ್ಷಾಚರಣೆ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿಯಲ್ಲಿ ನಡೆದಿದೆ. ಹೊಸ ವರ್ಷಾಚರಣೆ ನೆಪದಲ್ಲಿ ಪುಂಡರ ಗುಂಪೊಂದು ದುಂಡಾವರ್ತನೆ ತೋರಿದೆ. ಸದ್ಯ ಈಗ ಪುಂಡರು ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರ ತಡರಾತ್ರಿ ಪುಂಡರ ಗುಂಪೊಂದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ‘ನಾವು ಪಟಾಕಿ ಹೊಡೆಯುವವರಲ್ಲ, ಗುಂಡು ಹೊಡೆಯುವವರು’ ಎಂದು ಮಚ್ಚೆ ಮಂಜ ಮತ್ತು ಸ್ನೇಹಿತರು ಕುಡಿದು ಕುಪ್ಪಳಿಸಿರುವುದನ್ನು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್ನು ಗಾ.ಪಂ ಚುನಾವಣೆ ಫಲಿತಾಂಶದ ನಂತರ ಎದುರಾಳಿ ತಂಡಕ್ಕೆ ಬೆದರಿಕೆ ರೀತಿ ಈ ವಿಡಿಯೋ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.

ವೈರಲ್ ಆದ ಸೆಲ್ಫಿ ವಿಡಿಯೋದಲ್ಲಿ ಮಚ್ಚೆ ಮಂಜ ಮತ್ತು ಸ್ನೇಹಿತರು ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಕಿಡಿಗೇಡಿಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇವರ ಈ ಪುಂಡಾಟಕ್ಕೆ ಆದಷ್ಟು ಬೇಗ ಕಡಿವಾಣ ಹಾಕಬೇಕಿದೆ.

ಶಿರಾಡಿಘಾಟ್‌ನಲ್ಲಿ 23 ಕಿಲೋಮೀಟರ್ ಸುರಂಗ ಮಾರ್ಗ; ಕೇಂದ್ರದಿಂದ ಸಿಕ್ತು ಗ್ರೀನ್ ಸಿಗ್ನಲ್..