ಬಂದೂಕಿನಿಂದ ಸಿಗರೇಟ್ ಹಚ್ಚಿದಕ್ಕೆ ರಾಕಿಂಗ್ ಸ್ಟಾರ್ ಯಶ್​ಗೆ ನೋಟಿಸ್.. ಸೀನ್ ಕತ್ತರಿಸುವಂತೆ ಸೂಚನೆ

ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ಸೀನ್‌ ಜನರನ್ನು ಮೋಡಿ ಮಾಡಿತ್ತು. ಈಗ ಅದೇ ಸೀನ್​ನಿಂದಾಗಿ ರಾಕಿಂಗ್ ಸ್ಟಾರ್ ಯಶ್​ಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಕೆಜಿಎಫ್-2 ಟೀಸರ್​ನಲ್ಲಿ ಸಿಗರೇಟ್ ಸೇದುವ ದೃಶ್ಯಕ್ಕೆ ಕತ್ತರಿ ಹಾಕಲು ಸೂಚನೆ ನೀಡಿದೆ.

  • TV9 Web Team
  • Published On - 9:33 AM, 13 Jan 2021
ಬಂದೂಕಿನಿಂದ ಸಿಗರೇಟ್ ಹಚ್ಚಿದಕ್ಕೆ ರಾಕಿಂಗ್ ಸ್ಟಾರ್ ಯಶ್​ಗೆ ನೋಟಿಸ್.. ಸೀನ್ ಕತ್ತರಿಸುವಂತೆ ಸೂಚನೆ
ಯಶ್​

ಬೆಂಗಳೂರು: ಸ್ಯಾಂಡಲ್​ವುಡ್ ನ ಕೆಜಿಎಫ್-2 ಸಿನಿಮಾದ ಟೀಸರ್, ರಣಬೇಟೆಗಾರ ರಾಕಿಭಾಯ್ ಅವತಾರ ಮಾಡ್ತಿರೋ ಮೋಡಿಗೆ ಇಡೀ ಸಿನಿಮಾ ಇಂಡಸ್ಟ್ರಿ ಬೆಕ್ಕಸ ಬೆರಗಾಗಿದೆ. ಅದರಲ್ಲೂ ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ಸೀನ್‌ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಆದ್ರೆ ಈಗ ಅದೇ ಸೀನ್ ಯಶ್​ಗೆ ಕಂಟಕವಾಗಿದೆ.

ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ಸೀನ್‌ ಜನರನ್ನು ಮೋಡಿ ಮಾಡಿತ್ತು. ಈಗ ಅದೇ ಸೀನ್​ನಿಂದಾಗಿ ರಾಕಿಂಗ್ ಸ್ಟಾರ್ ಯಶ್​ಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಕೆಜಿಎಫ್-2 ಟೀಸರ್​ನಲ್ಲಿ ಸಿಗರೇಟ್ ಸೇದುವ ದೃಶ್ಯಕ್ಕೆ ಕತ್ತರಿ ಹಾಕಲು ಸೂಚನೆ ನೀಡಿದೆ.

ಇದು ಯುವ ಸಮುದಾಯವನ್ನ ಸಿಗರೇಟ್ ಸೇದುವಂತೆ ಪ್ರಚೋದಿಸುತ್ತದೆ. ಅಲ್ಲದೇ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ. ಲಕ್ಷಾಂತರ ಜನ ಯುವ ಅಭಿಮಾನಿಗಳನ್ನ ನೀವು ಹೊಂದಿದ್ದೀರಾ ಹಾಗೂ ಆ ಯುವ ಸಮುದಾಯ ನಿಮ್ಮನ್ನ ಅನುಸರಿಸುತ್ತದೆ. ಯುವ ಸಮುದಾಯ ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಇರುವ ಟೀಸರ್​ನಲ್ಲಿ ಸಿಗರೇಟ್ ಸೇದುವ ದೃಶ್ಯ ತೆಗೆಯಿರಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಕೆಜಿಎಫ್​-2 ಟೀಸರ್​ ಲೀಕ್​ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ- ಯಶ್​