ನನ್ನ ಸ್ನೇಹಿತ ನನ್ನನ್ನು ಅಗಲಿ ಹೋಗಿದ್ದಾರೆ.. ಇದು ರಾಜಕಾರಣದ ಕೊಲೆ: ಭಾವುಕರಾದ ಹೆಚ್.ಡಿ. ಕುಮಾರಸ್ವಾಮಿ

ನನ್ನ ಸ್ನೇಹಿತ ಇಂದು ನನ್ನನ್ನು ಅಗಲಿ ಹೋಗಿದ್ದಾರೆ. ಇದು ರಾಜಕಾರಣದ ಕೊಲೆ ಎಂದು ಹೇಳಲು ಬಯಸುತ್ತೇನೆ. ಇಂತಹ ಘಟನೆ ಸಹಿಸುವುದಕ್ಕೆ ಆಗುವುದಿಲ್ಲ. ಧರ್ಮೇಗೌಡ ನನ್ನ ಒಡಹುಟ್ಟಿದ ಸಹೋದರನಂತೆ ಇದ್ದರು. ಧರ್ಮೇಗೌಡ ತಂದೆ ಲಕ್ಷ್ಮಯ್ಯ ಒಂದು ಮಾತು ಹೇಳಿದ್ರು ನಾನಂತೂ ಮಂತ್ರಿಯಾಗಲು ಆಗಲಿಲ್ಲ. -HDK

  • Publish Date - 10:32 am, Tue, 29 December 20 Edited By: sadhu srinath
ನನ್ನ ಸ್ನೇಹಿತ ನನ್ನನ್ನು ಅಗಲಿ ಹೋಗಿದ್ದಾರೆ.. ಇದು ರಾಜಕಾರಣದ ಕೊಲೆ: ಭಾವುಕರಾದ ಹೆಚ್.ಡಿ. ಕುಮಾರಸ್ವಾಮಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರೈಲ್ವೆ ಹಳಿಗೆ ತಲೆಕೊಟ್ಟು ಪರಿಷತ್ ಉಪಸಭಾಪತಿ S.L. ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿನ ಸುದ್ದಿ ರಾಜ್ಯ ರಾಜಕೀಯದಲ್ಲಿ ಸೂತಕದ ಛಾಯೆ ಮೂಡಿಸಿದೆ. ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಧರ್ಮೇಗೌಡರೊಂದಿಗೆ ಆತ್ಮೀಯ ಭಾಂದ್ಯವ್ಯ ಹೊಂದಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ಸ್ನೇಹಿತನ ಸಾವಿಗೆ ಕಣ್ಣೀರು ಹಾಕಿದ್ದಾರೆ.

ನನ್ನ ಸ್ನೇಹಿತ ಇಂದು ನನ್ನನ್ನು ಅಗಲಿ ಹೋಗಿದ್ದಾರೆ. ಇದು ರಾಜಕಾರಣದ ಕೊಲೆ ಎಂದು ಹೇಳುವೆ. ಇಂತಹ ಘಟನೆ ಸಹಿಸುವುದಕ್ಕೆ ಆಗುವುದಿಲ್ಲ. ಧರ್ಮೇಗೌಡ ನನ್ನ ಒಡಹುಟ್ಟಿದ ಸಹೋದರನಂತೆ ಇದ್ದರು. ಧರ್ಮೇಗೌಡ ತಂದೆ ಲಕ್ಷ್ಮಯ್ಯ ಒಂದು ಮಾತು ನನಗೆ ಹೇಳಿದ್ದರು.. ನಾನಂತೂ ಮಂತ್ರಿ ಆಗಲಿಲ್ಲ. ನಾನು ಬದುಕಿರುವಾಗಲೇ ನನ್ನ ಪುತ್ರ (ಧರ್ಮೇಗೌಡ) ಮಂತ್ರಿ ಆಗಬೇಕೆಂದಿದ್ದರು.

ಆದರೆ ಅವರ ಆಸೆ ಈಡೇರಿಸಲು ಆಗಲಿಲ್ಲ. ಸಿದ್ದರಾಮಯ್ಯ ಜತೆ ಕಾಂಗ್ರೆಸ್‌ಗೆ ಹೋಗಲು ನಿರ್ಧರಿಸಿದ್ದರು. ಆ ವೇಳೆ HDK ಬೇಕಾ, MLA ಸ್ಥಾನ ಬೇಕಾ ಎಂದು ನಾನು ಕೇಳಿದ್ದೆ. ಈ ಮಾತಿಗೆ ಅವರು ತನ್ನ ನಿರ್ಧಾರವನ್ನು ಬದಲಿಸಿದ್ದರು ಎಂದು ಅಂದಿನ ಘಟನೆ ಮೆಲುಕು ಹಾಕಿ ಹೆಚ್‌ಡಿಕೆ ಭಾವುಕರಾದ್ರು.

ಧರ್ಮೇಗೌಡ ಆತ್ಮಹತ್ಯೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿ ಟಿ ರವಿ ಹೇಳಿದ್ದೇನು?