ಹೃದಯ ಸಂಬಂಧಿ ರೋಗದಿಂದ ಜನ ಹೆಚ್ಚು ಸಾವನ್ನಪ್ಪುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ

ಹೃದಯ ಸಂಬಂಧಿ ರೊಗವು ಕಳೆದ 20 ವರ್ಷಗಳಿಗಿಂತ ವಿಶ್ವದಾದ್ಯಂತ ಹೆಚ್ಚಾಗಿದೆ. ನ್ಯುಮೋನಿಯ, ಕ್ಷಯರೋಗ, ಏಡ್ಸ್, ಮಲೇರಿಯಾ ರೋಗವೂ ಕೂಡಾ ಜನರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದು

ಹೃದಯ ಸಂಬಂಧಿ ರೋಗದಿಂದ ಜನ ಹೆಚ್ಚು ಸಾವನ್ನಪ್ಪುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ
ಹೃದಯ ಸಂಬಂಧಿ ರೋಗಗಳು ಹೆಚ್ಚುತ್ತಿವೆ
shruti hegde

|

Dec 11, 2020 | 1:11 PM

ಕಳೆದ 20 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಹೃದಯ ಸಂಬಂಧಿ ರೋಗವು ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಹಿಂದೆಗಿಂತಲೂ ಈಗ ಹೆಚ್ಚು ಜನರನ್ನು ಕೊಲ್ಲುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿದೆ.

ಹೃದಯ ಸಂಬಂಧಿ ರೋಗವು ಜನರನ್ನು ಹೆಚ್ಚು ಕೊಲ್ಲುತ್ತಿದೆ. ಕಳೆದ 20 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಹೃದಯಕ್ಕೆ ಸಂಬಂಧಿತ ರೋಗಗಳು ಜನರಲ್ಲಿ ಕಂಡು ಬರುತ್ತಿದ್ದವು. ಈಗ ಹಿಂದೆಂದಿಗಿಂತಲೂ, ಹೆಚ್ಚು ಜನರು ಹೃದಯ ಸಂಬಂಧಿತ ಖಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಹೃದಯ ಸಂಬಂಧಿ ಖಾಯಿಲೆಯಿಂದ ಸಾವನ್ನಪ್ಪಿದ ಜನರ ಸಂಖ್ಯೆ:

ಹೃದಯ ಸಂಬಂಧಿ ಖಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 2019ರ ವೇಳೆಗೆ 4 ದಶಲಕ್ಷಕ್ಕೆ ಏರಿದೆ. ಜೊತೆಗೆ, ಮಧುಮೇಹ ಮತ್ತು ಬುದ್ಧಿಮಾಂದ್ಯತೆಯೂ ವಿಶ್ವದ ಸಾವಿನ ಸಂಖ್ಯೆಯಲ್ಲಿ ಪ್ರಮುಖವಾಗಿದೆ.

ಮಧುಮೇಹದಿಂದ ಬಳಲುತ್ತಿರುವವರಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ:

2000 ಮತ್ತು 2019 ರ ಅವಧಿಯಲ್ಲಿ ವಿಶ್ವದಲ್ಲಿ  ಮಧುಮೇಹದಿಂದ ಸತ್ತವರ ಸಂಖ್ಯೆ ಜಾಗತಿಕವಾಗಿ ಶೇ. 70 ರಷ್ಟು ಏರಿಕೆಯಾಗಿದೆ. ಸಾವಿಗೀಡಾದವರಲ್ಲಿ ಶೇ. 80 ರಷ್ಟು ಪುರುಷರಾಗಿದ್ದಾರೆ.

ಇನ್ನೊಂದು ಖಾಯಿಲೆ ಅಲ್ಜೈಮರ್ ಮಹಿಳೆಯರಿಗೆ ಹೆಚ್ಚು ಬಾಧಿಸುತ್ತಿದೆ. ಜಾಗತಿಕವಾಗಿ, ಅಲ್ಜೈಮರ್ ಮತ್ತು ಬುದ್ಧಿಮಾಂದ್ಯತೆಯಿಂದ ಸಾವನ್ನಪ್ಪುವವರಲ್ಲಿ ಶೇ. 65 ರಷ್ಟು ಮಹಿಳೆಯರು ಎಂದು ತಿಳಿಸಿದೆ.

ಉಸಿರಾಟ ಸಮಸ್ಯೆಯೂ ಜನರ ಸಾವಿಗೆ ಕಾರಣ:

ಉಸಿರಾಟ ಸಮಸ್ಯೆಯೂ ಕೂಡಾ ಜನರನ್ನು ಹೆಚ್ಚು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಒಂದು. ಕಳೆದ 2 ದಶಕಗಳಲ್ಲಿ ಉಸಿರಾಟ ಸಂಬಂಧಿತ ಖಾಯಿಲೆಗಳಿಂದ ಜನರು ನೊಂದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವಲ್ಲಿ ಜಾಗತಿಕ ಗಮನ ಹರಿಸಬೇಕು. ಹೃದಯ ಸಂಬಂಧಿ ರೋಗ ಮಾತ್ರವಲ್ಲದೇ ನ್ಯುಮೋನಿಯಾ, ಏಡ್ಸ್, ಕ್ಷಯ ರೋಗ ಸೇರಿದಂತೆ ಮಲೇರಿಯಾದಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂದು WHO ಹೇಳಿದೆ.

ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ನಾವು ಬೇಗ ಗಮನಹರಿಸಬೇಕು ಎಂದು WHO ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಹೃದಯ ಸುರಕ್ಷಿತವಾಗಿರಬೇಕಿದ್ದರೆ ವೀಡ್, ಗಾಂಜಾದಿಂದ ಗಾವುದ ದೂರವಿರಿ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada